ಬಾಲ ಕಾರ್ಮಿಕ ಪದ್ಧತಿ ವಿರೋಽ ದಿನದ ಅಂಗವಾಗಿ ಚಿತ್ರದುರ್ಗದಲ್ಲಿ ಶುಕ್ರವಾರ ಆಯೋಜಿಸಿದ್ದ ಜಾಗೃತಿ ಜಾಥಾಕ್ಕೆ ಹಿರಿಯ ಸಿವಿಲ್ ನ್ಯಾಯಾಽÃಶ ಡಿ.ಜೆ. ಸುದೀನ್‌ಕುಮಾರ್ ಚಾಲನೆ ನೀಡಿದರು. ಡಾ.ಕೆ.ಜೆ. ಕಾಂತರಾಜು, ಎಚ್.ವಿ. ಮಹೇಶ್ವರಪ್ಪ, ಜಗದೀಶ್ ಗುಂಡೇರಿ, ಎಂ.ವಿ. ವೀಣಾ, ರೇಖಾ, ಅನಿಲ್ ಬಿ. ಬಗಟಿ, ಪಿ. ಭೀಮೇಶ್, ಪಿ. ಸತೀಶ್ ಕುಮಾರ್, ಡಿ.ಒ.ಮುರಾರ್ಜಿ ಇತರರು ಇದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಗ್ಯಾರಂಟಿಗಳ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಶಿವಣ್ಣ ಅಭಿಮತ
ಚಿತ್ರದುರ್ಗದಲ್ಲಿ ಬಾಲಕಾರ್ಮಿಕ ವಿರೋಽ ದಿನಾಚರಣೆ
ಜಾಗೃತಿ ಜಾಥಾ
ಚಿತ್ರದುರ್ಗ: ಮಕ್ಕಳಿಂದ ದುಡಿಸಿಕೊಳ್ಳುವ ವ್ಯವಸ್ಥೆಗೆ ತಿಲಾಂಜಲಿ ಹಾಡಿದಾಗ ಮಾತ್ರ ಅವರ ಭವಿಷ್ಯ ಉತ್ತಮವಾಗಲಿದೆ ಎಂದು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಆರ್. ಶಿವಣ್ಣ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಽಕಾರ, ಜಿಪಂ, ಪೊಲೀಸ್, ಕಾರ್ಮಿಕ ಹಾಗೂ ಶಿಕ್ಷಣ ಇಲಾಖೆಗಳು, ವಕೀಲರ ಸಂ ಘ, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿ, ಆಶ್ರಿತ ಸಂಸ್ಥೆ ಹಾಗೂ ವಿವಿಧ ಸ್ವಯಂ ಸೇವಾ ಸಂಸ್ಥೆಗಳು,
ಉದ್ಯೋಗದಾತರ ಹಾಗೂ ಕಾರ್ಮಿಕ ಸಂಘಗಳ ಆಶ್ರಯದಲ್ಲಿ ಜಿಲ್ಲಾ ಪಂಚಾಯಿತಿಯಲ್ಲಿ ಶುಕ್ರವಾರ ಆಯೋಜಿಸಿದ್ದ ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಽ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಮಕ್ಕಳು ಶಿಕ್ಷಣದಿಂದ ವಂಚಿತರಾದರೆ ಅವರ ಸಾಧನೆಗೆ ಮುಳುವಾಗುತ್ತದೆ. ಆರ್ಥಿಕ ಸಂಕಷ್ಟದ ನೆಪದಲ್ಲಿ ಮಕ್ಕಳನ್ನು ದುಡಿಮೆಗೆ ಕಳಿಸುವುದು ಬೇಸರದ ಸಂಗತಿ. ಮಕ್ಕಳ ಒಳಿತಿಗಾಗಿ ಬಾಲ ಕಾರ್ಮಿಕ ಪದ್ಧತಿ ನಿಷೇಧ ಕಾಯ್ದೆ ಅನುಷ್ಠಾನಗೊಂಡಿದೆ.
ಇದಕ್ಕೆ ಪೂರಕವಾಗಿ ಬಿಸಿಯೂಟ, ವಿದ್ಯಾರ್ಥಿ ವೇತನ ವಿತರಣೆ, ವಿದ್ಯಾರ್ಥಿ ನಿಲಯಗಳು, ಪಾಲಕರ ಆರ್ಥಿಕಾಭಿವೃದ್ಧಿಗೆ ಗ್ಯಾರಂ ಟಿಗಳು, ಉಚಿತ ವಿದ್ಯಾರ್ಥಿ ಬಸ್‌ಪಾಸ್ ವಿತರಣೆ, ಮಕ್ಕಳ ಸಹಾಯವಾಣಿ ೧೦೯೮ ಸ್ಥಾಪನೆ, ಬಾಲ ನ್ಯಾಯ ಮಂಡಳಿ ರಚನೆ ಸೇರಿ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ ಎಂದರು.
ವಕೀಲರ ಸಂಘದ ಅಧ್ಯಕ್ಷ ಎಚ್.ಎಸ್. ಮಹೇಶ್ವರಪ್ಪ ಮಾತನಾಡಿ, ಯುವಶಕ್ತಿ ಶೇ.೧೦೦ ಅಕ್ಷರಸ್ಥರಾದರೆ ಅಂತಹ ದೇಶ ಪ್ರಪಂ ಚದಲ್ಲೇ ಎಲ್ಲ ಕ್ಷೇತ್ರಗಳಲ್ಲೂ ಮುಂದುವರಿಯಲು ಸಾಧ್ಯವಾಗಲಿದೆ. ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು. ಆದ್ದರಿಂದ ಯಾವು ದೇ ಒಂದು ಮಗು ಶಿಕ್ಷಣದಿಂದ ವಂಚಿತವಾಗಬಾರದು ಎಂದರು.
ಕಾರ್ಮಿಕ ನಿರೀಕ್ಷಕ ಭೀಮೇಶ್ ಪ್ರಾಸ್ತಾವಿಕವಾಗಿ ಮಾತನಾಡಿ, ದೇಶದ ಹತ್ತಾರು ಸಮಸ್ಯೆಗಳಲ್ಲಿ ಬಾಲಕಾರ್ಮಿಕ ಪದ್ಧತಿ ಕೂಡ ಪ್ರಮುಖವಾಗಿದೆ. ಶಿಕ್ಷಣ ಪ್ರತಿಯೊಬ್ಬರ ಹಕ್ಕು. ವಿಶ್ವದಾದ್ಯಂತ ಬಾಲಕಾರ್ಮಿಕ ಪದ್ಧತಿ ವಿರೋಽ ದಿನವನ್ನು ಪ್ರತಿ ವರ್ಷ ಆಚರಿ ಸಲಾಗುತ್ತಿದೆ.
ಯಾವುದೇ ಮಗು ಅಪಾಯಕಾರಿ, ಅಪಾಯಕಾರಿ ಅಲ್ಲದ ಉದ್ಯಮಗಳಲ್ಲಿ ಕೆಲಸ ಮಾಡುತ್ತಿರುವುದು ಕಂಡು ಬಂದರೆ, ಮಾಲೀಕರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದರು.
ತಹಸೀಲ್ದಾರ್ ಗೋವಿಂದರಾಜ್ ಅವರು ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಽ ದಿನದ ಅಂಗವಾಗಿ ಪ್ರಮಾಣ ವಚನ ಬೋಽಸಿದರು. ಅಪರಾಧ ಶಾಸö ವಿಭಾಗದ ವಿಶ್ರಾಂತ ಪ್ರಾಧ್ಯಾಪಕ ನಟರಾಜ್ ಉಪನ್ಯಾಸ ನೀಡಿದರು.
ಸಂಪೂರ್ಣ ನಿರ್ಮೂಲನೆಗೆ ಸಲಹೆ
ಬಾಲಕಾರ್ಮಿಕ ಮತ್ತು ಬಾಲ ಕಿಶೋರ ಕಾರ್ಮಿಕ ಪದ್ಧತಿಯನ್ನು ಕೇವಲ ವಿರೋಽಸುವುದಲ್ಲ, ಅದನ್ನು ಸಮಾಜದಿಂದ ಸಂಪೂರ್ಣ ನಿರ್ಮೂಲನೆ ಮಾಡಬೇಕಿದೆ ಎಂದು ಹಿರಿಯ ಸಿವಿಲ್ ನ್ಯಾಯಾಽÃಶ, ಜಿಲ್ಲಾ ಕಾನೂನು ಸೇವೆಗಳ ಪ್ರಾಽಕಾರದ ಸದಸ್ಯ ಕಾರ್ಯದರ್ಶಿ ಡಿ.ಜೆ. ಸುದೀನ್‌ಕುಮಾರ್ ಹೇಳಿದರು.
ಚಿತ್ರದುರ್ಗ ಸಂಪಿಗೆ ಸಿದ್ದೇಶ್ವರ ಪ್ರೌಢಶಾಲೆ ಆವರಣದಲ್ಲಿ ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಽ ದಿನದ ಅಂಗವಾಗಿ ಆಯೋಜಿ ಸಿದ್ದ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮಕ್ಕಳು ನಮ್ಮ ದೇಶದ ಆಸ್ತಿ. ಅವರ ಹಕ್ಕುಗಳನ್ನು ಹತ್ತಿಕ್ಕದೆ ಉತ್ತಮ ಪ್ರಜೆಗಳನ್ನಾಗಿ ಪಾಲಕರು ಬೆಳೆಸಬೇಕು. ಬಾಲ, ಕಿಶೋರ ಕಾರ್ಮಿಕರು ಕಂಡು ಬಂದರೆ ಕೂಡಲೇ ಅವರ ರಕ್ಷಣೆಗೆ ಧಾವಿ ಸಬೇಕು ಎಂದು ನಾಗರಿಕರಿಗೆ ಸಲಹೆ ನೀಡಿದರು.
ಶಾಲಾ ಆವರಣದಿಂದ ಆರಂಭವಾದ ಜಾಥಾ ನಗರದ ಪ್ರಮುಖ ರಸ್ತೆಗಳ ಮೂಲಕ ಒನಕೆ ಓಬವ್ವ ವÊತ್ತಕ್ಕೆ ಆಗಮಿಸಿದಾಗ ಅಲ್ಲಿ ಮಾನವ ಸರಪಳಿ ನಿರ್ಮಿಸಲಾಯಿತು. ಸುದೀನ್‌ಕುಮಾರ್ ಪ್ರಮಾಣ ವಚನ ಬೋಽಸಿದರು.
ಎಸಿ ಡಾ.ಕೆ.ಜೆ. ಕಾಂತರಾಜು, ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಜಗದೀಶ್ ಗುಂಡೇರಿ, ಸಮಾಜ ಕಲ್ಯಾಣ ಇಲಾಖೆ ಡಿಡಿ ಬಿ. ಮಲ್ಲಿಕಾರ್ಜುನ, ಡಿಡಿಪಿಯು ಎಸ್.ವಿ. ಶಶಿಧರ್, ಡಿಡಿಪಿಐ ಎಂ.ಆರ್. ಮಂಜುನಾಥ್, ಜಿಲ್ಲಾ ದೈಹಿಕ ಶಿಕ್ಷಣಾಽಕಾರಿ ಚಿದಾನಂ ದ ಸ್ವಾಮಿ, ಶಿಶು ಅಭಿವೃದ್ಧಿ ಯೋಜನಾಽಕಾರಿ ಎಂ.ವಿ. ವೀಣಾ.
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಽಕಾರಿ ರೇಖಾ, ಕಾ ರ್ಮಿಕ ಅಽಕಾರಿ ಅನಿಲ್ ಬಿ. ಬಗಟಿ, ಕಾರ್ಮಿಕ ನಿರೀಕ್ಷಕ ಪಿ. ಭೀ ಮೇಶ್, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿ ಯೋಜ ನಾ ನಿರ್ದೇಶಕ ಪಿ. ಸತೀಶ್ ಕುಮಾರ್, ಆಶ್ರಿತ ಸಂಸ್ಥೆಯ ಡಿ.ಒ. ಮುರಾರ್ಜಿ, ನಾನಾ ಕಾರ್ಮಿಕ ಸಂಘಗಳ ಪದಾಽಕಾರಿಗಳು ಇದ್ದರು.