ಜೀವನ ಸುಲಭಗೊಳಿಸಿದೆ ವಿದ್ಯುತ್ ತಂತ್ರಜ್ಞಾನ ಕ್ಷೇತ್ರ

 ಚಿತ್ರದುರ್ಗದಲ್ಲಿ ಬುಧವಾರ ಆಯೋಜಿಸಿದ್ದ ಅಂತರ  ಕಾಲೇಜು ವಿದ್ಯುತೋತ್ಸವದಲ್ಲಿ ಪ್ರಾಚಾರ್ಯ ಡಾ.ಪಿ.ಬಿ. ಭರತ್, ಡಾ.ಬಿ.ಜಿ. ಕುಮಾರಸ್ವಾಮಿ, ಡಾ.ಎ.ಎಂ. ರಾಜೇಶ್, ಡಾ.ಎಸ್. ಚೇತನ್, ಡಾ.ಎಸ್.ಸಿ. ಮಂಜುನಾಥ್, ಪ್ರೊ.ಟಿ. ಸುಧಾ, ಪ್ರೊ. ನೂರ್-Áತಿಮಾ ಇತರರು ಇದ್ದರು.
ಚಿತ್ರದುರ್ಗದಲ್ಲಿ ಬುಧವಾರ ಆಯೋಜಿಸಿದ್ದ ಅಂತರ ಕಾಲೇಜು ವಿದ್ಯುತೋತ್ಸವದಲ್ಲಿ ಪ್ರಾಚಾರ್ಯ ಡಾ.ಪಿ.ಬಿ. ಭರತ್, ಡಾ.ಬಿ.ಜಿ. ಕುಮಾರಸ್ವಾಮಿ, ಡಾ.ಎ.ಎಂ. ರಾಜೇಶ್, ಡಾ.ಎಸ್. ಚೇತನ್, ಡಾ.ಎಸ್.ಸಿ. ಮಂಜುನಾಥ್, ಪ್ರೊ.ಟಿ. ಸುಧಾ, ಪ್ರೊ. ನೂರ್-Áತಿಮಾ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಪ್ರಾಚಾರ್ಯ ಡಾ.ಪಿ.ಬಿ. ಭರತ್ ಅಭಿಪ್ರಾಯ
  • ಎಸ್‌ಜೆಎಂಐಟಿ ಅಂತರ ಕಾಲೇಜು ವಿದ್ಯುತೋತ್ಸವ
  • ಡಿಜಿಟಲ್ ಯುಗ
ಚಿತ್ರದುರ್ಗ : ತಂತ್ರಜ್ಞಾನವಿAದು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ ಎಂದು ಎಸ್‌ಜೆಎಂಐಟಿ ಪ್ರಾಚಾರ್ಯ ಡಾ.ಪಿ.ಬಿ. ಭರತ್ ಹೇಳಿದರು.
ಮಹಾವಿದ್ಯಾಲಯದಲ್ಲಿ ಎಲೆಕ್ಟಿçಕಲ್ ಮತ್ತು ಎಲೆಕ್ಟಾçನಿಕ್ಸ್ ವಿಭಾಗದಿಂದ ಬುಧವಾರ ಆಯೋಜಿಸಿದ್ದ ಒಂದು ದಿನದ ಅಂತರ ಕಾಲೇಜು ವಿದ್ಯುತೋತ್ಸವ-೨೦೨೬ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿಶೇಷವಾಗಿ ವಿದ್ಯುತ್ ತಂತ್ರಜ್ಞಾನ ಕ್ಷೇತ್ರ ಜೀವನ ಸುಲಭ ಗೊಳಿಸುವಲ್ಲಿ ಮಹತ್ವದ ಪಾತ್ರವಹಿಸಿದೆ. ಬೆಳಕಿನಿಂದ ಹಿಡಿದು ಸಂವ ಹನದವರೆಗೆ, ಕೈಗಾರಿಕೆಗಳಿಂದ ಹಿಡಿದು ಡಿಜಿಟಲ್ ಯುಗದವರೆಗೆ ವಿದ್ಯುತ್‌ತಂತ್ರ ಜ್ಞಾನದ ಪ್ರಭಾವ ಕಾಣಬಹುದು ಎಂದರು.
ಈ ತಾಂತ್ರಿಕ ಉತ್ಸವ ಕೇವಲ ಸ್ಪರ್ಧೆಗಳ ವೇದಿಕೆಯಲ್ಲ, ವಿದ್ಯಾರ್ಥಿಗಳ ಪ್ರತಿಭೆ, ಸÊಜನಶೀಲತೆ ಮತ್ತು ನವೀನ ಚಿಂತನೆಗಳನ್ನು ಪ್ರದರ್ಶಿಸುವ ಅದ್ಭುತ ಅವಕಾಶವಾಗಿದೆ. ರಾಜ್ಯದ ವಿವಿಧ ಇಂಜಿನಿಯರಿAಗ್ ಕಾಲೇಜು ಹಾಗೂ ವಿಶ್ವವಿದ್ಯಾಲಯಗಳಿಂದ ಆಗಮಿ ಸಿದ ವಿದ್ಯಾರ್ಥಿಗಳ ಜ್ಞಾನ ಮತ್ತು ಕೌಶಲಗಳ ಹಂಚಿಕೆ, ಪರಸ್ಪರ ಕಲಿಕೆ ಮತ್ತು ಅಭಿವೃದ್ಧಿಗೆ ಸಹಕಾರಿಯಾಗುತ್ತದೆ. ತಮ್ಮಲ್ಲಿರುವ ಸÊಜನಶೀಲತೆ ಮತ್ತು ಪರಿಶ್ರಮ ದೇಶದ ಭವಿಷ್ಯವನ್ನು ರೂಪಿಸಲಿದೆ ಎಂದರು.
ದಾವಣಗೆರೆ ಜಿ.ಎಂ. ವಿಶ್ವವಿದ್ಯಾಲಯದ ಎಲೆಕ್ಟಿçಕಲ್ ವಿಭಾಗದ ಮುಖ್ಯಸ್ಥ ಡಾ.ಎಚ್.ಬಿ. ಮರುಳಸಿದ್ದಪ್ಪ ಮಾತನಾಡಿ, ವಿದ್ಯುತ್ ಕ್ಷೇತ್ರವಿಂದು ಆಧುನಿಕ ಸಮಾಜದ ಹÊದಯವಾಗಿದೆ. ನಿತ್ಯದ ಜೀವನದಲ್ಲಿ ವಿದ್ಯುತ್ ಇಲ್ಲದೆ ಏನೂ ಸಾಧ್ಯವಿಲ್ಲ. ಇಂಧನ
ಉತ್ಪಾದನೆ, ಪ್ರಸರಣ,ನವೀಕರಿಸಬಹುದಾದ ಶಕ್ತಿ, ಸ್ಮಾರ್ಟ್ಗ್ರಿಡ್ ತಂತ್ರಜ್ಞಾನ ಇವೆಲ್ಲವೂ ದೇಶದ ಅಭಿವೃದ್ಧಿಗೆ ಪ್ರಮುಖವಾಗಿವೆ. ಇಂಥÀ ಕಾರ್ಯಕ್ರಮಗಳು ವಿದ್ಯಾರ್ಥಿಗಳಿಗೆ ತಮ್ಮ ಪ್ರತಿಭೆ ಪ್ರದರ್ಶಿಸಲು, ನವೀನ ಆಲೋಚನೆಗಳನ್ನು ಹಂಚಿಕೊಳ್ಳಲು ಉತ್ತಮ ವೇದಿಕೆಯಾಗುತ್ತವೆ ಎಂದರು.
ಕಾಲೇಜಿನ ಎಲೆಕ್ಟಿçಕಲ್ ವಿಭಾಗದ ಮುಖ್ಯಸ್ಥ ಡಾ.ಬಿ.ಜಿ. ಕುಮಾರಸ್ವಾಮಿ ಮಾತನಾಡಿದರು. ಡಾ.ಎ.ಎಂ. ರಾಜೇಶ್, ಡಾ.ಎಸ್. ಚೇತನ್, ಡಾ.ಎಸ್.ಸಿ. ಮಂಜುನಾಥ್, ಪ್ರೊ.ಟಿ. ಸುಧಾ, ಪ್ರೊ.ನೂರ್-Áತಿಮಾ, ಪ್ರೊ. ಸುಶ್ಮಿತಾದೇಬ್ ಹಾಗೂ ವಿದ್ಯಾರ್ಥಿಗಳಾ ದ ಕಾವ್ಯ, ಚಂದನ್, ಭರತ್, ವೆಂಕಟೇಶ್, ಚಂದನ ಇತರರು ಇದ್ದರು. ತೇಜಸ್ವಿನಿ ಪ್ರಾರ್ಥಿಸಿದರು. ಬಿಬಿ ಹಜಿರಾ ಸ್ವಾಗತಿಸಿ, ಕೇಸರ್ ಮಲನ್ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net