ಭಗವಂತನ ಕೃಪಾಕಟಾಕ್ಷಕ್ಕೆ ಬೇಕು ಗುರು ಕೃಪೆ

ಚಿತ್ರದುರ್ಗ ಕಬೀರಾನಂದಾಶ್ರಮದ ಶಿವರಾತ್ರಿ ಮಹೋತ್ಸವದ ಗುರುವಾರದ ಕರ‍್ಯಕ್ರಮದಲ್ಲಿ ಶ್ರೀ ಗಣಪತಿ ಮಹಾರಾಜ್, ಶ್ರೀ ಶಂಕರಾನAದ ಶ್ರೀಗಳು, ಶ್ರೀ ಜ್ಯೋತಿರ್ಲಿಂಗಾನAದ ಶ್ರೀಗಳು, ಹಳಿಯಾಳ ನಿತ್ಯಾನಂದಾಶ್ರಮದ ಶ್ರೀ ಸುಬ್ರಹ್ಮಣ್ಯ ಶ್ರೀಗಳು, ಶ್ರೀ ಯೋಗಾನಂದ ಶ್ರೀಗಳು, ಶ್ರೀ ಶಿವಲಿಂಗಾನAದ ಶ್ರೀಗಳು, ಅನಿತಾ ಮಾತಾಜಿ, ಎಂ.ರಾಮಪ್ಪ, ತಿಪ್ಪೇಸ್ವಾಮಿ,ದೇವರಾಜ್, ರಮೇಶ್, ರವಿಕುಮಾರ್, ಭಾಸ್ಕರ್, ಎಂ.ಎ.ಸೇತೂರಾA ಇತರರು ಇದ್ದರು.
ಚಿತ್ರದುರ್ಗ ಕಬೀರಾನಂದಾಶ್ರಮದ ಶಿವರಾತ್ರಿ ಮಹೋತ್ಸವದ ಗುರುವಾರದ ಕರ‍್ಯಕ್ರಮದಲ್ಲಿ ಶ್ರೀ ಗಣಪತಿ ಮಹಾರಾಜ್, ಶ್ರೀ ಶಂಕರಾನAದ ಶ್ರೀಗಳು, ಶ್ರೀ ಜ್ಯೋತಿರ್ಲಿಂಗಾನAದ ಶ್ರೀಗಳು, ಹಳಿಯಾಳ ನಿತ್ಯಾನಂದಾಶ್ರಮದ ಶ್ರೀ ಸುಬ್ರಹ್ಮಣ್ಯ ಶ್ರೀಗಳು, ಶ್ರೀ ಯೋಗಾನಂದ ಶ್ರೀಗಳು, ಶ್ರೀ ಶಿವಲಿಂಗಾನAದ ಶ್ರೀಗಳು, ಅನಿತಾ ಮಾತಾಜಿ, ಎಂ.ರಾಮಪ್ಪ, ತಿಪ್ಪೇಸ್ವಾಮಿ,ದೇವರಾಜ್, ರಮೇಶ್, ರವಿಕುಮಾರ್, ಭಾಸ್ಕರ್, ಎಂ.ಎ.ಸೇತೂರಾA ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶ್ರೀ ಗಣಪತಿ ಮಹಾರಾಜ್ ಅಭಿಪ್ರಾಯ
  • ಕಬೀರಾನಂದಾಶ್ರಮದಲ್ಲಿ ಶಿವರಾತ್ರಿ ಮಹೋತ್ಸವ
  • ಗುರುವಿನ ಕೃಪೆ
ಚಿತ್ರದುರ್ಗ: ಭಗವಂತನ ಕೃಪಾಕಟಾಕ್ಷ ಪಡೆಯಬೇಕಾದರೆ ಮೊದಲಿಗೆ ಗುರುವಿನ ಕೃಪೆ ಇರಬೇಕೆಂದು ಬೀದರ್ ಶ್ರೀ ಗುರುದೇವಾಶ್ರಮದ ಶ್ರೀ ಗ ಣಪತಿ ಮಹರಾಜ್ ಹೇಳಿದರು.
ನಗರದ ಶ್ರೀ ಕಬೀರಾನಂದಾಶ್ರಮದ ೯೬ನೇ ಶಿವರಾತ್ರಿ ಮಹೋತ್ಸವದ ೨ನೇ ದಿನವಾದ ಗುರುವಾರ ಕರ‍್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡಿದರು.
ಗುರುವಿನಿಂದ ಭಗವಂತನ ಕೃಪೆಗೆ ಪಾತ್ರವಾಗಲು ಸಾಧ್ಯವಾಗಲಿದೆ. ಭೌತಿಕ ಆನಂದಕ್ಕಿAತ ಮನಸ್ಸಿನ ಆನಂದ ಬಹಳ ಮುಖ್ಯ. ಮನಸ್ಸಿನ ಶಾಂತಿಗಾಗಿ ಪರಮಾತ್ಮನ ಮೊರೆ ಹೋಗಬೇಕಿದೆ. ಪರಮಾತ್ಮನ ಧಾನ್ಯದಿಂದ ಆನಂದ ಸಿಗುತ್ತದೆ. ಮನಸ್ಸು ಪರಮಾತ್ಮನ ಕಡೆಗೆ ವಾಲಿದಾಗ ಮೋಕ್ಷ ಸಿಗಲು ಸಾಧ್ಯವಿದೆ. ಗುರು ಶಾಂತಿಯ ಮಾರ್ಗದರ್ಶಕ ಎಂದರು.
ಭಗವAತ ಪ್ರಾಣಿ ಪಕ್ಷಿಗಳಿಗಿಂತ ಮಾನವನಿಗೆ ಹೆಚ್ಚಿನ ಬುದ್ಧಿ ಕೊಟ್ಟಿದ್ದಾನೆ. ವಿಜ್ಞಾನದಿಂದಾಗಿ ಇವತ್ತು ಏನೆಲ್ಲ ಸಾಧ್ಯವಾಗಿದೆ. ಮಾನವನ ಭೌತಿಕ ಮತ್ತು ಅಧ್ಯಾತ್ಮಿಕದ ಬೆಳವಣಿಗೆಗೆ ಬುದ್ಧಿ ಕಾರಣವಾಗಿದೆ ಎಂದರು.
ಹಾವೇರಿ ಜಿಲ್ಲೆ ಹಾನಗಲ್ಲ ತಾಲೂಕು ಅರಳೇಶ್ವರ ಸಿದ್ಧಾರೂಢ ಮಠದ ಶ್ರೀ ಶಂಕರಾನAದ ಸ್ವಾಮೀಜಿ ಮಾತನಾಡಿ, ಗುರು ಇಲ್ಲದೆ ಲೌಕಿಕ ಬದುಕಿನ ಜೀವನ ಸಾರ್ಥಕವಾಗುವುದಿಲ್ಲ. ಮುಕ್ತಿ ಪಡೆಯಲು ಗುರು, ಜ್ಞಾನದ ಹಾಗೂ ಮನಸ್ಸಿನ ಶುದ್ಧಿಗೆ ಸತ್ಸಂಗಗಳ ಅಗತ್ಯವಿದೆ ಎಂದರು.
ಹಾವೇರಿಯ ಕೂಸನೂರು ಶ್ರೀ ತಿಪ್ಪಯ್ಯಸ್ವಾಮಿ ಮಠದ ಶ್ರೀ ಜ್ಯೋತಿರ್ಲಿಂಗಾನAದ ಶ್ರೀಗಳು ಮಾತನಾಡಿ, ಅಂತಃಕರಣದಲ್ಲಿ ದ್ವೇಷ, ಪಾಪ ಕರ‍್ಯಗಳನ್ನು ಮಾಡಿದಾಗ ಮನಸ್ಸು ಚಂಚಲವಾಗುತ್ತದೆ. ಮನಸ್ಸಿನ ನಿಗ್ರಹಕ್ಕೆ ಗುರುವಿನ ಮೊರೆ ಹೋಗಬೇಕಿದೆ ಎಂದರು.
ಹಳಿಯಾಳ ನಿತ್ಯಾನಂದಾಶ್ರಮದ ಶ್ರೀ ಸುಬ್ರಹ್ಮಣ್ಯ ಶ್ರೀಗಳು, ಹರಿಹರದ ಶ್ರೀ ಸಿದ್ದಾಶ್ರಮದ ಯೋಗಾನಂದ ಶ್ರೀಗಳು, ಕಬೀರಾನಂದಾ ಶ್ರಮದ ಶ್ರೀ ಶಿವಲಿಂಗಾನAದ ಶ್ರೀಗಳು, ಅನಿತಾ ಮಾತಾಜಿ ಸಾನ್ನಿಧ್ಯ ವಹಿಸಿದ್ದರು.
ರಾಜ್ಯಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ. ರಾಮಪ್ಪ, ಕುಡಾ ಮಾಜಿ ಅಧ್ಯಕ್ಷ ತಿಪ್ಪೇಸ್ವಾಮಿ, ಕೆಎಸ್‌ಇಎಬಿ ಉಪ ನಿರ್ದೇಶಕ ದೇವರಾಜ್, ನಗರಸಭೆ ಮಾಜಿ ಸದಸ್ಯ ರಮೇಶ್, ಚಿತ್ರದುರ್ಗ ತಾಪಂ ಇಒ ರವಿಕುಮಾರ್, ಮಹೋತ್ಸವ ಸಮಿತಿ ಅಧ್ಯಕ್ಷ ಭಾಸ್ಕರ್, ಎಂ.ಎ.ಸೇತೂರಾA ಇದ್ದರು.
ಸುಬ್ರಾಯಭಟ್ಟರು ವೇದ ಘೋಷ ಮಾಡಿದರು. ಗಂಗಾಧರ್ ಪ್ರಾರ್ಥಿಸಿದರು, ಮಂಜುನಾಥ್ ಗುಪ್ತ ಸ್ವಾಗತಿಸಿದರು. ಮುರುಗೇಶ್ ನಿ ರೂಪಿಸಿದರು.
ಅಂಜನಾ ನÊತ್ಯ ಕಲಾ ಕೇಂದ್ರದ ಕಲಾವಿದೆಯರು ಭರತನಾಟ್ಯ ವೈವಿಧ್ಯ ಪ್ರದರ್ಶಿಸಿದರು. ಗಣೇಶ ಮಾರುತಿ ಭಜನಾ ತಂಡ ಭಜನೆ ಕರ‍್ಯಕ್ರಮ ನಡೆಸಿಕೊಟ್ಟಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net