ರೈತರ ಮೇಲಿನ ಗುಂಡಿನದಾಳಿ ಖಂಡನೀಯ

ಹನೂರು ತಾಲೂಕಿನ ಅರಣ್ಯ ಪ್ರದೇಶದಲ್ಲಿ ನಡೆದ ರೈತರ ಹತ್ಯೆ ಖಂಡಿಸಿ ಹೊಳಲ್ಕೆರೆ ತಾಲೂಕು ರೈತ ಸಂಘ ಪ್ರತಿಭಟನೆ ನಡೆಸಿ ಉಪ ತಹಸೀಲ್ದಾರ್ ಆರ್. ಅಶೋಕ್‌ಗೆ ಮನವಿ ಸಲ್ಲಿಸಿತು. ರಂಗಸ್ವಾಮಿ, ಜಯಪ್ಪ, ಪ್ರಸನ್ನ, ಮಹದೇವಪ್ಪ ಇತರರು ಇದ್ದರು.
ಹನೂರು ತಾಲೂಕಿನ ಅರಣ್ಯ ಪ್ರದೇಶದಲ್ಲಿ ನಡೆದ ರೈತರ ಹತ್ಯೆ ಖಂಡಿಸಿ ಹೊಳಲ್ಕೆರೆ ತಾಲೂಕು ರೈತ ಸಂಘ ಪ್ರತಿಭಟನೆ ನಡೆಸಿ ಉಪ ತಹಸೀಲ್ದಾರ್ ಆರ್. ಅಶೋಕ್‌ಗೆ ಮನವಿ ಸಲ್ಲಿಸಿತು. ರಂಗಸ್ವಾಮಿ, ಜಯಪ್ಪ, ಪ್ರಸನ್ನ, ಮಹದೇವಪ್ಪ ಇತರರು ಇದ್ದರು.
Published on

ಹೊಳಲ್ಕೆರೆ:

ಹನೂರು ತಾಲೂಕಿನ ಅರಣ್ಯ ಪ್ರದೇಶದಲ್ಲಿ ಇಲಾಖೆ ಸಿಬ್ಬಂದಿ ಮೂವರು ರೈತರನ್ನು ಗುಂಡಿಟ್ಟು ಕೊಂದು, ಒಬ್ಬರನ್ನು ಗಾಯಗೊಳಿಸಿರುವ ಕೃತ್ಯ ಖಂಡಿಸಿ ತಾಲೂಕು ರೈತ ಸಂಘ ಹಾಗೂ ಹಸಿರು ಸೇನೆ ಪದಾಽಕಾರಿಗಳು ಸೋಮವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ಉಪ ತಹಸೀಲ್ದಾರ್ ಆರ್. ಅಶೋಕ್ ಅವರಿಗೆ ಮನವಿ ಸಲ್ಲಿಸಿದರು.

ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಾಧ್ಯಕ್ಷ ಈಚಘಟ್ಟ ಸಿದ್ದವೀರಪ್ಪ ಮಾತನಾಡಿ, ದೇಶದ ಗಡಿ ಕಾಯುವ ಸೈನಿಕರು ಸಹ ಶತ್ರುಗಳ ಮೇಲೆ ಗುಂಡು ಹಾರಿಸಲು ಹತ್ತಾರು ಬಾರಿ ಯೋಚಿಸಿ ನಿರ್ಧಾರ ಕೈಗೊಳ್ಳುತ್ತಾರೆ. ಆದರೆ, ಗೋಲಿಬಾರ್ ನಿಯಮ ವನ್ನೇ ಅರಿಯದ ಅರಣ್ಯ ಸಿಬ್ಬಂದಿ ಸ್ವಾತಂತ್ರ‍್ಯೋತ್ಸವದAದು ರೈತರ ಮೇಲೆ ಗುಂಡು ಹಾರಿಸಿ ಕೊಲೆಗೈದಿದ್ದಾರೆ.

ಕೃತ್ಯ ಎಸಗಿದ ಸಿಬ್ಬಂದಿಯನ್ನು ತಕ್ಷಣವೇ ಅಮಾನತ್ತುಗೊಳಿಸಿ ಕಾನೂನು ಕ್ರಮ ಜರುಗಿಸಬೇಕು. ಹತ್ಯೆಯಾದವರ ಕುಟುಂಬಕ್ಕೆ ತಲಾ ೫೦ ಲಕ್ಷ ರೂ. ಪರಿಹಾರ, ಪ್ರತಿ ಕುಟುಂಬದ ಒಬ್ಬರಿಗೆ ಸರ್ಕಾರಿ ನೌಕರಿ ನೀಡಬೇಕು ಎಂದು ಒತ್ತಾಯಿಸಿದರು.

ಪ್ರಭಾವಿಗಳು ರಾಜ್ಯದ ಅರಣ್ಯ ಪ್ರದೇಶ ಲೂಟಿ ಹೊಡೆಯುತ್ತಿದ್ದು, ಅವರ ವಿರುದ್ಧ ಕ್ರಮ ಜರುಗಿಸಲು ಸಾಧ್ಯವಾಗಿಲ್ಲ ಎಂದು ಆರೋಪಿಸಿದರು.

ರೈತರೊಂದಿಗೆ ಅಮಾನುಷವಾಗಿ ನಡೆದುಕೊಂಡವರ ವಿರುದ್ಧ ಸರ್ಕಾರ ಸೂಕ್ತ ಕಾನೂನು ಕೈಗೊಳ್ಳಬೇಕು. ಪಾರದರ್ಶಕ ತನಿಖೆಯಾಗಬೇಕು ಎಂದು ಒತ್ತಾಯಿಸಿ ದರು.

ಸಂಘದ ತಾಲೂಕು ಅಧ್ಯಕ್ಷ ರಂಗಸ್ವಾಮಿ, ಸಂಘದ ಜಿಲ್ಲಾ ಘಟಕದ ಸದಸ್ಯ ಜಯಪ್ಪ, ಜಿಲ್ಲಾ ಸಂಚಾಲಕ ಪ್ರಸನ್ನ, ರೈತ ಮು ಖಂಡರಾದ ಮಹದೇವಪ್ಪ, ರಂಗಸ್ವಾಮಿ, ಚಂದ್ರಮೌಳಿ ಆಚಾರ್ಯ, ಸದಾಶಿವಪ್ಪ, ಬಿ. ನಾಗರಾಜಚಾರ್, ದಾನವೇಂದ್ರ, ಸದಾಶಿವಪ್ಪ ಇತರರು ಇದ್ದರು.

ಶಾಸಕ ಸ್ಥಾನದಿಂದ ಎನ್‌ವೈಜಿ ವಜಾಕ್ಕೆ ಆಗ್ರಹ

ಚಿತ್ರದುರ್ಗ: ಜಿ¯್ಲೆಯ ಬರಪೀಡಿತ ಪ್ರದೇಶ ಮೊಳಕಾಲ್ಮೂರು ತಾಲೂಕನ್ನು ಆಂಧ್ರಕ್ಕೆ ಸೇರಿಸುವಂತೆ ಹೇಳಿಕೆ ನೀಡಿರುವ ಎನ್.ವೈ. ಗೋಪಾಲಕೃಷ್ಣ ಅವರನ್ನು ಶಾಸಕ ಸ್ಥಾನದಿಂದ ವಜಾಗೊಳಿಸುವಂತೆ ಬಂಜಾರ ಲಂಬಾಣಿ ಸಮಾಜ, ಯುವ ಕರ್ನಾಟಕ ವೇದಿಕೆ ಕಾರ್ಯಕರ್ತರು ಪ್ರತ್ಯೇಕವಾಗಿ ಸೋಮವಾರ ಪ್ರತಿಭಟನೆ ನಡೆಸಿದರು.
ಐದಾರು ಬಾರಿ ಶಾಸಕರಾದರೂ ಎನ್‌ವೈಜಿ ಅವರಿಗೆ ತಾವು ಪ್ರತಿನಿಽಸುವ ಕ್ಷೇತ್ರದ ಕುರಿತು ಅಭಿಮಾನ, ಗೌರವವಿಲ್ಲ. ಸರ್ಕಾರ ಕೂಡಲೇ ಅವರನ್ನು ಗಡಿಪಾರು ಮಾಡಬೇಕು. ರಾಜ್ಯದ ಗಡಿ ಭಾಗಗಳ ಶಾಸಕರು ಈ ರೀತಿ ಹೇಳಿಕೆ ನೀಡದಂತೆ ಸಿಎಂ ಕಟ್ಟುನಿಟ್ಟಾಗಿ ನಿರ್ದೇಶಿಸುವಂತೆ ಒತ್ತಾಯಿಸಿ ಎಸಿ ಡಾ.ಕೆ.ಜೆ. ಕಾಂತರಾಜ್ ಅವರಿಗೆ ಮನವಿ ಸಲ್ಲಿಸಿದರು.

ಡಿ.ಆರ್. ಗಿರೀಶ್, ಮಂಜುನಾಯ್ಕ್, ಚೇತನ್‌ ನಾಯ್ಕ್, ಹಾಲೇಶ್, ರವಿನಾಯ್ಕ್, ಯಶವಂತ್, ಪರಮೇಶ್‌ನಾಯ್ಕ್, ಶಿವನಾಯ್ಕ್, ರಮೇಶ್‌ನಾಯ್ಕ್ ಇತರರು ಇದ್ದರು.

ವೇದಿಕೆ ಅಧ್ಯಕ್ಷ ರವಿಕುಮಾರ್ ನಾಯ್ಕ್, ಪದಾಽಕಾರಿಗಳಾದ ಓಬಣ್ಣ, ನವೀನ್, ಸಚಿನ್, ಸಿದ್ದೇಶ್, ಮಣಿಕಂಠ, ಮಂಜುನಾಥ್, ನಾಗರಾಜ್, ರೇಣುಕೇಶ್, ಅಣ್ಣಪ್ಪ, ರಘುನಾಥ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net