ಚಿತ್ರದುರ್ಗದ ಮುರುಘಾಮಠದಲ್ಲಿ ಮಂಗಳವಾರ ಆಯೋಜಿಸಿದ್ದ ಶಿವಶರಣ ಬಿಬ್ಬಿ ಬಾಚಯ್ಯ ಜಯಂತ್ಯುತ್ಸವದಲ್ಲಿ ಶ್ರೀ ಬಸವ ಮಹಾಂತ ಸ್ವಾಮೀಜಿ, ಶ್ರೀ ಶಾಂತವೀರ ಗುರು ಮುರುಘರಾಜೇಂದ್ರ ಸ್ವಾಮೀಜಿ, ಬಸವ ಮುರುಘೇಂದ್ರ ಸ್ವಾಮೀಜಿ, ಡಾ. ಬಸವಚೇತನ ಸ್ವಾಮೀಜಿ, ಡಾ.ರೂಪೇಶ್‌ಕುಮಾರ್ ಇತರರು ಇದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಶ್ರೀ ಬಸವಮಹಾಂತ ಸ್ವಾಮೀಜಿ ಅನಿಸಿಕೆ
ಮುರುಘಾ ಮಠದಲ್ಲಿ ಶಿವಶರಣ ಬಿಬ್ಬಿ ಬಾಚಯ್ಯ ಜಯಂತಿ ಆಚರಣೆ
ಅನ್ನಕ್ಕೆ ಚೈತನ್ಯ ನೀಡುವ ಶಕ್ತಿ
ಚಿತ್ರದುರ್ಗ: ಯಾವುದನ್ನಾದರೂ ನಕಲು ಮಾಡಬಹುದು. ಆದರೆ ರೈತರ ಬೆವರಿನ ಪ್ರತೀಕವಾದ ಅನ್ನವನ್ನು ನಕಲು ಮಾಡಲು ಸಾಧ್ಯವಾಗದು ಎಂದು ಶಿರಸಂಗಿ ಮಹಾಲಿಂಗೇಶ್ವರ ಮಠದ ಶ್ರೀ ಬಸವಮಹಾಂತ ಸ್ವಾಮೀಜಿ ಹೇಳಿದರು.
ಮುರುಘಾಮಠದಲ್ಲಿ ಮಂಗಳವಾರ ಶಿವಶರಣ ಬಿಬ್ಬಿ ಬಾಚಯ್ಯ ಅವರ ಜಯಂತ್ಯುತ್ಸವದಲ್ಲಿ ಸಮ್ಮುಖ ವಹಿಸಿ ಮಾತನಾಡಿ, ಅನ್ನದೇವರ ಮುಂದೆ ಇನ್ನು ದೇವರುಂಟೆ ಎನ್ನುವಂತೆ ಅನ್ನಕ್ಕೆ ಚೈತನ್ಯ ನೀಡುವ ಶಕ್ತಿ ಇದೆ. ರೈತ ಬೆಳೆದು ನಾಡಿನ ಜನರಿಗೆ ನೀಡುತ್ತಾನೆ. ಅನ್ನ ವ್ಯರ್ಥ ಮಾಡದೆ ರೈತರ ಶ್ರಮ ಗೌರವಿಸಬೇಕೆಂಬ ಸಂದೇಶವನ್ನು ಬಿಬ್ಬಿ ಬಾಚಯ್ಯ ಅವರು ಸಾರಿದ್ದಾರೆ ಎಂದರು.
ಬಾಚಯ್ಯ ಅವರ ಕುರಿತು ವಿಷಯಾವಲೋಕನ ಮಾಡಿದ ದಾವಣಗೆರೆ ವಿವಿ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಆರ್. ರೂಪೇಶ್‌ಕುಮಾರ್, ಬಸವಣ್ಣನವರ ದಾಸೋಹದ ಮಹಾಕಾರ್ಯಕ್ಕೆ ಸೋತು, ಪ್ರಸಾದ ಹಂಚುವ ಕಾಯಕದಲ್ಲಿ ನಿರತರಾಗಿದ್ದರು ಎಂದು ತಿಳಿಸಿದರು.
ಗುರುಮಠಕಲ್ ಖಾಸಾಮಠದ ಶ್ರೀ ಶಾಂತವೀರ ಗುರುಮುರುಘರಾಜೇಂದ್ರ ಸ್ವಾಮೀಜಿ, ಮುರುಘಾಮಠದ ಬಸವ ಮುರುಘೇಂದ್ರ ಸ್ವಾಮೀಜಿ, ಡಾ. ಬಸವಚೇತನ ಸ್ವಾಮೀಜಿ, ಸವಿತಾ ಶ್ರೀನಿವಾಸ್, ಜಿ.ಟಿ. ನಂದೀಶ್, ಬಸವರಾಜಕಟ್ಟಿ, ನಾಗರಾಜ ಸಂಗಮ್, ಆರ್.ಎಸ್. ಜಯಪ್ರಕಾಶ್, ಕೃಷ್ಣಶಾಸ್ತಿç, ಜೆ.ಎಸ್. ಮುರುಘೇಶ್ ಇತರರು ಇದ್ದರು.
ಜಮುರಾ ಕಲಾವಿದ ಉಮೇಶ್‌ಪತ್ತಾರ್ ಬಿಬ್ಬಿಬಾಚಯ್ಯನವರ ವಚನ ಹಾಡಿದರು. ಶಿಕ್ಷಕರಾದ ಪಿ. ಶ್ರೀಧರ್ ಸ್ವಾಗತಿಸಿ, ವಿ. ಕೊಟ್ರಮ್ಮ ವಂದಿಸಿದರು. ಎನ್. ನಿರ್ಮಲಾ ನಿರೂಪಿಸಿದರು.