ವಿಜೃಂಭಣೆಯ ಏಕಾದಶಿ ಉತ್ಸವ Ekadashi

ಹೊಸದುರ್ಗದ ಪಾಂಡುರಂಗ ಸ್ವಾಮಿ ದೇವಾಲಯದಲ್ಲಿ ಶನಿವಾರ ಆಶಾಡ ಏಕಾದಶಿ ಮಹೋತ್ಸವದ ಅಂಗವಾಗಿ ರುಕ್ಮಿಣಿ ಪಾಂಡುರಂಗ ಸ್ವಾಮಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. Ekadashi
ಹೊಸದುರ್ಗದ ಪಾಂಡುರಂಗ ಸ್ವಾಮಿ ದೇವಾಲಯದಲ್ಲಿ ಶನಿವಾರ ಆಶಾಡ ಏಕಾದಶಿ ಮಹೋತ್ಸವದ ಅಂಗವಾಗಿ ರುಕ್ಮಿಣಿ ಪಾಂಡುರಂಗ ಸ್ವಾಮಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. Ekadashi
Published on

ಪ್ರಮುಖ ಮುಖ್ಯಾಂಶಗಳು

  • ದೇಗುಲಕ್ಕೆ ಭಕ್ತರ ದಂಡು
  • ದೇವರ ಪಾದಸ್ಪರ್ಶಕ್ಕೆ ಅವಕಾಶ
ಹೊಸದುರ್ಗ: ಪಟ್ಟಣದ ಗಾಂಧಿ ವೃತದಲ್ಲಿರುವ ಶ್ರೀ ಪಾಂಡುರಂಗ ಸ್ವಾಮಿ ದೇವಾಲಯದಲ್ಲಿ ಶನಿವಾರ ಆಶಾಡ ಏಕಾದಶಿ ಮಹೋತ್ಸವ ವಿಜೃಂಭಣೆಯಿಂದ ನೆರವೇರಿತು. ಸಾವಿರಾರು ಸಂಖ್ಯೆಯ ಭಕ್ತರು ಉತ್ಸವದಲ್ಲಿ ಪಾಲ್ಗೊಂಡಿದ್ದರು. Ekadashi
ಮುಂಜಾನೆ ದೇವಾಲಯದಲ್ಲಿ ಕಾಕಡಾರತಿಯೊಂದಿಗೆ ಏಕಾದಶಿ ಉತ್ಸವಕ್ಕೆ ಚಾಲನೆ ನೀಡಲಾಯಿತು. ಪಾಂಡುರಂಗ ಸ್ವಾಮಿ ಹಾಗೂ ರುಕ್ಮಿಣಿ ದೇವಿಯ ಮೂಲ ಶಿಲಾಮೂರ್ತಿಗಳಿಗೆ ಪಂಚಾಮೃತ ಅಭಿಷೇಕ, ಮಹಾಪೂಜೆ, ಮಂಗಳಾರತಿ ಸೇರಿ ವಿವಿಧ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಲಾಯಿತು.
ದೇವಾಲಯಕ್ಕೆ ಆಗಮಿಸಿದ ಎಲ್ಲ ಭಕ್ತರಿಗೂ ಪಾದಸ್ಪರ್ಶ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಮಹಾ ಮಂಗಳಾರತಿ ನಂತರ ಬೆಳಗ್ಗೆ 9 ಗಂಟೆಯಿಂದ ರಾತ್ರಿ 9ರವರೆಗೂ ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡಲಾಗಿತ್ತು. ಸರದಿ ಸಾಲಿನಲ್ಲಿ ಭಕ್ತರು ಗರ್ಭಗುಡಿ ಪ್ರವೇಶಿಸಿ ಪಾಂಡುರಂಗ ಸ್ವಾಮಿ ಹಾಗೂ ರುಕ್ಮಿಣಿ ಅಮ್ಮನವರ ಪಾದಗಳನ್ನು ಮುಟ್ಟಿ ನಮಸ್ಕರಿಸಿದರು.
ದೇವಾಲಯವನ್ನು ಸಂಪೂರ್ಣ ಹೂವುಗಳಿಂದ ಅಲಂಕರಿಸಲಾಗಿತ್ತು. ಭಾವಸಾರ ಕ್ಷತ್ರೀಯ ಸಮಾಜದ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಮಾಜದ ಜನರು ವಿಶೇಷ ಉಡುಗೆ ಧರಿಸಿ ಪಾಲ್ಗೊಂಡಿದ್ದರು. ಭಕ್ತರಿಗೆ ಪ್ರಸಾದವಾಗಿ ಐದು ಸಾವಿರಕ್ಕೂ ಹೆಚ್ಚು ಲಡ್ಡು ವಿತರಿಸಲಾಯಿತು.
ರಾಜ್ಯ ಖನಿಜ ನಿಗಮದ ಮಾಜಿ ಅಧ್ಯಕ್ಷ ಎಸ್. ಲಿಂಗಮೂರ್ತಿ, ಪುರಸಭೆ ಮಾಜಿ ಸದಸ್ಯ ಆರ್.ಡಿ. ಪ್ರಶಾಂತ್, ಹೊಸದುರ್ಗ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ರಘುವೀರ ಗುಜ್ಜಾರ್, ಭಾವಸಾರ ಕ್ಷತ್ರೀಯ ಸಮಾಜದ ಮುಖಂಡರಾದ ಆರ್.ಡಿ. ಸೀತಾರಾಮ ರಾವ್, ಚೇತನ್ ಬಾಬು, ಮಾಲತೇಶ ಗುಜ್ಜರ್, ಪ್ರಜ್ವಲ್ ಗುಜ್ಜರ್, ದೀಪಕ್, ಶ್ಯಾಮ ಸುಂದರ ಇತರರು ಪಾಲ್ಗೊಂಡಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net