ಜನರಲ್ಲಿ ನಿಸ್ವಾರ್ಥ ಸೇವೆ ಪ್ರಮಾಣ ಕ್ಷೀಣ

 ಚಿತ್ರದುರ್ಗದಲ್ಲಿ ಬುಧವಾರ ರುದ್ರಪ್ಪ ಲಮಾಣಿ ಅವರನ್ನು ಸನ್ಮಾನಿಸಲಾಯಿತು. ಡಾ.ಎಸ್.ಆಕಾಶ್, ಡಾ.ಎಸ್. ರಂಗಸ್ವಾಮಿ, ಎಂ.ಆರ್. ಮಂಜುನಾಥ್, ಪಿ.ವೈ. ದೇವರಾಜ ಪ್ರಸಾದ್, ಬಾಬುಲಾಲ್‌ಜೈನ್, ಜಿ.ಎಸ್.ಉಜ್ಜನಪ್ಪ ಇತರರು ಇದ್ದರು.
ಚಿತ್ರದುರ್ಗದಲ್ಲಿ ಬುಧವಾರ ರುದ್ರಪ್ಪ ಲಮಾಣಿ ಅವರನ್ನು ಸನ್ಮಾನಿಸಲಾಯಿತು. ಡಾ.ಎಸ್.ಆಕಾಶ್, ಡಾ.ಎಸ್. ರಂಗಸ್ವಾಮಿ, ಎಂ.ಆರ್. ಮಂಜುನಾಥ್, ಪಿ.ವೈ. ದೇವರಾಜ ಪ್ರಸಾದ್, ಬಾಬುಲಾಲ್‌ಜೈನ್, ಜಿ.ಎಸ್.ಉಜ್ಜನಪ್ಪ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ವಿಧಾನಸಭೆಯ ಉಪ ಸಭಾಧ್ಯಕ್ಷ ರುದ್ರಪ್ಪ ಲಮಾಣಿ ಆತಂಕ
  • ಅನಾಹುತಗಳಿಗೂ ಮೊಬೈಲ್ ಕಾರಣ
  • ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್-ಕರ್ನಾಟಕ
ಚಿತ್ರದುರ್ಗ: ಸಮಾಜದಲ್ಲಿ ನಿಸ್ವಾರ್ಥ ಸೇವೆ ಮಾಡುವವರ ಪ್ರಮಾಣ ಪ್ರಸ್ತುತ ಕ್ಷೀಣಿಸುತ್ತಿದೆ ಎಂದು ವಿಧಾನಸಭೆ ಉಪ ಸಭಾ ಧ್ಯಕ್ಷ ರುದ್ರಪ್ಪ ಲಮಾಣಿ ಕಳವಳ ವ್ಯಕ್ತಪಡಿಸಿದರು.
ಜಿಪಂ ಮಿನಿ ಸಭಾಂಗಣದಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್-ಕರ್ನಾಟಕ, ಚಿತ್ರದುರ್ಗ ಸ್ಥಳೀಯ ಸಂಸ್ಥೆಯಿAದ ಏಪ್ರಿಲ್ -ÀÇಲ್ ಅಲ್ಲ, ಏಪ್ರಿಲ್ ಕೂಲ್ ಘೋಷವಾಕ್ಯದಡಿ ಆಯೋಜಿಸಿದ್ದ ಸ್ವಚ್ಛತಾ ಅಭಿಯಾನದ ಸಮಾರೋಪ ಸಮಾರಂಭದಲ್ಲಿ ಬುಧವಾರ ಮಾತನಾಡಿದರು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ನ ನಿಸ್ವಾರ್ಥ ಸೇವಾ ಕಾರ್ಯ ಸಮಾಜಕ್ಕೆ ಮಾದರಿಯಾಗಿದೆ. ಸರ್ಕಾರಿ, ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತಾ ಕಾರ್ಯ, ಗಿಡ, ಮರಗಳನ್ನು ರಕ್ಷಿಸುವ ಕೆಲಸ ಅಭಿನಂದನಾರ್ಹ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮೊಬೈಲ್ ಗೀಳಿನಿಂದ ಬಹುತೇಕರು ಕಳೆದುಹೋಗಿದ್ದಾರೆ. ಇದು ಸಾಕಷ್ಟು ಅನಾಹುತಗಳಿಗೂ ಕಾರಣವಾಗುತ್ತಿದೆ. ಹೀಗಾಗಿ ಹಿಂ ದಿನ ಸಂಸ್ಕೃತಿ ಮರೆಯುತ್ತಿದ್ದೇವೆ. ಸರ್ವವನ್ನೂ ಹಣದಿಂದಲೇ ಅಳೆಯುವಂತಾಗಿದೆ. ಭವಿಷ್ಯದ ದಿನಗಳು ಮತ್ತಷ್ಟು ಕರಾಳ ತೆಯಿಂದ ಕೂಡಿರುತ್ತವೆ ಎಂದು ಆತಂಕ ವ್ಯಕ್ತಪಡಿಸಿದರು.
ನಿರ್ವಹಣೆ ಕೊರತೆಯಿಂದ ಸರ್ಕಾರದ ಎಷ್ಟೋ ಭವನಗಳು ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿವೆ. ಕಸ, ತ್ಯಾಜ್ಯ ದಿಂದ ರೋಗಗಳ ಉಲ್ಬಣಕ್ಕೂ ಕಾರಣವಾಗುತ್ತ್ತಿವೆ. ಆದ್ದರಿಂದ ಭವನಗಳ ಸಮರ್ಪಕ ನಿರ್ವಹಣೆಗೆ ಒತ್ತು ನೀಡಬೇಕಿದೆ ಎಂದು ಸಲಹೆ ನೀಡಿದರು.
ಸ್ವಚ್ಛತೆ ನಮ್ಮ ಮೊದಲ ಆದ್ಯತೆಯಾಗಬೇಕು. ಹೀಗಾಗಿ ನಮ್ಮ ಮನೆ, ಸುತ್ತಲಿನ ಪರಿಸರ ಸುಂದರವಾಗಿ ಇಟ್ಟುಕೊಳ್ಳಬೇಕು. ಆ ನಿಟ್ಟಿನಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ನವರು ಹಲವೆಡೆಗಳಲ್ಲಿ ಸ್ವಚ್ಛತೆ ನಡೆಸುವ ಜತೆಗೆ ಜನರಲ್ಲಿ ಅರಿವು ಮೂಡಿಸುತ್ತಿರುವುದು ಸ್ವಾಗ ತಾರ್ಹ ಎಂದರು.
ಜಿಪA ಸಿಇಒ ಡಾ.ಎಸ್.ಆಕಾಶ್ ಮಾತನಾಡಿ, ದೇಶದಲ್ಲಿ ವಾರ್ಷಿಕ ಸರಾಸರಿ ೧೧೭ ಸೆಂ.ಮೀ, ರಾಜ್ಯದಲ್ಲಿ ೧೧೯ ಸೆಂ.ಮೀ, ಬರದನಾಡು ಚಿತ್ರದುರ್ಗ ಜಿಲ್ಲೆಯಲ್ಲಿ ಸರಾಸರಿ ೫೪ ಸೆಂ.ಮೀ ಮಳೆಯಾಗುತ್ತದೆ. ನಮ್ಮಲ್ಲಿ ಯಾವುದೇ ಮುಖ್ಯ ನದಿಗಳಿಲ್ಲ, ಉಪನದಿ ವೇದಾವತಿ ಇದೆ.
ಇದನ್ನು ಹೊರತುಪಡಿಸಿದರೆ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿಗೂ ತೊಂದರೆ ಇದೆ. ಈ ಕೊರತೆ ಮಧ್ಯೆ ಶುಚಿತ್ವ ಕಾಪಾಡಿಕೊಳ್ಳುವುದು ಸವಾಲಿನ ಕೆಲಸವಾಗಿದೆ ಎಂದು ಹೇಳಿದರು.
ಚಿತ್ರದುರ್ಗ ನಗರ ಮತ್ತು ಗ್ರಾಮೀಣ ಭಾಗವನ್ನು ಸ್ವಚ್ಛವಾಗಿಟ್ಟುಕೊಳ್ಳುವ ಕೆಲಸ ಎಲ್ಲ ನಾಗರಿಕರದ್ದಾಗಿದೆ. ಈ ನಿಟ್ಟಿನಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಚಿತ್ರದುರ್ಗ ಸಂಸ್ಥೆ ತಮ್ಮ ಸುತ್ತಮುತ್ತಲಿನ ಸ್ಥಳಗಳನ್ನು ಶುಚಿಯಾಗಿಟ್ಟುಕೊಳ್ಳುವ ಕೆಲಸಕ್ಕೆ ಸಾರ್ವಜನಿ ಕರಿಗೆ ಉತ್ತೇಜನ ನೀಡುವ ಪ್ರಕ್ರಿಯೆ ಮುಂದುವರಿಯಲಿ ಎಂದು ಆಶಿಸಿದರು.
ಡಿಡಿಪಿಐ ಎಂ.ಆರ್. ಮಂಜುನಾಥ್ ಮಾತನಾಡಿ, ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯವರು ಸತತ ಎರಡು ತಿಂಗಳಿAದ ಪ್ರತಿ ವಾರ ಸರ್ಕಾರಿ ಕಚೇರಿ ಆವರಣ, ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತೆ ಕೈಗೊಂಡು ಜಾಗೃತಿ ಮೂಡಿಸಿದ್ದಾರೆ ಎಂದು ಶ್ಲಾöಸಿದರು.
ಜಿಪಂ ಉಪ ಕಾರ್ಯದರ್ಶಿ ಡಾ.ಎಸ್. ರಂಗಸ್ವಾಮಿ, ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸ್ಥಾನಿಕ ಆಯುಕ್ತ ಪಿ.ವೈ. ದೇವರಾಜ ಪ್ರಸಾದ್, ಸಂಸ್ಥೆ ಜಿಲ್ಲಾಧ್ಯಕ್ಷ ಬಾಬುಲಾಲ್ ಜೈನ್, ಉಪಾಧ್ಯಕ್ಷ ಜಿ.ಎಸ್. ಉಜ್ಜನಪ್ಪ, ಪದಾಽಕಾರಿಗಳಾದ ಬಸವರಾಜ್, ಡಾ. ರಹಮತ್‌ಉಲ್ಲಾ, ಎಂ. ವಿಶ್ವನಾಥ, ವಿ.ಎಲ್. ಪ್ರಶಾಂತ್, ಪರಮೇಶ್, ಮುರುಗೇಶ್, ಗಂಗಾಧರ್, ಗುರುಮೂರ್ತಿ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net