ಮೃತ ಶಾಸಕರ ಕುಟುಂಬಕ್ಕೆ ಟಿಕೆಟ್ ಕೊಡುವ ಕಾನೂನು ಪಕ್ಷದಲ್ಲಿಲ್ಲ. ಸಮಯ ಸಂದರ್ಭಕ್ಕೆ ಅನುಗುಣವಾಗಿ ಟಿಕೆಟ್ ನೀಡಿದ್ದಾರೆ ಅಷ್ಟೇ. ನಿಷ್ಠಾವಂತ ಕಾರ್ಯಕರ್ತ ನಾನು. ಪಕ್ಷದ ಗೆರೆ ದಾಟುವುದಿಲ್ಲ. ತಾಲೂಕು ಕಾಂಗ್ರೆಸ್‌ನಲ್ಲಿ ಯಾವುದೇ ಗುಂಪುಗಳಿಲ್ಲ. ಇದ್ದರೂ ಪಕ್ಷದ ತೀರ್ಮಾನವೇ ಅಂತಿಮ ಎಂದರು. ಮಂಜುನಾಥ್, ಪದ್ಮನಾಭ್, ಪಿ.ಎಸ್. ಸಾದತ್ ವುಲ್ಲಾ, ಎಚ್.ಆರ್. ತಿಮ್ಮಯ್ಯ, ಕಲಾವತಿ, ಗೀತಾ, ಓಬಳೇಶ್, ಜಿ. ದಾದಾಪೀರ್, ಮಹಮ್ಮದ್ ರಫೀಕ್, ಧ್ರುವಕುಮಾರ್, ಸುಬಾನ್ ಇತರರಿದ್ದರು.