ಎಲ್ಲ ಕಾಲಕ್ಕೂ ಸಲ್ಲುವ ಅಥಣಿ ಶಿವಯೋಗಿಗಳ ವ್ಯಕ್ತಿತ್ವ

ಚಿತ್ರದುರ್ಗದಲ್ಲಿ ಶುಕ್ರವಾರ ಆಯೋಜಿಸಿದ್ದ ಅಥಣಿ ಮುರುಘೇಂದ್ರ ಶಿವಯೋಗಿಗಳ ಜಯಂತ್ಯುತ್ಸವದಲ್ಲಿ ಡಾ. ಬಸವಕುಮಾರ ಸ್ವಾಮೀಜಿ, ಬಸವ ಮುರುಘೇಂದ್ರ ಸ್ವಾಮೀಜಿ, ಗೋವಿಂದ ಸ್ವಾಮೀಜಿ, ಜವಳಿ ಮಲ್ಲಿಕಾರ್ಜುನ್, ಕೆಇಬಿ ಷಣ್ಮುಖಪ್ಪ ಇತರರು ಇದ್ದರು.
ಚಿತ್ರದುರ್ಗದಲ್ಲಿ ಶುಕ್ರವಾರ ಆಯೋಜಿಸಿದ್ದ ಅಥಣಿ ಮುರುಘೇಂದ್ರ ಶಿವಯೋಗಿಗಳ ಜಯಂತ್ಯುತ್ಸವದಲ್ಲಿ ಡಾ. ಬಸವಕುಮಾರ ಸ್ವಾಮೀಜಿ, ಬಸವ ಮುರುಘೇಂದ್ರ ಸ್ವಾಮೀಜಿ, ಗೋವಿಂದ ಸ್ವಾಮೀಜಿ, ಜವಳಿ ಮಲ್ಲಿಕಾರ್ಜುನ್, ಕೆಇಬಿ ಷಣ್ಮುಖಪ್ಪ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಡಾ. ಬಸವಕುಮಾರ ಸ್ವಾಮೀಜಿ ಅಭಿಮತ
  • ಮುರುಘಾಮಠದಲ್ಲಿ ಜಯಂತಿ ಆಚರಣೆ
  • ಜಯಂತ್ಯುತ್ಸವ
ಚಿತ್ರದುರ್ಗ: ಅಥಣಿ ಮುರುಘೇಂದ್ರ ಶಿವಯೋಗಿಗಳ ಪ್ರೀತಿ, ವಿಶ್ವಾಸಕ್ಕೆ ಮುರುಘಾ ಪರಂಪರೆಯ ಜಗದ್ಗುರುಗಳು ಪಾತ್ರರಾಗಿ ದ್ದರು ಎಂದು ಮುರುಘಾಮಠದ ಆಡಳಿತ ಮಂಡಳಿ ಸದಸ್ಯ ಡಾ. ಬಸವಕುಮಾರ ಸ್ವಾಮೀಜಿ ಹೇಳಿದರು.
ಶ್ರೀ ಮಠದಲ್ಲಿ ಶುಕ್ರವಾರ ಆಯೋಜಿಸಿದ್ದ ಅಥಣಿ ಮುರುಘೇಂದ್ರ ಶಿವಯೋಗಿಗಳ ೧೦೫ನೇ ಜಯಂತ್ಯುತ್ಸವದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಶಿವಯೋಗಿಗಳು ಮಠಾಽಪತಿಗಳಾಗಿರಲಿಲ್ಲ, ಮಠವನ್ನೂ ಕಟ್ಟಿರಲಿಲ್ಲ. ಆದರೆ ದೊಡ್ಡ, ದೊಡ್ಡ ಮಠಗಳ ಜಗದ್ಗುರುಗಳಿಗೆ ಆಶೀ ರ್ವಾದದ ಅಂತಃಕರಣ ತೋರಿದ್ದರು. ಸೇವೆ, ಶಿವಯೋಗ ಹಾಗೂ ದಾಸೋಹವನ್ನು ಅಳವಡಿಸಿಕೊಂಡಿದ್ದ ಮಹಾಯೋಗಿ ಎಂದು ಬಣ್ಣಿಸಿದರು.
ಚಿತ್ರದುರ್ಗ ಬೃಹನ್ಮಠಕ್ಕೂ ಹಾಗೂ ಅಥಣಿ ಗಚ್ಚಿನಮಠಕ್ಕೂ ತಾಯಿ-ಮಕ್ಕಳ ಸಂಬAಧವಿದೆ. ನಿರ್ಮೋಹಿಯಾಗಿದ್ದ ಶಿವಯೋಗಿ ಗ ಳು ಯಾವುದಕ್ಕೂ ಆಸೆಪಟ್ಟವರಲ್ಲ. ಅವರು ಎಲ್ಲ ಕಾಲಕ್ಕೂ ಸಲ್ಲುವ ವ್ಯಕ್ತಿತ್ವದವರು ಎಂದರು.
ಶಿವಯೋಗಿಗಳ ಕುರಿತು ವಿಷಯಾವಲೋಕನ ಮಾಡಿದ ಸಂಶೋಧಕÀ ಜವಳಿ ಮಲ್ಲಿಕಾರ್ಜುನ ಮಾತನಾಡಿ, ಬಸವಾದಿ ಶಿವ ಶ ರಣರ ಪರಂಪರೆಯಲ್ಲಿ ಪ್ರಾತಃಸ್ಮರಣೀಯರನ್ನು ಸ್ಮರಿಸುವುದು ಒಂದು ಸಂಸ್ಕೃತಿ. ದೇಶದ ಇತಿಹಾಸವನ್ನೊಮ್ಮೆ ಅವಲೋಕಿಸಿ ದಾಗ ಸಂಸ್ಕ್ಪçತಿ, ಧರ್ಮ, ಆಚಾರ ವಿಚಾರಗಳು ಅಳಿಯುವ ಸನ್ನಿವೇಶದಲ್ಲಿ ಜನಸಾಮಾನ್ಯರಲ್ಲಿ ಸಾಮಾಜಿಕ, ಸಾಂಸ್ಕೃತಿಕ ಪುನಶ್ಚೇತನಕ್ಕಾಗಿ ಅಥಣಿ ಶಿವಯೋಗಿಗಳು ಶ್ರಮಿಸಿದ್ದಾರೆ ಎಂದರು.
ಬಸವ ಮುರುಘೇಂದ್ರ ಸ್ವಾಮೀಜಿ, ಗೋವಿಂದ ಸ್ವಾಮೀಜಿ, ಕಣ್ವಕುಪ್ಪೆ ಮುರುಘೇಶ್, ಕೆಇಬಿ ಷಣ್ಮುಖಪ್ಪ, ಜೆ.ಎಸ್. ಮುರುಘೇಶ್, ಕಣಿವೆಮಾರಮ್ಮ ತಿಪ್ಪೇಸ್ವಾಮಿ, ಸವಿತಾ ಶ್ರೀನಿವಾಸ್, ಬಸವರಾಜಕಟ್ಟಿ, ಟಿ.ಪಿ. ಜ್ಞಾನಮೂರ್ತಿ, ಜಿ.ಟಿ. ನಂದೀಶ್, ನಾಗರಾಜ ಸಂಗA, ಡಾ.ಬಿ.ಗಾಯತ್ರಿ, ಎಸ್.ಎಂ. ಕೊಟ್ರೇಶಪ್ಪ, ಗೀತಾರುದ್ರೇಶ್, ಮಹಾಂತಮ್ಮ, ನಾಯಕನಹಟ್ಟಿ ತಿಪ್ಪೇಸ್ವಾಮಿ, ಇಟಗಿ ವಿಜಯಕುಮಾರ್, ಶ್ರೀಕಂಠೇಶ್ವರ ತಿಪ್ಪೇಸ್ವಾಮಿ, ಕವಿ ಗಂಗಾಧರಪ್ಪ, ಅಣ್ಣಪ್ಪ, ಜಯದೇವಮೂರ್ತಿ, ವೀರಣ್ಣ, ನಾಗರಾಜ, ಶಿವಯೋಗಿ, ನೀಲಮ್ಮ ಮಂಜುನಾಥ್, ಬಸವರಾಜ್, ಚಂದ್ರಣ್ಣ, ಎಸ್.ವಿ. ಶಂಕರ್ ಇತರರು ಇದ್ದರು.
ಜಮುರಾ ಕಲಾವಿದ ಉಮೇಶ್ ಪತ್ತಾರ್ ಶಿವಯೋಗಿಗಳ ಗೀತಗಾಯನ ನಡೆಸಿಕೊಟ್ಟರು. ಕೆ.ಸುರೇಶ್ ಸ್ವಾಗತಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net