ಮುಂಗಾರಿನಲ್ಲಿ ಸೂರ್ಯಕಾಂತಿ ಕಂಪು

ಸೂರ್ಯಕಾಂತಿ
ಸೂರ್ಯಕಾಂತಿ
Published on

ಪ್ರಮುಖ ಮುಖ್ಯಾಂಶಗಳು

  • ಜಿಲ್ಲೆಯಲ್ಲಿ ೬ ಸಾವಿರ ಹೆಕ್ಟೇರ್ ನಿರೀಕ್ಷೆ
  • ವಿಸ್ತೀರ್ಣ ಏರಿಕೆಗೆ ದರ ಹೆಚ್ಚಳ ಕಾರಣ
  • ಎಣ್ಣೆಕಾಳು ಬೆಳೆ
ಕೆ.ಎಸ್. ಪ್ರಣವಕುಮಾರ್ ಚಿತ್ರದುರ್ಗ
ಸೂರ್ಯಕಾಂತಿ ರಾಜ್ಯದ ಪ್ರಮುಖ ವಾಣಿಜ್ಯ, ಎಣ್ಣೆಕಾಳು ಬೆಳೆಗಳಲ್ಲಿ ಒಂದಾಗಿದ್ದು, ಇತ್ತೀಚಿನ ವರ್ಷಗಳಲ್ಲಿ ಬರದ ನಾಡು ಚಿತ್ರ ದುರ್ಗ ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲು ರೈತರು ಉತ್ಸುಕರಾಗಿದ್ದಾರೆ.
ವರ್ಷದಿಂದ ವರ್ಷಕ್ಕೆ ಸೂರ್ಯಕಾಂತಿ ದರ ತುಸು ಏರಿಕೆ ಕಾಣುತ್ತಿದ್ದು, ಜಿಲ್ಲೆಯಲ್ಲಿ ಈಗಾಗಲೇ ೩.೫ ಸಾವಿರ ಹೆಕ್ಟೇರ್‌ನಲ್ಲಿ ಬಿತ್ತನೆ ಕಾರ್ಯ ನಡೆದಿದೆ. ಈ ಬಾರಿ ಬೆಳೆ ವಿಸ್ತೀರ್ಣ ೬ ಸಾವಿರ ಹೆಕ್ಟೇರ್‌ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಎಣ್ಣೆಕಾಳು ಬೆಳೆಗಳ ಪೈಕಿ ಶೇಂಗಾ ಜಿಲ್ಲೆಯಲ್ಲಿ ಮೊದಲ ಸ್ಥಾನದಲ್ಲಿದ್ದು, ನಂತರದಲ್ಲಿ ಸೂರ್ಯಕಾಂತಿ ಹೆಚ್ಚು ಕ್ಷೇತ್ರ ವಿಸ್ತೀರ್ಣ ಹೊಂದಿದೆ.
ಚಿತ್ರದುರ್ಗ ತಾಲೂಕಿನ ಭರಮಸಾಗರ, ತುರುವನೂರು, ಹಿರೇಗುಂಟನೂರು, ದೊಡ್ಡಸಿದ್ದವ್ವನಹಳ್ಳಿ, ಬೆಳಗಟ್ಟ, ದ್ಯಾಮವ್ವನಹಳ್ಳಿ, ಹಿರಿಯೂರು ತಾಲೂಕಿನ ಜವಗೊಂಡನಹಳ್ಳಿ ಮತ್ತಿತರ ಭಾಗಗಳ ಕಪ್ಪು ಮಣ್ಣಿನಲ್ಲಿ ಸೂರ್ಯಕಾಂತಿ ಬೆಳೆಯಲಾಗುತ್ತಿದೆ.
ಮುಂಗಾರು ಪೂರ್ವ ಮಳೆಯು ಆರಂಭವಾಗುತ್ತಿದ್ದAತೆ ಮೇ ಕೊನೆಯ ವಾರದಿಂದ ಜೂನ್ ಮೊದಲ ವಾರದವರೆಗೆ ಸೂರ್ಯ ಕಾಂತಿ ಬಿತ್ತನೆಗೆ ಅತ್ಯಂತ ಸೂಕ್ತ ಸಮಯವಾಗಿದ್ದು, ವರುಣ ಕೃಪೆ ತೋರಿದಲ್ಲಿ ಉತ್ತಮ ಇಳುವರಿಯೊಂದಿಗೆ ಸೂರ್ಯನಂತೆ ರೈತರ ಮೊಗದಲ್ಲಿ ಕಾಂತಿ ಕಾಣುವ ಯೋಗ್ಯ ಬೆಳೆಯಾಗಿದೆ.
ನೀರು ಬಸಿದು ಹೋಗುವಂತಹ ಕೆಂಪು ಮತ್ತು ಕಪ್ಪು ಮಣ್ಣು ಸೂರ್ಯಕಾಂತಿ ಬೆಳೆಗೆ ಸೂಕ್ತ. ಭೂಮಿಯ -Àಲವತ್ತತೆ ಕ್ಷೀಣ, ಪಕ್ಷಿ ಗಳ ಕಾಟ, ರೋಗಗಳು ಸೇರಿ ಮತ್ತಿತರ ಕಾರಣಕ್ಕೆ ಕಡಿಮೆಯಾಗಿದ್ದ ಸೂರ್ಯಕಾಂತಿ ಬೆಳೆಯ ಕ್ಷೇತ್ರ ವಿಸ್ತರಣೆ ಇತ್ತೀಚಿನ ವರ್ಷ ಗಳಲ್ಲಿ ಜಿಲ್ಲೆಯಲ್ಲಿ ವೃದ್ಧಿಸುತ್ತಿದೆ.
ಖಾದ್ಯ ತೈಲ ಬೆಲೆ ಹೆಚ್ಚಳವು ರೈತರು ಪುನಃ ಸೂರ್ಯಕಾಂತಿ ಬೆಳೆಯತ್ತ ವಾಲುವಂತೆ ಮಾಡಿದೆ. ಜಮೀನುಗಳಲ್ಲಿ ಸೂರ್ಯನ ಕಿರಣದಂತೆ ಕಂಗೊಳಿಸುವ ದುಂಡಾಕಾರದ ಹಳದಿ ಹೂವು, ಹಸಿರು ದಂಟು, ಹಸಿರೆಲೆ, ಕಪ್ಪು ಕಾಳುಗಳನ್ನು ಒಳಗೊಂಡು ವರ್ಣ ರಂಜಿತವಾಗಿ ಕಂಗೊಳಿಸುವ ಮೂಲಕ ಅತ್ಯಂತ ಆಕರ್ಷಕ, ಸುಂದರ ಬೆಳೆಗಳಲ್ಲಿ ಒಂದಾಗಿದೆ.
ಮೂರೂವರೆ ತಿಂಗಳ ಅವಽಯ ಈ ಬೆಳೆಯನ್ನು ಮುಂಗಾರು ಮಾತ್ರವಲ್ಲದೆ, ಹಿಂಗಾರಿನಲ್ಲೂ ಬೆಳೆಯಲಾಗುತ್ತದೆ. ಮುಂಗಾರು ಪೂರ್ವದಲ್ಲಿ ಬಿತ್ತಿದ ಹಲವರು ಹಿಂಗಾರು ಆರಂಭದಲ್ಲಿ ಇಳುವರಿ ಪಡೆದು, ಹಿಂಗಾರಿನಲ್ಲೂ ಬಿತ್ತುವ ಯೋಜನೆ ಹಾಕಿಕೊಂಡಿರು ತ್ತಾರೆ.
೨೦೨೪ರ ವೇಳೆ ಜಿಲ್ಲೆಯಲ್ಲಿ ತೀವ್ರ ಬರದ ಹಿನ್ನೆಲೆ ಸೂರ್ಯಕಾಂತಿ ಬೆಳೆ ಸಂಪೂರ್ಣ ಕೈಕೊಟ್ಟಿತ್ತು. ಆದರೆ, ೨೦೨೫ರ ಮುಂ ಗಾರು ಪೂರ್ವದಲ್ಲಿ ಸುರಿದ ಉತ್ತಮ ಮಳೆಗೆ ಸಾಕಷ್ಟು ರೈತರು ನಾಟಿ ಮಾಡಿದ್ದರು.
ಈ ಬಾರಿಯೂ ರೈತರು ಹೆಚ್ಚಿನ ಪ್ರಮಾ ಣದಲ್ಲಿ ಬಿತ್ತನೆಗೆ ಮುಂದಾಗಿದ್ದು, ಭೂಮಿ ಸಿದ್ಧತೆ ಮಾಡಿಕೊಂಡವರು ಕಾರ್ಯ ಪ್ರವೃತ್ತ ರಾಗಿದ್ದಾರೆ. ಜೂನ್ ೩ನೇ ವಾರದಲ್ಲಿ ಮತ್ತೊಂದೆರೆಡು ಉತ್ತಮ ಮಳೆಯಾದಲ್ಲಿ ಬಿತ್ತನೆ ಚಟುವಟಿಕೆ ಗರಿಗೆದರಲಿದೆ.
ಕಳೆದ ವರ್ಷ ೭೨೮೦ ರೂ. ಬೆಂಬಲ ಬೆಲೆ: ಕಳೆದ ವರ್ಷ ಸೂರ್ಯಕಾಂತಿಯ ಕನಿಷ್ಠ ಬೆಂಬಲ ಬೆಲೆ ಪ್ರತಿ ಕ್ವಿಂಟಾಲ್‌ಗೆ ೭೨೮೦ ರೂ. ಇತ್ತು. ಈ ಬಾರಿ ಪ್ರತಿ ಕ್ವಿಂಟಾಲ್‌ಗೆ ಹಿಂದಿಗಿAತಲೂ ತುಸು ಏರಿಕೆಯಾಗಿದೆ ಎಂಬ ಮಾಹಿತಿ ಇದೆ.
೨೦೨೫ರಲ್ಲಿ ೫೧೯೮ ಹೆಕ್ಟೇರ್‌ನಲ್ಲಿ ಬಿತ್ತನೆ
ಜಿಲ್ಲಾದ್ಯಂತ ೨೦೨೫ರ ಮುಂಗಾರು ಹಂಗಾಮಿನಲ್ಲಿ ಸುಮಾರು ೫೧೬೦, ಹಿಂಗಾರಿನಲ್ಲಿ ೩೮ ಸೇರಿ ಒಟ್ಟು ೫೧೯೮ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿತ್ತು. ೨೦೨೪ರಲ್ಲಿ ಮುಂಗಾರು ವೇಳೆ ೪೭೩೨, ಹಿಂಗಾರಿನಲ್ಲಿ ೮೪ ಸೇರಿ ಒಟ್ಟು ೪೮೧೬ ಹೆಕ್ಟೇರ್‌ ನಷ್ಟು ನಾಟಿ ಮಾಡಲಾಗಿತ್ತು. ಈ ಪೈಕಿ ಚಿತ್ರದುರ್ಗ ತಾಲೂಕಿನಲ್ಲೇ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗುತ್ತದೆ. ಉಳಿದಂತೆ ಜಿಲ್ಲೆಯ ಚಳ್ಳಕೆರೆ, ಹಿರಿಯೂರು, ಮೊಳಕಾಲ್ಮುರು ತಾಲೂಕುಗಳಲ್ಲೂ ರೈತರು ಆಸಕ್ತಿ ತೋರುತ್ತಿದ್ದಾರೆ.
ಕ್ವಿಂಟಾಲ್‌ಗೆ ೭೭೨೧ ರೂ. ಬೆಂಬಲ ಬೆಲೆ
ಜಿಲ್ಲೆಯಲ್ಲಿ ಬೆಂಬಲ ಬೆಲೆ ಯೋಜನೆಯಡಿ ಸೂರ್ಯಕಾಂತಿ ಬೆಳೆ ಪ್ರತಿ ಕ್ವಿಂಟಾಲ್‌ಗೆ ೭೭೨೧ ದರ ನಿಗದಿಪಡಿಸಲಾಗಿದೆ ಎಂದು ಕೆಒಎ-ï ಖರೀದಿ ಅಽಕಾರಿ ಅಯ್ಯಪ್ಪ ಡಂಬಳ ಮಾಹಿತಿ ನೀಡಿದ್ದಾರೆ. ಚಿತ್ರದುರ್ಗದ ಕರ್ನಾಟಕ ಸಹಕಾರಿ ಎಣ್ಣೆಬೀಜ ಬೆಳೆಗಾರರ ಮಹಾಮಂಡಳದಿAದ ಖರೀದಿ ಪ್ರಕ್ರಿಯೆ ನಡೆಯಲಿದ್ದು, ಇನ್ನೂ ೨೦ ದಿನಗಳ ಕಾಲಾವಕಾಶವಿದೆ. ರೈತರಿಂದ ಪ್ರತಿ ಎಕರೆಗೆ ೪ ಕ್ವಿಂಟಾಲ್‌ನAತೆ, ಗರಿಷ್ಠ ೨೦ ಕ್ವಿಂಟಾಲ್‌ವರೆಗೂ ಖರೀದಿಸಬಹುದು. ಹೆಚ್ಚಿನ ಮಾಹಿತಿಗೆ ಕೆಒಎ-ï ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.
"

ಮುಂಗಾರು ಪೂರ್ವ ಮಳೆಯ ಆಶ್ರಯದಲ್ಲಿ ಸೂರ್ಯಕಾಂತಿ ಬೆಳೆಯುವುದು ರೈತರಿಗೆ ಅತ್ಯಂತ ಲಾಭದಾಯಕ. ಜಿಲ್ಲೆಯಲ್ಲಿ ಈಗಾಗಲೇ ಒಂದೆರೆಡು ಉತ್ತಮ ಮಳೆಯಾಗಿದ್ದು, ಬಿತ್ತನೆ ಕೈಗೊಂಡಿದ್ದಾರೆ. ಇನ್ನೊಂದೆರಡ್ಮೂರು ಮಳೆಯಾದರೂ ಉತ್ಸುಕತೆ ಹೆಚ್ಚಾಗಲಿದೆ.

— ಡಾ.ಬಿ. ಮಂಜುನಾಥ್, ಜಂಟಿ ಕೃಷಿ ನಿರ್ದೇಶಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net