ಚಿತ್ರದುರ್ಗದ ಮುರುಘಾಮಠದಲ್ಲಿ ಶನಿವಾರ ಆಯೋಜಿಸಿದ್ದ ಮುಳುಗುಂದದ ಬಾಲಲೀಲಾ ಮಹಾಂತ ಶಿವಯೋಗಿಗಳ ಜಯಂತ್ಯುತ್ಸವದಲ್ಲಿ ಡಾ. ಬಸವಕುಮಾರ ಸ್ವಾಮೀಜಿ, ಡಾ. ಬಸವಪ್ರಭು ಸ್ವಾಮೀಜಿ, ಡಾ. ರೇವಣಸಿದ್ದಪ್ಪ ಹೆಗಡಾಳ, ಶ್ರೀ ಬಸವ ಮಹಾಂತ ಸ್ವಾಮೀಜಿ, ನಾಗರಾಜಸಂಗA, ಕವಿ ಗಂಗಾಧರಪ್ಪ ಇತರರು ಇದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಪ್ರಾಚಾರ್ಯ ಡಾ. ರೇವಣಸಿದ್ದಪ್ಪ ಹೆಗಡಾಳ ಅಭಿಪ್ರಾಯ
ಶ್ರೀ ಮುರುಘಾಮಠದಲ್ಲಿ ಜಯಂತಿ ಆಚರಣೆ
ಬಾಲಲೀಲಾ ಮಹಾಂತ ಶಿವಯೋಗಿಗಳ ಜಯಂತ್ಯುತ್ಸವ
ಚಿತ್ರದುರ್ಗ: ನಾಡಿನ ಅನೇಕ ಪುಣ್ಯಪುರುಷರು ತಾವು ನೋವುಂಡು ಬೇರೆಯವರ ಸುಖ-ಸಂತೋಷಕ್ಕಾಗಿ ಅಮರರಾಗಿದ್ದಾರೆ ಎಂದು ರಾಣೆÃಬೆನ್ನೂರು ಎಸ್‌ಜೆಎಂ ಮಹಿಳಾ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ರೇವಣಸಿದ್ದಪ್ಪ ಹೆಗಡಾಳ ಹೇಳಿದರು.
ಶ್ರೀ ಮುರುಘಾಮಠದಲ್ಲಿ ಶನಿವಾರ ಆಯೋಜಿಸಿದ್ದ ಮುಳುಗುಂದದ ಬಾಲಲೀಲಾ ಮಹಾಂತ ಶಿವಯೋಗಿಗಳ ಜಯಂತ್ಯುತ್ಸವದಲ್ಲಿ ಶಿವಯೋಗಿಗಳ ಕುರಿತು ವಿಷಯಾವಲೋಕನ ಮಾಡಿದರು.
ಅಜರಾಮರ ವ್ಯಕ್ತಿತ್ವದ ಶಿವಯೋಗಿಗಳು ಮಗುವಿನಂತಹ ಮುಗ್ಧ ಮನಸ್ಸಿನವರಾಗಿದ್ದರು. ಅನೇಕ ಪವಾಡ ಸದೃಶ ಲೀಲೆಗಳನ್ನು ಅವರು ಮಾಡಿದ್ದರು. ಇಂತಹ ಘನಮಹಿಮರನ್ನು ಸ್ಮರಿಸುವುದೇ ಒಂದು ಭಾಗ್ಯ ಎಂದರು.
ಲಿAಗನಾಯಕನಹಳ್ಳಿ ಮಠದಲ್ಲಿ ಅಧ್ಯಯನದ ಬಳಿಕ ಲೋಕಸಂಚಾರ ಮಾಡುತ್ತ ಆಂಧ್ರಪ್ರದೇಶ, ತಮಿಳುನಾಡು, ಕೇರಳ ಸೇರಿ ದಕ್ಷಿಣ ಭಾರತದ ಅನೇಕ ಕಡೆಗಳಲ್ಲಿ ಸಂಚರಿಸಿದರು. ಮುಮ್ಮಡಿ ಕೃಷ್ಣರಾಜೇಂದ್ರ ಒಡೆಯರ್ ಅವರ ಅಪೇಕ್ಷೆ ಮೇರೆಗೆ ಮೈಸೂರು ಅರಮನೆಗೆ ಹೋಗುತ್ತಾರೆ. ರಾಜರು ಕೊಟ್ಟ ಉಡುಗೊರೆಗಳನ್ನು ತಿರಸ್ಕರಿಸುತ್ತಾರೆ. ಆದರೂ, ರಾಜರು ಅವರ ಶಿಷ್ಯರ ಮೂಲಕ ಕೊಟ್ಟು ಕಳಿಸುತ್ತಾರೆ.
ಆದರೆ, ಅವುಗಳನ್ನು ಶಿವಯೋಗಿಗಳು ಚಿತ್ರದುರ್ಗದ ಬÊಹನ್ಮಠದ ಅಂದಿನ ಪೀಠಾಽಪತಿಗಳಿಗೆ ಅರ್ಪಿಸುತ್ತಾರೆ. ಅನೇಕ ವಿದ್ಯೆ ಗಳಲ್ಲಿ ಪಾರಂಗತರಾಗಿದ್ದ ಶಿವಯೋಗಿಗಳ ಲೀಲಾವಿಶ್ರಾಂತ ಸನ್ನಿಧಾನ ಮುರುಘಾಮಠದ ಶಾಖಾಮಠ ಮುಳಗುಂದದಲ್ಲಿದೆ ಎಂದು ತಿಳಿಸಿದರು.
ಮುರುಘಾಮಠದ ಆಡಳಿತ ಮಂಡಳಿ ಸದಸ್ಯ ಡಾ. ಶ್ರೀ ಬಸವಕುಮಾರ ಸ್ವಾಮೀಜಿ ಮಾತನಾಡಿ, ಮುರುಘಾ ಪರಂಪರೆಯಲ್ಲಿ ಶಿವಯೋಗಿಗಳಂತಹ ಅನೇಕ ಮಹಾತ್ಮರು ಮುರುಘಾಮಠದ ಘನತೆಯನ್ನು ಹೆಚ್ಚಿಸಿದ್ದಾರೆ ಎಂದರು.
ದಾವಣಗೆರೆ ವಿರಕ್ತಮಠದ ಡಾ.ಶ್ರೀ ಬಸವಪ್ರಭು ಸ್ವಾಮೀಜಿ, ಗುರುಮಠಕಲ್‌ನ ಶ್ರೀ ಶಾಂತವೀರ ಗುರು ಮುರುಘರಾಜೇಂದ್ರ ಸ್ವಾಮೀಜಿ, ಶಿರಸಂಗಿಯ ಶ್ರೀ ಬಸವ ಮಹಾಂತ ಸ್ವಾಮೀಜಿ,ನಾಗರಾಜ ಸಂಗA, ಕವಿ ಗಂಗಾಧರಪ್ಪ, ವಿವಿಧ ಸಮುದಾಯಗಳ ಮುಖಂಡರು ಇದ್ದರು.
ಶಿಕ್ಷಕಿ ಭಾಗ್ಯಲಕ್ಷಿ÷್ಮÃ, ಕಲಾವಿದ ಉಮೇಶ್ ಪತ್ತಾರ್ ವಚನ ಗಾಯನ ನಡೆಸಿಕೊಟ್ಟರು. ಶಿಕ್ಷಕಿಯರಾದ ಶಿಲ್ಪಾ ಸ್ವಾಗತಿಸಿ, ಶ್ರುತಿ ವಂದಿಸಿದರು. ಪಾರ್ವತಿ ನಿರೂಪಿಸಿದರು.
ಶಿವಶರಣರ ಜಯಂತಿ ಇವತ್ತು: ಶ್ರೀಮಠದಲ್ಲಿ ಫೆ.೧ರಂದು ಬೆಳಗ್ಗೆ ೮.೩೦ಕ್ಕೆ ಶಿವಶರಣರಾದ ಮರುಳ ಶಂಕರದೇವ ಹಾಗೂ ಕಿನ್ನರಿ ಬೊಮ್ಮಯ್ಯವನರ ಜಯಂತಿ ಆಚರಿಸಲಾಗುತ್ತಿದೆ. ಶ್ರೀಮಠದ ಆಡಳಿತ ಮಂಡಳಿ ಅಧ್ಯP್ಷÀ ಶಿವಯೋಗಿ ಸಿ. ಕಳಸದ್ ಅಧ್ಯP್ಷÀತೆ ವಹಿಸುವರು. ಸದಸ್ಯ ಡಾ.ಶ್ರೀ ಬಸವ ಕುಮಾರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಸದಸ್ಯರಾದ ಡಾ.ಪಿ.ಎಸ್. ಶಂಕರ್, ಎಸ್.ಎನ್. ಚಂದ್ರಶೇಖರ್, ಎಸ್‌ಜೆಎಂ ವಿಶ್ವವಿದ್ಯಾಲಯದ ಕುಲಪತಿ ಡಾ.ಕೆ.ಬಿ. ಗುಡಸಿ ಉಪಸ್ಥಿತರಿರುವರು.