ಅಸಮಾನತೆ ಹೋಗಲಾಡಿಸಿದ ಕ್ರಾಂತಿ ಪುರುಷ

ಚಿತ್ರದುರ್ಗದಲ್ಲಿ ಮಂಗಳವಾರ ಜಿಲ್ಲಾಡಳಿತ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿಯಲ್ಲಿ ಕೆ.ಸಿ. ವೀರೇಂದ್ರಪಪ್ಪಿ, ಎಂ.ಕೆ. ತಾಜ್‌ಪೀರ್, ರಾಜಕುಮಾರ್, ಟಿ. ವೆಂಕಟೇಶ್, ಡಾ.ಎಸ್. ಆಕಾಶ್, ರಂಜಿತ್‌ಕುಮಾರ್ ಬಂಡಾರು, ಗ್ಯಾರಂಟಿ ಅನುಷ್ಠಾನ ಸಮಿತಿ ಜಿ¯್ಲÁಧ್ಯಕ್ಷ ಆರ್. ಶಿವಣ್ಣ, ಉಪಾಧ್ಯಕ್ಷ ಡಿ.ಎನ್. ಮೈಲಾರಪ್ಪ ಇತರರಿದ್ದರು.
ಚಿತ್ರದುರ್ಗದಲ್ಲಿ ಮಂಗಳವಾರ ಜಿಲ್ಲಾಡಳಿತ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿಯಲ್ಲಿ ಕೆ.ಸಿ. ವೀರೇಂದ್ರಪಪ್ಪಿ, ಎಂ.ಕೆ. ತಾಜ್‌ಪೀರ್, ರಾಜಕುಮಾರ್, ಟಿ. ವೆಂಕಟೇಶ್, ಡಾ.ಎಸ್. ಆಕಾಶ್, ರಂಜಿತ್‌ಕುಮಾರ್ ಬಂಡಾರು, ಗ್ಯಾರಂಟಿ ಅನುಷ್ಠಾನ ಸಮಿತಿ ಜಿ¯್ಲÁಧ್ಯಕ್ಷ ಆರ್. ಶಿವಣ್ಣ, ಉಪಾಧ್ಯಕ್ಷ ಡಿ.ಎನ್. ಮೈಲಾರಪ್ಪ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ವೀರೇಂದ್ರಪಪ್ಪಿ ಬಣ್ಣನೆ
  • ಡಾ.ಬಿ.ಆರ್. ಅಂಬೇಡ್ಕರ್ ಜಯಂತಿಯಲ್ಲಿ ಸಾಧಕರಿಗೆ ಸನ್ಮಾನ
  • ಸಾಮಾಜಿಕ ಸಮಾನತೆ
ಚಿತ್ರದುರ್ಗ: ದೇಶದೊಳಗಿದ್ದ ಅಸಮಾನತೆಯ ಮನಸ್ಥಿತಿ ಹೋಗಲಾಡಿಸಿದ ಕ್ರಾಂತಿ ಪುರುಷ ಡಾ.ಬಿ.ಆರ್. ಅಂಬೇಡ್ಕರ್ ಎಂದು ಶಾಸಕ ಕೆ.ಸಿ. ವೀರೇಂದ್ರಪಪ್ಪಿ ಬಣ್ಣಿಸಿದರು.
ಮಹರ್ಷಿ ವಾಲ್ಮೀಕಿ ಭವನದಲ್ಲಿ ಜಿ¯್ಲÁಡಳಿತ, ಜಿಪಂ, ಸಮಾಜ ಕಲ್ಯಾಣ ಇಲಾಖೆ, ನಗರಸಭೆ ಮಂಗಳವಾರ ಆಯೋಜಿಸಿದ್ದ ಡಾ.ಬಿ.ಆರ್. ಅಂಬೇಡ್ಕರ್ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿದರು.
ಅಂಬೇಡ್ಕರ್ ಶಿಕ್ಷಣವೇ ಪ್ರಮುಖ ಅಸ್ತವೆಂದು ಪ್ರತಿಪಾದಿಸಿದರು. ಪುರುಷ, ಮಹಿಳೆಯರಿಗೆ ಸಮಾನವಾಗಿ ಸಿಗಬೇಕೆಂಬುದು ಅವರ ಆಶಯವಾಗಿತ್ತು. ಅವರ ಪ್ರತಿ ಹೆಜ್ಜೆಯಲ್ಲೂ ಕ್ರಾಂತಿಕಾರಿ ನಡೆ ಇತ್ತು. ಹೀಗಾಗಿ ದೇಶದ ಮಹಾನ್ ನಾಯಕರಾಗಿz್ದÁರೆ ಎಂದು ಸ್ಮರಿಸಿದರು.
ಅಂಬೇಡ್ಕರ್ ಸಂವಿಧಾನ ಕೊಡುವುದರ ಜತೆಗೆ ದೇಶದ ನೀರಾವರಿಗೆ ಮುನ್ನೋಟ ಒದಗಿಸಿದರು. ನದಿ ಜೋಡಣೆಯ ಪರಿಕಲ್ಪನೆ ಮೊಟ್ಟಮೊದಲ ಬಾರಿ ಪ್ರತಿಪಾದಿಸಿ, ಜಲಸಂಪನ್ಮೂಲಗಳ ಅಭಿವೃದ್ಧಿಗೆ ಉತ್ತಮ ಅಡಿಪಾಯ ಹಾಕುವ ಮೂಲಕ ಭಾರತೀಯ ಜಲ ನೀತಿಯ ಪಿತಾಮಹರಾಗಿದ್ದಾರೆ ಎಂದು ಬಣ್ಣಿಸಿದರು.
ಸರ್ಕಾರದ ಸ್ವಯಂ ಉದ್ಯೋಗ ನೇರ ಸಾಲ, ಉದ್ಯಮಶೀಲತೆ, ಸ್ವಾವಲಂಬಿ ಸಾರಥಿ ಹಾಗೂ ಗಂಗಾ ಕಲ್ಯಾಣ ಯೋಜನೆ ಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಕೂಡಾ ಅಧ್ಯಕ್ಷ ಎಂ.ಕೆ. ತಾಜ್‌ಪೀರ್ ಮಾತನಾಡಿ, ಭಾರತದಂತಹ ವೈವಿಧ್ಯಮಯ ರಾಷ್ಟçದಲ್ಲಿ ಸರ್ವ ಧರ್ಮೀಯರು ಸಮಾನತೆಯಿಂದ ಬಾಳಲು ಸಂವಿಧಾನ ಅತಿದೊಡ್ಡ ಶಕ್ತಿಯಾಗಿದೆ ಎಂದು ಹೇಳಿದರು.
ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲೂ ಪುರುಷರಿಗೆ ಸಮವಾಗಿ ಬೆಳೆಯಲು ಬಾಬಾ ಸಾಹೇಬರ ಸಂವಿಧಾನ ಕಾರಣ. ದೇಶದ ಏಕತೆ ಮತ್ತು ಒಗ್ಗಟ್ಟನ್ನು ಕಾಪಾಡಲು ಕೂಡ ಸಹಕಾರಿಯಾಗಿದೆ. ಸೂರ್ಯ-ಚಂದ್ರ ಇರುವವರೆಗೂ ಸಂವಿಧಾನ ಅಜರಾಮರವಾಗಿರಲಿದೆ ಎಂದು ಆಶಿಸಿದರು.
ಸಹ ಪ್ರಾಧ್ಯಾಪಕ ಡಾ.ಕೆ.ಆರ್.ಜೆ. ರಾಜಕುಮಾರ್ ಮಾತನಾಡಿ, ದೇಶದಲ್ಲಿ ಆರ್ಥಿಕ ಮತ್ತು ಸಾಮಾಜಿಕ ಸಮಾನತೆ ನೆಲೆಸದ ಹೊರತು ನಮಗೆ ಸಿಕ್ಕಿರುವ ರಾಜಕೀಯ ಸ್ವಾತಂತ್ರ‍್ಯಕ್ಕೆ ಪೂರ್ಣ ಅರ್ಥ ಸಿಗದು. ಅದಕ್ಕಾಗಿ ಸಂವಿಧಾನದ ಆಶಯಗಳು ಈಡೇರಬೇಕಿದೆ ಎಂದು ಅಭಿಪ್ರಾಯಪಟ್ಟರು.
ಇದೇ ವೇಳೆ ಜಿ¯್ಲÁಮಟ್ಟದ ಸಾಧಕರಿಗೆ ಡಾ.ಬಿ.ಆರ್. ಅಂಬೇಡ್ಕರ್, ಡಾ. ಬಾಬು ಜಗಜೀವನ್ ರಾಮï ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು. ಎಸ್ಸೆಸ್ಸೆಲ್ಸಿ,ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಡಿಸಿ ಟಿ. ವೆಂಕಟೇಶ್, ಜಿಪಂ ಸಿಇಒ ಡಾ.ಎಸ್. ಆಕಾಶ್, ಎಸ್ಪಿ ರಂಜಿತ್‌ಕುಮಾರ್ ಬಂಡಾರು, ಗ್ಯಾರಂಟಿ ಅನುಷ್ಠಾನ ಸಮಿತಿ ಜಿ¯್ಲÁಧ್ಯಕ್ಷ ಆರ್. ಶಿವಣ್ಣ, ಉಪಾಧ್ಯಕ್ಷ ಡಿ.ಎನ್. ಮೈಲಾರಪ್ಪ, ಎಡಿಸಿ ಬಿ.ಟಿ. ಕುಮಾರಸ್ವಾಮಿ, ಎಎಸ್ಪಿ ಡಾ.ಆರ್. ಶಿವಕುಮಾರ್, ಜಿಪಂ ಉಪಕಾರ್ಯದರ್ಶಿ ಡಾ. ರಂಗಸ್ವಾಮಿ, ಎಸಿ ಡಾ.ಕೆ.ಜೆ. ಕಾಂತರಾಜ್, ತಹಸೀಲ್ದಾರ್ ಗೋವಿಂದರಾಜ್, ನಗರಸಭೆ ಪೌರಾಯುಕ್ತೆ ಎಸ್. ಲಕ್ಷಿ÷್ಮÃ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಬಿ. ಮಲ್ಲಿಕಾರ್ಜುನ, ಸಹಾಯಕ ನಿರ್ದೇಶಕ ಪರಮೇಶ್ವರಪ್ಪ ಇತರರು ಇದ್ದರು.
ಅಂಬೇಡ್ಕರ್ ಭಾವಚಿತ್ರ ಮೆರವಣಿಗೆ ಅದ್ದೂರಿ
ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ೧೩೫ನೇ ಜನ್ಮ ದಿನಾಚರಣೆ ಅಂಗವಾಗಿ ನಗರದಲ್ಲಿ ಮಂಗಳವಾರ ಬಾಬಾ ಸಾಹೇಬರ ಭಾವಚಿತ್ರದ ಮೆರವಣಿಗೆ ಅದ್ದೂರಿಯಾಗಿ ನಡೆಯಿತು.
ಕೋಟೆ ಮುಂಭಾಗ ಜಿ¯್ಲÁಽಕಾರಿ ಟಿ. ವೆಂಕಟೇಶ್ ಪುಷ್ಪನಮನ ಸಲ್ಲಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು. ನಂತರ ಆನೆಬಾಗಿಲು, ಮಹಾತ್ಮ ಗಾಂಽ, ಕಿತ್ತೂರು ರಾಣಿ ಚನ್ನಮ್ಮ, ಮಹಾವೀರ, ಅಂಬೇಡ್ಕರ್, ಮದಕರಿನಾಯಕ ವೃತ್ತ ಮಾರ್ಗವಾಗಿ ಮಹರ್ಷಿ ವಾಲ್ಮೀಕಿ ಭವನ ತಲುಪಿತು.
ಮೆರವಣಿಗೆಯಲ್ಲಿ ಸ್ತಬ್ದಚಿತ್ರಗಳು, ನಾಸಿಕ್ ಡೋಲï, ತ್ರ‍್ಯಾಷ್, ಡೋಲï ಒಳಗೊಂಡು ಜಾನಪದ ಕಲಾತಂಡಗಳು ಗಮನ ಸೆಳೆದ ವು. ಅಂಬೇಡ್ಕರ್ ಅವರು ಸಂವಿಧಾನ ರಚನಾ ಸಭೆಯ ಅಧ್ಯಕ್ಷ ಡಾ.ಬಾಬು ರಾಜೇಂದ್ರ ಪ್ರಸಾದ್ ಅವರಿಗೆ ಸಂವಿಧಾನ ಪ್ರತಿ ಹಸ್ತಾಂತರಿಸುವ ಸ್ತಬ್ದಚಿತ್ರ ಆಕರ್ಷಿಸಿತು.
ಸಮಾಜ ಕಲ್ಯಾಣ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಸೇರಿ ವಿವಿಧ ಅಭಿವೃದ್ಧಿ ನಿಗಮಗಳಡಿ ದೊರೆಯುವ ಸರ್ಕಾರದ ಸೌಲಭ್ಯಗಳ ಕುರಿತು ಮಾಹಿತಿ ನೀಡಲಾಯಿತು.
ಗ್ಯಾರಂಟಿ ಯೋಜನೆಗಳ ಪ್ರಾಽಕಾರದ ಜಿ¯್ಲÁ ಉಪಾಧ್ಯಕ್ಷ ಡಿ.ಎನ್. ಮೈಲಾರಪ್ಪ, ಜಿಪಂ ಸಿಇಒ ಡಾ. ಆಕಾಶ್, ಎಸ್ಪಿ ರಂಜಿತ್‌ಕುಮಾರ್ ಬಂಡಾರು, ಎಡಿಸಿ ಬಿ.ಟಿ. ಕುಮಾರಸ್ವಾಮಿ, ಎಸಿ ಕಾಂತರಾಜು, ಎಎಸ್ಪಿ ಡಾ.ಆರ್. ಶಿವಕುಮಾರ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಮಲ್ಲಿಕಾರ್ಜುನ, ನೂರಾರು ವಿದ್ಯಾರ್ಥಿಗಳು, ವಿವಿಧ ಸಂಘಟನೆಗಳ ಮುಖಂಡರು ಪಾಲ್ಗೊಂಡಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net