ಚಿತ್ರದುರ್ಗದಲ್ಲಿ ಶುಕ್ರವಾರ ಆಯೋಜಿಸಿದ್ದ ಶಿವಶರಣೆ ಅಕ್ಕಮಹಾದೇವಿ ಜಯಂತ್ಯುತ್ಸವದಲ್ಲಿ ನಾನಾ ಕ್ಷೇತ್ರಗಳ ಸಾಧಕರನ್ನು ಗೌರವಿಸಲಾಯಿತು. ಶರಣೆ ಮುಕ್ತಾಯಕ್ಕ ಮಾತಾಜಿ,ನೀಲಮ್ಮ ಬಸಯ್ಯ, ಕೆ.ಎಂ. ವೀರೇಶ್, ಸಿ.ಆರ್. ಶಿವಪ್ರಕಾಶ್, ಡಾ. ಲತಾರಮೇಶ್, ಎಸ್.ವಿ. ಗುರುಮೂರ್ತಿ, ತೋಟಪ್ಪ ಉತ್ತಂಗಿ, ಸುನೀತಾ ಮಲ್ಲಿಕಾರ್ಜುನ್ ಇತರರು ಇದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಶರಣೆ ಮುಕ್ತಾಯಕ್ಕ ಮಾತಾಜಿ ಹೇಳಿಕೆ
ಅಕ್ಕಮಹಾದೇವಿ ಜಯಂತ್ಯುತ್ಸವ, ಸಾಧಕರಿಗೆ ಸನ್ಮಾನ
ಶ್ರೀ ಗಾನಯೋಗಿ ಸಂಗೀತ ಬಳಗ
ಚಿತ್ರದುರ್ಗ: ಅಕ್ಕ ಮಹಾದೇವಿ ವಚನಗಳ ಸಂದೇಶಗಳ ಕುರಿತು ಸಮಾಜದಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ರಾಣೆಬೆನ್ನೂರು ತಾಲೂಕು ಕವಲೆತ್ತು ಬಸವಕೇಂದ್ರದ ಶರಣೆ ಮುಕ್ತಾಯಕ್ಕ ಮಾತಾಜಿ ಹೇಳಿದರು.
ನಗರದ ಶ್ರೀ ಗಾನಯೋಗಿ ಸಂಗೀತ ಬಳಗದಿಂದ ಶಾರದಮ್ಮ ಶ್ರೀ ರುದ್ರಪ್ಪ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಆಯೋಜಿಸಿದ್ದ ಶಿವ ಶರಣೆ ಅಕ್ಕಮಹಾದೇವಿ ಜಯಂತ್ಯುತ್ಸವ, ಸಾಧಕರಿಗೆ ಸನ್ಮಾನ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡಿದರು.
ವಚನಗಳ ಸಾರದ ಅರಿವು ಬದುಕಿನ ಯಶಸ್ಸಿಗೆ, ಮನಪರಿವರ್ತನೆಗೆ ಕಾರಣವಾಗಲಿದೆ. ಮಕ್ಕಳಿಗೆ ವಚನಗಳ ಮಹತ್ವ ತಿಳಿಸಿಕೊಡಬೇಕಿದೆ ಎಂದರು.
ಉಪನ್ಯಾಸ ನೀಡಿದ ನಿವೃತ್ತ ಉಪನ್ಯಾಸಕಿ ನೀಲಮ್ಮ ಬಸಯ್ಯ ಅವರು, ಅಕ್ಕ ಮಹಾದೇವಿ ಮಹಿಳೆಯರ ಬದುಕಿಗೆ ದಾರಿ ದೀಪ ಎಂದರು. ಬಾಪೂಜಿ ವಿದ್ಯಾಸಂಸ್ಥೆ ಕಾರ್ಯದರ್ಶಿ ಕೆ.ಎಂ. ವೀರೇಶ್ ಮಾತನಾಡಿ, ಜನರಲ್ಲಿಂದು ಓದಿನ ಸಂಸ್ಕೃತಿ ಕಡಿಮೆಯಾಗಿ ದೆ. ಇಂಥ ಸಮಯದಲ್ಲಿ ತೋಟಪ್ಪ ಅವರು ಸಂಸ್ಥೆ ಪ್ರಾರಂಭಿಸಿ ವಚನಗಳನ್ನು ಹೇಳಿ ಕೂಡುವ ಮೂಲಕ ಜನರಲ್ಲಿ ವಚನಗಳ ಅರಿ ವು ಮೂಡಿಸುತ್ತಿದ್ದಾರೆ ಎಂದರು.
ಅಂಜನಾ ನÊತ್ಯ ಕಲಾ ಕೇಂದ್ರದ ವಿದ್ವಾನ್ ಸಿ.ಆರ್. ಶಿವಪ್ರಕಾಶ್, ಚಿನ್ಮೂಲಾದ್ರಿ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಸಂಸ್ಥಾಪಕಿ ದಯಾಪುತ್ತೂರ್ಕರ್, ಶ್ರೀ ಬಸವೇಶ್ವರ ಆಸ್ಪತ್ರೆ ಪ್ರಸೂತಿ ತಜ್ಞೆ ಡಾ. ಲತಾರಮೇಶ್, ಸಂಗೀತ ಶಿಕ್ಷಕಿ ಕೋಕಿಲಾ ರುದ್ರಮೂರ್ತಿ, ಗಾಯಕಿ ಶಶಿಕಲಾ ಬಸವರಾಜ್ ಅವರನ್ನು ಸನ್ಮಾನಿಸಲಾಯಿತು.
ಕೆ.ಎಂ.ವೀರೇಶ್, ಯೋಗಗುರು ಚಿನ್ಮಯಾನಂದ, ಶಾರದಾ ಬ್ರಾಸ್‌ಬ್ಯಾಂಡ್‌ನ ಎಸ್.ವಿ. ಗುರುಮೂರ್ತಿ, ಶಿಕ್ಷಕಿ ಶೋಭಾ ಮಲ್ಲಿಕಾ ರ್ಜುನ್, ಸಮಾಜ ಸೇವಕಿ ಅನ್ನಪೂರ್ಣ ಸಜ್ಜನ್ ಅವರನ್ನು ಅಭಿನಂದಿಸಲಾಯಿತು.
ಬಳಗದ ಖಜಾಂಚಿ ಸುಮಾ ರಾಜಶೇಖರ್ ಅಧ್ಯಕ್ಷತೆ ವಹಿಸಿದ್ದರು. ಗೌರವಾಧ್ಯಕ್ಷ ಬಸವರಾಜ ಕತ್ತಿ, ಅಧ್ಯಕ್ಷ ತೋಟಪ್ಪ ಉತ್ತಂಗಿ, ಕಾರ್ಯದರ್ಶಿ ಎಸ್.ಸಿ. ವರದ ಶಂಕರ್, ನಗರಸಭೆ ಮಾಜಿ ಅಧ್ಯಕ್ಷೆ ಸುನೀತಾ ಮಲ್ಲಿಕಾರ್ಜುನ್, ಜ್ಞಾನಮೂರ್ತಿ,ನಾಗರಾಜ್ ಸಗಂ, ಶಂಕರಪ್ಪ ಇದ್ದರು.
ಗೀತಾ ರುದ್ರೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಳಗದ ಸದಸ್ಯರು ಸಾಮೂಹಿಕ ಗೀತಗಾಯನ, ಅಂಜನಾ ನೃತ್ಯ ಕಲಾಕೇಂದ್ರದ ವಿದ್ಯಾರ್ಥಿಗಳು ನೃತ್ಯ ಕಾರ್ಯಕ್ರಮ ನಡೆಸಿಕೊಟ್ಟರು. ರಶ್ಮಿ ವಸಂತ ಸ್ವಾಗತಿಸಿ, ಮೀನಾಕ್ಷಿ ವಂದಿಸಿದರು. ಜಗದೀಶ್ವರಿ ನಿರೂಪಿಸಿದರು.