ಚಿತ್ರದುರ್ಗದಲ್ಲಿ ಆಯೋಜಿಸಿದ್ದ ಮಹಾಕವಿ ಸರ್ವಜ್ಞ ಜಯಂತ್ಯುತ್ಸವದಲ್ಲಿ ಎಡಿಸಿ ಬಿ.ಟಿ. ಕುಮಾರಸ್ವಾಮಿ, ಬಿ. ಸುರೇಶ್, ಕುಂಬಾರ ಗುಂಡಯ್ಯ ಸ್ವಾಮೀಜಿ, ಆರ್. ಶಿವಣ್ಣ ಗಂಜಿಗಟ್ಟೆ, ಶಿದ್ರಾಮ ಮಾರಿಹಾಳ, ಎಸ್.ಕೆ. ಮಲ್ಲಿಕಾರ್ಜುನ, ನರಸಿಂಹಮೂರ್ತಿ, ಪಿ. ತಿಪ್ಪೇಸ್ವಾಮಿ, ಎಸ್. ರ‍್ರಿಸ್ವಾಮಿ, ವೈ. ಮÊತ್ಯುಂಜಯ, ಎ. ಸಿದ್ದೇಶ, ಎಸ್. ಬೈಲಮ್ಮ, ಹೇಮಾವತಿ ಇತರರು ಇದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಎಡಿಸಿ ಬಿ.ಟಿ. ಕುಮಾರಸ್ವಾಮಿ ಹೇಳಿಕೆ|
ಜಿಲ್ಲಾಡಳಿತದಿಂದ ಜಯಂತ್ಯುತ್ಸವ ಆಚರಣೆ
ಸಮಾಜದ ಸುಧಾರಣೆ
ಚಿತ್ರದುರ್ಗ: ವಚನಗಳ ಮೂಲಕ ಶಿವಶರಣರು ಸಮಾಜದ ಸುಧಾರಣೆಗೆ ಹೇಗೆ ಶ್ರಮಿಸಿದ್ದರೋ, ಅದೇ ಹಾದಿಯಲ್ಲಿ ೧೬ನೇ ಶತಮಾನದಲ್ಲಿ ಮಹಾಕವಿ ಸರ್ವಜ್ಞರು ತಮ್ಮ ತ್ರಿಪದಿಗಳ ಮೂಲಕ ಸಮಾಜದ ಓರೆಕೋರೆಗಳನ್ನು ತಿದ್ದಿದ್ದಾರೆ ಎಂದು ಎಡಿಸಿ ಬಿ.ಟಿ. ಕುಮಾರಸ್ವಾಮಿ ಹೇಳಿದರು.
ಜಿಲ್ಲಾಡಳಿತ, ಜಿಪಂ, ನಗರಸಭೆ, ಕುಂಬಾರ ಗುಂಡಯ್ಯಮಹಾಸAಸ್ಥಾನ, ಜಿಲ್ಲಾ ಕುಂಬಾರ ಕ್ಷೇಮಾಭಿವೃದ್ಧಿ ಸಂಘ, ಕರ್ನಾಟಕ ಕುಂಬಾರ ಮಹಿಳಾ ಮಹಾಸಭಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಡಿಸಿ ಕಚೇರಿಯಲ್ಲಿ ಆಯೋಜಿಸಿದ್ದ ಕವಿ ಸರ್ವಜ್ಞ ಜಯಂತಿಯಲ್ಲಿ ಅವರು ಮಾತನಾಡಿದರು.
ಸಾಹಿತ್ಯ ಪಂಡಿತರಿಗಷ್ಟೇ ಎನ್ನುವಂತಿದ್ದ ಕಾಲದಲ್ಲಿ, ಸರ್ವಜ್ಞ ಕವಿ ಸಾಮಾನ್ಯ ಜನರಿಗೂ ಅರ್ಥವಾಗುವಂತೆ ಸರಳ ಕನ್ನಡದಲ್ಲಿ ತ್ರಿಪದಿಗಳನ್ನು ರಚಿಸಿದರು. ಸಮಾಜದಲ್ಲಿದ್ದ ಕಂದಾಚಾರ, ಮೂಢನಂಬಿಕೆ, ಜಾತಿ ಪದ್ಧತಿಯನ್ನು ನೇರವಾಗಿ ಖಂಡಿಸಿದ್ದರು. ಪದವಿಗಿಂತ ಲೋಕಾನುಭವ ದೊಡ್ಡದು ಎಂಬುದಕ್ಕೆ ಸರ್ವಜ್ಞರೇ ಸಾಕ್ಷಿ ಎಂದು ಅಭಿಪ್ರಾಯಪಟ್ಟರು.
ಇಂದು ವಿದ್ಯಾವಂತರ ಸಂಖ್ಯೆ ಹೆಚ್ಚಾಗಿದ್ದರೂ ಕ್ರೌರ್ಯ, ಅಪರಾಧಗಳು ಹೆಚ್ಚುತ್ತಿವೆ. ಮಕ್ಕಳಿಗೆ ಅಂಕಗಳಿಕೆ ಶಿಕ್ಷಣದ ಬದಲು ಸರ್ವಜ್ಞರ ತತ್ವಗಳನ್ನೊಳಗೊಂಡ ಸಂಸ್ಕಾರಯುತ ಶಿಕ್ಷಣದ ಅಗತ್ಯವಿದೆ ಎಂದು ಹೇಳಿದರು.
ಉಪನ್ಯಾಸ ನೀಡಿದ ಬಾಲಕರ ಸರ್ಕಾರಿ ಪಿಯು ಕಾಲೇಜು ಉಪನ್ಯಾಸಕ ಬಿ. ಸುರೇಶ್, ಕವಿ ಸರ್ವಜ್ಞರು ಮಹಾನ್ ದಾರ್ಶನಿಕರೂ ಹೌದು. ಲೋಕಜ್ಞಾನ ಅಡಗಿರುವ ಅವರ ಮೂರು ಸಾಲುಗಳ ತ್ರಿಪದಿಗಳು ಆಧುನಿಕ ಯುಗದಲ್ಲೂ ಅತ್ಯಂತ ಪ್ರಸ್ತುತವಾಗಿವೆ ಎಂದು ಹೇಳಿದರು.
ಕುಂಬಾರ ಗುಂಡಯ್ಯ ಮಹಾಸಂಸ್ಥಾನದ ಕುಂಬಾರ ಗುಂಡಯ್ಯ ಸ್ವಾಮೀಜಿ, ಜಿಲ್ಲಾ ಗ್ಯಾರಂಟಿ ಯೋಜನಾ ಪ್ರಾಽಕಾರದ ಅಧ್ಯಕ್ಷ ಆರ್. ಶಿವಣ್ಣ ಗಂಜಿಗಟ್ಟೆ, ಆಹಾರ ಇಲಾಖೆ ಜಂಟಿ ನಿರ್ದೇಶಕ ಶಿದ್ರಾಮ ಮಾರಿಹಾಳ, ಸಹಾಯಕ ನಿರ್ದೇಶಕ ಎಸ್.ಕೆ. ಮಲ್ಲಿ ಕಾರ್ಜುನ, ಎಸಿ ಕಚೇರಿ ತಹಸೀಲ್ದಾರ್ ನರಸಿಂಹಮೂರ್ತಿ, ಅಧ್ಯಕ್ಷ ಪಿ. ತಿಪ್ಪೇಸ್ವಾಮಿ, ಜಿಲ್ಲಾಧ್ಯಕ್ಷ ಎಸ್. ರ‍್ರಿಸ್ವಾಮಿ,
ಕಾರ್ಯದರ್ಶಿಗಳಾದ ವೈ. ಮÊತ್ಯುಂಜಯ, ಎ. ಸಿದ್ದೇಶ, ಕರ್ನಾಟಕ ಕುಂಬಾರ ಮಹಿಳಾ ಮಹಾಸಭಾ ಅಧ್ಯಕ್ಷೆ ಎಸ್. ಬೈಲಮ್ಮ, ಕಾರ್ಯದರ್ಶಿ ಹೇಮಾವತಿ, ಸಮಾಜದ ಮುಖಂಡರು ಇದ್ದರು. ಚಳ್ಳಕೆರೆ ತಾಲೂಕಿನ ಬೋಸೇದೇವರಹಟ್ಟಿ ಮಂಜಣ್ಣ ತಂಡ ಗೀತಗಾಯನ ನಡೆಸಿಕೊಟ್ಟಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ಎಂ. ಗುರುನಾಥ ಸ್ವಾಗತಿಸಿ, ಡಾ. ನವೀನ್ ಮಸ್ಕಲ್ ನಿರೂಪಿಸಿದರು.
ನೈತಿಕ ಬದುಕಿಗೆ ಸರ್ವಜ್ಞರ ತ್ರಿಪದಿಗಳ ಅಗತ್ಯ
ಚಿತ್ರದುರ್ಗ: ನೈತಿಕ ಬದುಕು ರೂಪಿಸಲು ಸರ್ವಜ್ಞರ ವಚನಗಳು ಅಗತ್ಯ ಎಂದು ದಾವಣಗೆರೆ ವಿವಿ ಕನ್ನಡ ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಎಚ್.ಜಿ. ವಿಜಯಕುಮಾರ್ ಹೇಳಿದರು.
ಮುರುಘಾಮಠದಲ್ಲಿ ಶುಕ್ರವಾರ ಆಯೋಜಿಸಿದ್ದ ಶಿವಶರಣ, ಮಹಾಕವಿ ಸರ್ವಜ್ಞರ ಜಯಂತ್ಯುತ್ಸವದಲ್ಲಿ ಉಪನ್ಯಾಸ ನೀಡಿದ ಅವರು, ನೈತಿಕ ಶಿಕ್ಷಣದ ಕೊರತೆಯಿಂದ ಸಮಾಜದಲ್ಲಿ ಆತಂಕಕಾರಿ ಘಟನೆಗಳು ಸಂಭವಿಸುತ್ತಿವೆ. ಸಮಾಜ ಸುಧಾರಣÉಗೆ ಶರಣರ ವಚನಗಳು ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.
ಸಾನ್ನಿಧ್ಯ ವಹಿಸಿದ್ದ ಮುರುಘಾಮಠದ ಆಡಳಿತ ಮಂಡಳಿ ಸದಸ್ಯ ಡಾ. ಬಸವಕುಮಾರ ಸ್ವಾಮೀಜಿ ಮಾತನಾಡಿ, ಸರ್ವಜ್ಞರ ವಚನಗಳು ಸರಳ ಹಾಗೂ ಸುಂದರವಾಗಿವೆ ಎಂದರು.
ಕುAಬಾರ ಸಮಾಜದ ಮೃತ್ಯುಂಜಯಪ್ಪ ಮಾತನಾಡಿದರು. ವಿಜಯಪುರದ ಶೋಭಾ ತಾಯಿ, ಕುಂಬಾರ ಸಮಾಜದ ರ‍್ರಿಸ್ವಾಮಿ, ಡಾ.ಟಿ.ವಿ. ಅರವಿಂದ್, ಎಸ್. ಗಂಗಾಧರಪ್ಪ, ಎನ್. ಈಶ್ವರಪ್ಪ, ಬಸವರಾಜ ಕಟ್ಟಿ, ಜಿ.ಸಿ. ಮಹಾಂತಮ್ಮ ಜಯಪ್ಪ, ಬೈಲಮ್ಮ ಇತರರು ಇದ್ದರು. ದರ್ಶನ್ ದೇವರು ವಚನ ಪ್ರಾರ್ಥಿಸಿದರು. ಡಾ.ಎಚ್.ಜೆ. ಲೋಕೇಶ್ ನಿರೂಪಿಸಿದರು. ಡಾ.ಎಸ್.ಚೇತನ್ ಸ್ವಾಗತಿಸಿದರು.