ಆರ್ಥಿಕ ಹೊರೆ ತಗ್ಗಿಸುವ ಹೊಣೆ ಭಕ್ತರ ಮೇಲಿದೆ

 ಶಿವನಾಮ ಸಪ್ತಾಹ ಸಮಾರಂಭ ಕುರಿತಂತೆ ಚಿತ್ರದುರ್ಗದಲ್ಲಿ ಮಂಗಳವಾರ ಆಯೋಜಿಸಿದ್ದ ಸಭೆಯಲ್ಲಿ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಶ್ರೀ ಶಿವಲಿಂಗಾನAದ ಸ್ವಾಮೀಜಿ, ನರಸಿಂಹರಾಜು, ವೆಂಕಟೇಶ್, ವಿಜಯಕುಮಾರ್ ಇತರರು ಇದ್ದರು.
ಶಿವನಾಮ ಸಪ್ತಾಹ ಸಮಾರಂಭ ಕುರಿತಂತೆ ಚಿತ್ರದುರ್ಗದಲ್ಲಿ ಮಂಗಳವಾರ ಆಯೋಜಿಸಿದ್ದ ಸಭೆಯಲ್ಲಿ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಶ್ರೀ ಶಿವಲಿಂಗಾನAದ ಸ್ವಾಮೀಜಿ, ನರಸಿಂಹರಾಜು, ವೆಂಕಟೇಶ್, ವಿಜಯಕುಮಾರ್ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಅನಿಸಿಕೆ
  • ಶಿವನಾಮ ಸಪ್ತಾಹದ ಕಾರ್ಯಾಧ್ಯಕ್ಷರಾಗಿ ಭಾಸ್ಕರ್‌ಆಯ್ಕೆ
  • ಶಿವನಾಮ ಸಪ್ತಾಹ
ಚಿತ್ರದುರ್ಗ: ಅದ್ದೂರಿಯಾಗಿ ಆಚರಿಸುತ್ತಿರುವ ಶಿವನಾಮ ಸಪ್ತಾಹ ಸಮಾರಂಭದಿAದ ಆಶ್ರಮಕ್ಕೆ ಆರ್ಥಿಕ ಹೊರೆ ಆಗಬಾರದು ಎಂದು ಶಿವಶರಣ ಮಾದಾರ ಚನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಹೇಳಿದರು.
ಕಬೀರಾನಂದಾಶ್ರಮದಲ್ಲಿ ಮಂಗಳವಾರ ಆಯೋಜಿಸಿದ್ದ ೯೬ನೇ ಶಿವನಾಮ ಸಪ್ತಾಹ ಸಮಾರಂಭದ ಕಾರ್ಯಾಧ್ಯಕ್ಷರಾಗಿ ನಗರಸಭೆ ಮಾಜಿ ಸದಸ್ಯ ಭಾಸ್ಕರ್ ಅವರು ಆಯ್ಕೆ ಬಳಿಕ ಆಶೀರ್ವಚನ ನೀಡಿದರು.
ಆಶ್ರಮದ ಮೇಲಾಗುವ ಆರ್ಥಿಕ ಹೊರೆಯನ್ನು ಭಕ್ತರು ಸಾಕಷ್ಟು ಪ್ರಮಾಣದಲ್ಲಿ ಕಡಿತಗೊಳಿಸಬೇಕಿದೆ. ಹಿಂದಿನ ಸಮಾರಂಭದಲ್ಲಿ ಗಮನಿಸಿರುವ ಕೊರತೆಗಳನ್ನು ನಿವಾರಿಸಿ ವಿಜೃಂಭಣೆಯಿAದ ಸಮಾರಂಭ ಆಯೋಜಿಸಬೇಕಿದೆ. ಈ ಸಪ್ತಾಹ ಮಧ್ಯಕರ್ನಾಟಕದ ನಾಡಹಬ್ಬವಾಗಿ ಪರಿವರ್ತನೆ ಆಗಬೇಕಿದೆ ಎಂದರು.

ಭಾಸ್ಕರ ಮಾತನಾಡಿ, ಸಪ್ತಾಹದ ಅದ್ದೂರಿ ಆಚರಣೆಗೆ ಅಗತ್ಯ ಸಹಕಾರ ನೀಡಲಾಗುವುದು. ಕಾರ್ಯಾಧ್ಯಕ್ಷನಾಗಿ ಆಯ್ಕೆ ಆಗಿರು ವುದು ನನ್ನ ಹೊಣೆಗಾರಿಕೆ ಹೆಚ್ಚಿಸಿದೆ ಎಂದರು.
ಶ್ರೀ ಶಿವಲಿಂಗಾನAದ ಸ್ವಾಮೀಜಿ, ಜಿಪಂ ಮಾಜಿ ಸದಸ್ಯ ನರಸಿಂಹರಾಜು, ನಗರಸಭೆ ಮಾಜಿ ಸದಸ್ಯ ವೆಂಕಟೇಶ್, ನಿಕಟಪೂರ್ವ ಕಾರ್ಯಾಧ್ಯಕ್ಷ ವಿಜಯಕುಮಾರ್, ಪರಮೇಶ್, ಪ್ರಶಾಂತ್‌ಕುಮಾರ್, ತಿಪ್ಪೇಸ್ವಾಮಿ, ನಿರಂಜನ ಮೂರ್ತಿ, ಯೋಗೀಶ್, ರಮೇಶ್, ಮಂಜುನಾಥ್ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net