ಜಗತ್ತಿಗೆ ಹಿಂದೂ ಧರ್ಮದಿಂದ ಆಗಿಲ್ಲ ತೊಂದರೆ

ಚಿತ್ರದುರ್ಗದಲ್ಲಿ ಭಾನುವಾರ ಹಿಂದು ಸಂಗಮ ಕಾರ್ಯಕ್ರಮದ ಅಂಗವಾಗಿ ಆಯೋಜಿಸಿದ್ದ ಶೋಭಾಯಾತ್ರೆಯಲ್ಲಿ ಮಾಜಿ ಶಾಸಕ ಎಸ್.ಕೆ. ಬಸವರಾಜನ್, ಎಂಎಲ್‌ಸಿ ಕೆ.ಎಸ್. ನವೀನ್, ಜಿಪಂ ಮಾಜಿ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್, ಕೋಗುಂಡೆ ದ್ಯಾಮಣ್ಣ, ಚಾಲುಕ್ಯ ನವೀನ್ ಇತರರು ಇದ್ದರು.
ಚಿತ್ರದುರ್ಗದಲ್ಲಿ ಭಾನುವಾರ ಹಿಂದು ಸಂಗಮ ಕಾರ್ಯಕ್ರಮದ ಅಂಗವಾಗಿ ಆಯೋಜಿಸಿದ್ದ ಶೋಭಾಯಾತ್ರೆಯಲ್ಲಿ ಮಾಜಿ ಶಾಸಕ ಎಸ್.ಕೆ. ಬಸವರಾಜನ್, ಎಂಎಲ್‌ಸಿ ಕೆ.ಎಸ್. ನವೀನ್, ಜಿಪಂ ಮಾಜಿ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್, ಕೋಗುಂಡೆ ದ್ಯಾಮಣ್ಣ, ಚಾಲುಕ್ಯ ನವೀನ್ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಆರ್‌ಎಸ್‌ಎಸ್ ಪ್ರಮುಖ ಪಟ್ಟಾಭಿರಾಮ್ ಅಭಿಮತ
  • ಹಿಂದೂ ಸಂಗಮ ಕಾರ್ಯಕ್ರಮ
  • ಹಿಂದೂ ಧರ್ಮ ಒಳ್ಳೆಯದ್ದನ್ನೇ ಬಯಸುತ್ತಾ ಬಂದಿದೆ.
ಚಿತ್ರದುರ್ಗ: ಜಾತಿ ವ್ಯವಸ್ಥೆ, ಅಸ್ಪÈಶ್ಯತೆ ಹೋಗಲಾಡಿಸಿ ಹಿಂದೂಗಳು ಸಂಘಟಿತರಾದಾಗ ಅಖಂಡ ಭಾರತ ನಿರ್ಮಾಣ ಸಾಧ್ಯ ಎಂದು ರಾಷ್ಟಿçÃಯ ಸ್ವಯಂ ಸೇವಕ ಸಂಘದ ಕರ್ನಾಟಕ ದಕ್ಷಿಣ ಪ್ರಾಂತ ಸಹ ಕಾರ್ಯವಾಹ ಪಟ್ಟಾಭಿರಾಮ್ ಹೇಳಿದರು.
ಹಿಂದೂ ಸಂಗಮ ಆಯೋಜನ ಸಮಿತಿಯಿಂದ ಮೇದೇಹಳ್ಳಿ ರಸ್ತೆಯ ಶ್ರೀ ಅಯ್ಯಪ್ಪಸ್ವಾಮಿ ದೇವಾಲಯ ಬಳಿ ಭಾನುವಾರ ಆಯೋಜಿಸಿದ್ದ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದರು.
ಇಡೀ ಜಗತ್ತಿಗೆ ಹಿಂದೂ ಧರ್ಮ ಒಳ್ಳೆಯದ್ದನ್ನೇ ಬಯಸುತ್ತಾ ಬಂದಿದೆ. ಜಗತ್ತಿಗೆ ಅನ್ಯ ಧರ್ಮಗಳಿಂದ ತೊಂದರೆ ಆಗಿದೆಯೇ ಹೊರತು ಹಿಂದೂ ಧರ್ಮದಿಂದಲ್ಲ. ಗಂಡಾAತರ ಎದುರಾದಾಗ ಪ್ರತಿರೋಧ ವ್ಯಕ್ತಪಡಿಸುವ ಮನೋಭಾವವನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕಿದೆ ಎಂದು ಸಲಹೆ ನೀಡಿದರು.
ನಮ್ಮ ಧರ್ಮ, ಸಂಸ್ಕೃತಿ, ಸಂಪ್ರದಾಯಗಳನ್ನು ಮರೆಯದೆ ಪಾಲಿಸಬೇಕು. ಇತಿಹಾಸವನ್ನರಿತು ದೇಶದ ರಕ್ಷಣೆಗೆ ಒಗ್ಗೂಡಬೇಕು. ಜಗತ್ತಿಗೆ ಒಳಿತನ್ನು ಮಾಡುವುದು ಭಾರತದ ಉದ್ದೇಶ. ಆದ್ದರಿಂದ ಭಾರತದಲ್ಲಿ ಹಿಂದೂ ಧರ್ಮದ ರಕ್ಷಣೆಯಾಗಬೇಕು. ಸಮಾಜ ಶಕ್ತಿಯುತವಾಗಬೇಕು ಎಂದರು.
ಈ ಸಮಾಜ ಹೋರಾಟದಿಂದ ಉಳಿದಿದೆ. ಶಿವಾಜಿ ಮಹಾರಾಜರಂಥ ಅನೇಕ ವೀರರು ಇದರ ರಕ್ಷಣೆಗಾಗಿ ಹೋರಾಡಿದ್ದಾರೆ. ಅದ ರಂತೆ ಪ್ರತಿಯೊಬ್ಬರೂ ಸಶಕ್ತ ಹಿಂದೂ ಆಗಬೇಕು. ಭಾರತ ಮಾತೃ ಪ್ರಧಾನ ದೇಶ. ಇಲ್ಲಿ ಹೆಣ್ಣನ್ನು ಗೌರವಿಸಲಾಗುತ್ತದೆ. ದೇಶದ ಸಂಸ್ಕೃತಿಯಲ್ಲಿ ಪ್ರಕೃತಿ, ನದಿ, ದೇವತೆಗಳಿಗೆ ತಾಯಿ ಸ್ಥಾನ ನೀಡಲಾಗಿದೆ. ಪಾಲಕರು ಮಕ್ಕಳನ್ನು ಗುಣವಂತ, ಸಂಸ್ಕಾರಯುತ ಪ್ರಜೆಗಳನ್ನಾಗಿ ಬೆಳೆಸಬೇಕು. ದೇಶದಲ್ಲಿ ನಾನಾ ಜಾತಿ, ಧರ್ಮಗಳಿದ್ದರೂ ಏಕತೆ ಸಾಽಸಬೇಕಿದೆ ಎಂದು ತಿಳಿಸಿದರು.
ಸಾನ್ನಿಧ್ಯವಹಿಸಿದ್ದ ಕುಂಬಾರ ಗುಂಡಯ್ಯ ಮಹಾ ಸಂಸ್ಥಾನದ ಶ್ರೀ ಬಸವಮೂರ್ತಿ ಕುಂಬಾರ ಗುಂಡಯ್ಯ ಸ್ವಾಮೀಜಿ ಮಾತನಾಡಿ, ಹಿಂದೂ ಎಂಬುದು ಸ್ವಾಭಿಮಾನದ ವಿಷಯ ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದಾರೆ. ನಾವು ಹಿಂದೂ ಎಂದು ಹೇಳಿಕೊಳ್ಳ ಲು ಸಂಕೋಚಬೇಡ. ಸನಾತನ ಧರ್ಮದ ಬಗ್ಗೆ ತಿಳಿಯಬೇಕು. ಸಹಬಾಳ್ವೆ ನಮ್ಮದಾಗಬೇಕು. ಭಾರತ ವಿಶ್ವಕ್ಕೆ ಕೊಟ್ಟ ಶ್ರೇಷ್ಠ ಕೊಡುಗೆ ಧ್ಯಾನ. ಇದರ ಮೂಲಕ ನಾವು ಜೀವನವನ್ನು ಶ್ರೇಷ್ಠವಾಗಿಸಿಕೊಳ್ಳಬೇಕು ಎಂದು ತಿಳಿಸಿದರು.
ಸಮಿತಿ ಅಧ್ಯಕ್ಷ ಚಾಲುಕ್ಯ ನವೀನ್ ಅಧ್ಯಕ್ಷತೆ ವಹಿಸಿದ್ದರು. ಡಾ.ಆಶ್ವಿನಿ ನಟರಾಜ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಂಎಲ್‌ ಸಿ ಕೆ. ಎಸ್.ನವೀನ್, ಮಾಜಿ ಶಾಸಕ ಎಸ್.ಕೆ. ಬಸವರಾಜನ್, ಜಿಪಂ ಮಾಜಿ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್, ಕೋಗುಂಡೆ ದ್ಯಾಮಣ್ಣ, ನಗರಸಭೆ ಮಾಜಿ ಅಧ್ಯಕ್ಷೆ ಸುನೀತಾ ಮಲ್ಲಿಕಾರ್ಜನ್, ಸಂಪತ್‌ಕುಮಾರ್, ಓಂಕಾರ್, ಜಿ.ಎಂ. ಸುರೇಶ್, ದೇವರಾಜ್‌ ಕೋಟ್ಲ ಇತರರು ಇದ್ದರು.
ಶಿವಾಜಿ, ಕಿತ್ತೂರು ರಾಣಿ ಚನ್ನಮ್ಮ, ರಾಣಿಅಬ್ಬಕ್ಕ, ಒನಕೆ ಓಬವ್ವ, ವಿವೇಕಾನಂದ, ಅಕ್ಕಮಹಾದೇವಿ, ಸುಭಾಷ್ ಚಂದ್ರಬೋಸ್, ಡಾ.ಬಿ.ಆರ್. ಅಂಬೇಡ್ಕರ್ ಸೇರಿದಂತೆ ನಾನಾ ದಾರ್ಶನಿಕರ ವೇಷ ಭೂಷಣಗಳೊಂದಿಗೆ ಮಕ್ಕಳು ಕಂಗೊಳಿಸಿದರು. ವಿದ್ಯಾ ನಗರದ ಅಂಜನೇಯ ದೇವಾಲಯದಿಂದ ವೇದಿಕೆವರೆಗೆ ಜರುಗಿದ ಭಾರತಮಾತೆ ಭಾವಚಿತ್ರ, ಗೋಮಾತೆ ಪ್ರತಿಕೃತಿಯ ಶೋಭಾಯಾತ್ರೆಯಲ್ಲಿ ಪ್ರಮುಖರು, ಹಿಂದೂ ಕಾರ್ಯಕರ್ತರು ಪಾಲ್ಗೊಂಡಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net