ಮೌಢ್ಯ, ಜಾತಿ ಪದ್ಧತಿ ವಿರುದ್ಧ ಹೋರಾಟ ಅವಶ್ಯ Ideal

ಚಳ್ಳಕೆರೆ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಮಾನವ ಬಂಧುತ್ವ ವೇದಿಕೆ ಆಯೋಜಿಸಿದ್ದ ಗ್ರಾಮ ಸಂಚಾಲಕರ ಕಾರ್ಯಾಗಾರವನ್ನು ಪ್ರಗತಿಪರ ಚಿಂತಕ ಕಸವನಹಳ್ಳಿ ಶಿವಣ್ಣ ಹಲಗೆ ಬಾರಿಸಿ ಉದ್ಘಾಟಿಸಿದರು. ಎಸ್. ಬೈಲಮ್ಮ, ರೇಣುಕಮ್ಮ, ಪ್ರಭಾವತಿ, ಬಿ. ಹನುಮಂತಪ್ಪ, ಕೊರ್ಲಕುಂಟೆ ತಿಪ್ಪೇಸ್ವಾಮಿ, ಎಚ್. ಮಲ್ಲಿಕಾರ್ಜುನ ಇದ್ದರು. Ideal
ಚಳ್ಳಕೆರೆ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಮಾನವ ಬಂಧುತ್ವ ವೇದಿಕೆ ಆಯೋಜಿಸಿದ್ದ ಗ್ರಾಮ ಸಂಚಾಲಕರ ಕಾರ್ಯಾಗಾರವನ್ನು ಪ್ರಗತಿಪರ ಚಿಂತಕ ಕಸವನಹಳ್ಳಿ ಶಿವಣ್ಣ ಹಲಗೆ ಬಾರಿಸಿ ಉದ್ಘಾಟಿಸಿದರು. ಎಸ್. ಬೈಲಮ್ಮ, ರೇಣುಕಮ್ಮ, ಪ್ರಭಾವತಿ, ಬಿ. ಹನುಮಂತಪ್ಪ, ಕೊರ್ಲಕುಂಟೆ ತಿಪ್ಪೇಸ್ವಾಮಿ, ಎಚ್. ಮಲ್ಲಿಕಾರ್ಜುನ ಇದ್ದರು. Ideal
Published on

ಪ್ರಮುಖ ಮುಖ್ಯಾಂಶಗಳು

  • ಚಿಂತಕ ಕಸವನಹಳ್ಳಿ ಶಿವಣ್ಣ ಹೇಳಿಕೆ
ಚಳ್ಳಕೆರೆ: ಸಮಾನತೆಗೆ ಅಡ್ಡಿ ಆಗುತ್ತಿರುವ ಮೌಢ್ಯ, ಜಾತಿ ಪದ್ಧತಿ ವಿರುದ್ಧ ಹೋರಾಡುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಪ್ರಗತಿಪರ ಚಿಂತಕ ಕಸವನಹಳ್ಳಿ ಶಿವಣ್ಣ ಹೇಳಿದರು. Ideal
ನಗರದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಮಾನವ ಬಂಧುತ್ವ ವೇದಿಕೆ ಆಯೋಜಿಸಿದ್ದ ಗ್ರಾಮ ಸಂಚಾಲಕರ ಕಾರ್ಯಾಗಾರವನ್ನು ಹಲಗೆ ಬಾರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಸಮಾಜದಲ್ಲಿ ಸಮಾನತೆ ಕಂಡುಕೊಳ್ಳಲು ಬುದ್ಧ, ಬಸವ, ಅಂಬೇಡ್ಕರ್ ಅವರ ಆದರ್ಶಗಳನ್ನು ಪಾಲನೆ ಮಾಡಬೇಕು. ಶಿಕ್ಷಣ ಜೀವನ ಸುಧಾರಣೆಗೆ ಸೀಮಿತ ಆಗಬಾರದು. ಸಾಮಾಜಿಕ ಬದಲಾವಣೆಗೆ ದಾರಿ ಆಗಬೇಕು. ದೇವರು, ಪೂಜೆ, ಭಕ್ತಿ ಹೆಸರಿನಲ್ಲಿ ನಡೆಯುವ ಮೌಢ್ಯಾಚರಣೆಗಳನ್ನು ನಿಲ್ಲಿಸಬೇಕು ಎಂದು ತಿಳಿಸಿದರು.
ಮಾನವ ಬಂಧುತ್ವ ವೇದಿಕೆ ಜಿಲ್ಲಾ ಸಂಚಾಲಕಿ ಎಸ್. ಬೈಲಮ್ಮ ಮಾತನಾಡಿ, ಭಾರತೀಯರ ಅಸ್ತಿತ್ವ ಪ್ರಶ್ನಿಸುವ ಎಸ್‌ಐಆರ್ ವೇಳೆ ಅಗತ್ಯ ದಾಖಲೆಗಳನ್ನು ಸಲ್ಲಿಸಿ ಮತದಾನದ ಹಕ್ಕು ಉಳಿಸಿಕೊಳ್ಳಬೇಕು ಎಂದು ತಿಳಿಸಿದರು.
ಪತ್ರಕರ್ತ ಕೊರ್ಲಕುಂಟೆ ತಿಪ್ಪೇಸ್ವಾಮಿ, ವೇದಿಕೆ ತಾಲೂಕು ಸಂಚಾಲಕ ಬಿ. ಹನುಮಂತಪ್ಪ, ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚೌಳೂರು ಪ್ರಕಾಶ್, ಕಿಸಾನ್ ಸಂಘದ ಅಧ್ಯಕ್ಷ ಎ. ನಾಗರಾಜ್, ಗ್ರಾಪಂ ಮಾಜಿ ಸದಸ್ಯ ಕರೀಕೆರೆ ರಾಜಣ್ಣ ಮಾತನಾಡಿದರು.
ದಸಂಸ ಸಂಚಾಲಕ ಟಿ. ವಿಜಯ್‌ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆ ತಾಲೂಕು ಸಂಚಾಲಕ ಎಚ್. ಮಲ್ಲಿಕಾರ್ಜುನ, ನಗರಸಭೆ ಮಾಜಿ ಸದಸ್ಯ ಎಂ. ಚೇತನ್‌ಕುಮಾರ್, ಎಸ್.ಆರ್. ರಂಗಸ್ವಾಮಿ, ಎಚ್. ತಿಪ್ಪೇರುದ್ರಪ್ಪ, ಸಿ.ಎಂ. ಶಿವಕುಮಾರ ಸ್ವಾಮಿ, ರೇಣುಕಮ್ಮ, ಪ್ರಭಾವತಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net