ಜನರನ್ನು ವ್ಯಸನಗಳಿಂದ ಮುಕ್ತಗೊಳಿಸುವ ಕಾರ್ಯ ಶ್ಲಾಘನೀಯ Camp

ಕೊಂಡ್ಲಹಳ್ಳಿಯ ಸಾಲೇಶ್ವರ ಸಮುದಾಯಭವನದಲ್ಲಿ ಆಯೋಜಿಸಿರುವ ಮದ್ಯವರ್ಜನ ಶಿಬಿರಕ್ಕೆ ಮೊಳಕಾಲ್ಮೂರು ಸಿಪಿಐ ಆರ್. ನಾಗರಾಜ್ ದೀಪ ಬೆಳೆಗಿಸಿ ಚಾಲನೆ ನೀಡಿದರು. ಪ್ರವೀಣ್‌ಕುಮಾರ್, ನಾಗರಾಜ್ ಕುಲಾಲ್, ಟಿ.ತಿಪ್ಪೇಸ್ವಾಮಿ, ಆರ್. ರಾಮರೆಡ್ಡಿ, ಕೆ.ಟಿ. ಶ್ರೀರಾಮರೆಡ್ಡಿ, ನಾಗಭೂಷಣ್, ಕೆ.ಜೆ. ಜಯಲಕ್ಷ್ಮೀ, ಕೆ.ಎಚ್. ಸುರೇಶ್, ರಾಘವೇಂದ್ರನಾಯ್ಕ ಇದ್ದರು. Camp
ಕೊಂಡ್ಲಹಳ್ಳಿಯ ಸಾಲೇಶ್ವರ ಸಮುದಾಯಭವನದಲ್ಲಿ ಆಯೋಜಿಸಿರುವ ಮದ್ಯವರ್ಜನ ಶಿಬಿರಕ್ಕೆ ಮೊಳಕಾಲ್ಮೂರು ಸಿಪಿಐ ಆರ್. ನಾಗರಾಜ್ ದೀಪ ಬೆಳೆಗಿಸಿ ಚಾಲನೆ ನೀಡಿದರು. ಪ್ರವೀಣ್‌ಕುಮಾರ್, ನಾಗರಾಜ್ ಕುಲಾಲ್, ಟಿ.ತಿಪ್ಪೇಸ್ವಾಮಿ, ಆರ್. ರಾಮರೆಡ್ಡಿ, ಕೆ.ಟಿ. ಶ್ರೀರಾಮರೆಡ್ಡಿ, ನಾಗಭೂಷಣ್, ಕೆ.ಜೆ. ಜಯಲಕ್ಷ್ಮೀ, ಕೆ.ಎಚ್. ಸುರೇಶ್, ರಾಘವೇಂದ್ರನಾಯ್ಕ ಇದ್ದರು. Camp
Published on

ಪ್ರಮುಖ ಮುಖ್ಯಾಂಶಗಳು

  • ಸಿಪಿಐ ಆರ್. ನಾಗರಾಜ್ ಅನಿಸಿಕೆ
  • ಕೊಂಡ್ಲಹಳ್ಳಿಯಲ್ಲಿ 2084 ನೇ ಮದ್ಯವರ್ಜನ ಶಿಬಿರಕ್ಕೆ ಚಾಲನೆ
ಕೊಂಡ್ಲಹಳ್ಳಿ: ಮದ್ಯವರ್ಜನ ಶಿಬಿರಗಳ ಮೂಲಕ ಜನರನ್ನು ವ್ಯಸನಮುಕ್ತಗೊಳಿಸಿ ಮುಖ್ಯವಾಹಿನಿಗೆ ಕರೆತರುತ್ತಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಯೋಜನೆ ಕೆಲಸ ಮಾದರಿಯಾಗಿದೆ ಎಂದು ಸಿಪಿಐ ಆರ್. ನಾಗರಾಜ್ ಹೇಳಿದರು. Camp
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಇವುಗಳ ಸಹಯೋಗದಲ್ಲಿ ಕೊಂಡ್ಲಹಳ್ಳಿಯ ಸಾಲೇಶ್ವರ ದೇವಸ್ಥಾನದ ಸಮುದಾಯ ಭವನದಲ್ಲಿ ಶನಿವಾರ ಆರಂಭವಾದ 2084 ನೇ ಮದ್ಯವರ್ಜನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು. ಸಮಾಜ, ಸಮುದಾಯವನ್ನು ಪರಿವರ್ತನೆ ಮಾಡುವಂತಹ ಶಿಬಿರದ ಸದುಪಯೋಗ ಪಡೆದು ದುಶ್ಚಟಗಳಿಂದ ಮುಕ್ತರಾಗಬೇಕು ಎಂದು ತಿಳಿಸಿದರು.
ಜಿಲ್ಲಾ ನಿರ್ದೇಶಕ ಪ್ರವೀಣ ಕುಮಾರ್ ಮಾತನಾಡಿ, ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರಹೆಗ್ಗಡೆಯವರು 1992ರಲ್ಲಿ ಜನಜಾಗೃತಿ ವೇದಿಕೆ ಮೂಲಕ ನಾಡಿನಾದ್ಯಂತ ಮದ್ಯ, ದುಶ್ಚಟಗಳ ವ್ಯಸನ ಕುರಿತು ಜನರಲ್ಲಿ 45 ವರ್ಷಗಳಿಂದ ಜಾಗೃತಿ ಮೂಡಿಸುತ್ತಿದ್ದಾರೆ. ಇದರಿಂದ 1.30 ಲಕ್ಷ ಕಾರ್ಯಕರ್ತರು ಮದ್ಯವ್ಯಸನದಿಂದ ಮುಕ್ತರಾಗಿ ಸುಂದರ ಬದುಕು ಕಟ್ಟಿಕೊಂಡಿದ್ದಾರೆ ಎಂದರು.
ಮದ್ಯ ವರ್ಜನ ಶಿಬಿರಗಳಿಂದ ಸಮಾಜದ ಕಟ್ಟಕಡೆ ವ್ಯಕ್ತಿಯೂ ಆರ್ಥಿಕ ಸಂಕಷ್ಟದಿಂದ ಪಾರಾಗಲು ಸಾಧ್ಯವಾಗುತ್ತಿದೆ ಎಂದರು.
ಬಿ.ಜಿ. ಕೆರೆ ನಾಗಭೂಷಣ್ ಮಾತನಾಡಿ, ಮದ್ಯವ್ಯಸನ, ದುಶ್ಚನಗಳಿಂದ ಮುಕ್ತರನ್ನಾಗಿಸುವ ಈ ಕಾರ್ಯಕ್ರಮ ಕನಾರ್ಟಕದ ಇತಿಹಾಸದಲ್ಲೇ ಹೆಗ್ಗುರುತಾಗಿದೆ ಎಂದರು.
ಸಾಮಾಜಿಕ ಕಾರ್ಯಕರ್ತೆ ಕೆ.ಜೆ. ಜಯಲಕ್ಷ್ಮೀ ಮಾತನಾಡಿ, ಮದ್ಯವ್ಯಸನದಿಂದ ಕುಟುಂಬಗಳು ಹಲವು ರೀತಿಯಲ್ಲಿ ಪಡಿಪಾಟಲು ಪಡುವುದನ್ನು ನೋಡುತ್ತೇವೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಗ್ರಾಮೀಣ ಪ್ರದೇಶಗಳಲ್ಲಿ ಮದ್ಯವರ್ಜನ ಶಿಬಿರ ನಡೆಸುತ್ತಿರುವುದು ಅತ್ಯುತ್ತಮ ಕಾರ್ಯವಾಗಿದೆ ಎಂದರು.
ಧರ್ಮಸ್ಥಳ ಸಂಸ್ಥ ಪ್ರಾದೇಶಿಕ ನಿರ್ದೇಶಕ ನಾಗರಾಜ್ ಕುಲಾಲ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಉಪನ್ಯಾಸಕ ಕೆ.ಎಚ್. ಸುರೇಶ್, ಸಹಕಾರ ರತ್ನ ಆರ್. ರಾಮರೆಡ್ಡಿ ಮಾತನಾಡಿದರು.ಟಿ.ತಿಪ್ಪೇಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಪ್ರವೀಣ್‌ಕುಮಾರ್,ನಿವೃತ್ತ ಶಿಕ್ಷಕ ಎನ್. ಅಪ್ಪಳ್ಳಿ, ಚಂದ್ರಶೇಖರ್‌ಗೌಡ್ರು, ಆರ್. ರಾಮರೆಡ್ಡಿ, ಕೆ.ಟಿ. ಶ್ರೀರಾಮರೆಡ್ಡಿ, ಲತೀಫ್‌ಸಾಬ್, ಎಚ್.ಎಂ. ತಿಪ್ಪೇಸ್ವಾಮಿ, ಎಸ್.ಪಿ. ಕಲ್ಲೇಶ್ವರಪ್ಪ,ದಿವಾಕರ್ ಪೂಜಾರಿ, ತುಷಾರ, ಬಿ.ಟಿ. ಮೃತ್ಯುಂಜಯ, ರಾಘವೇಂದ್ರ ನಾಯ್ಕ, ಸಂತೋಷ್‌ಕುಮಾರ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net