ನಿರಾಸೆ ಮೂಡಿಸಿದ ೨೦೦ ಕೋಟಿ ರೂ. ಭರವಸೆ

 ಲಿAಗತ್ವ ಅಲ್ಪಸಂಖ್ಯಾತರಿಗಾಗಿ ಅಭಿವೃದ್ಧಿ ನಿಗಮ ಸ್ಥಾಪಿಸಿ, ಅನುದಾನ ನೀಡುವ ಮೂಲಕ ಅನುಕೂಲ ಮಾಡಿಕೊಡುವಂತೆ ಚಿತ್ರದುರ್ಗದ ಸಮರ ಸಾರಥಿ ಸೇವಾ ಸಂಘದ ಪದಾಽಕಾರಿಗಳು ಗುರುವಾರ ಸರ್ಕಾರವನ್ನು ಒತ್ತಾಯಿಸಿದರು. ಸೂರ್ತಿ, ನೂತನ, ಅರುಂಧತಿ, ಚಂದ್ರಪ್ಪ, ಸಾನ್ಯ, ಕಾಂಚನಾ ಇದ್ದರು.
ಲಿAಗತ್ವ ಅಲ್ಪಸಂಖ್ಯಾತರಿಗಾಗಿ ಅಭಿವೃದ್ಧಿ ನಿಗಮ ಸ್ಥಾಪಿಸಿ, ಅನುದಾನ ನೀಡುವ ಮೂಲಕ ಅನುಕೂಲ ಮಾಡಿಕೊಡುವಂತೆ ಚಿತ್ರದುರ್ಗದ ಸಮರ ಸಾರಥಿ ಸೇವಾ ಸಂಘದ ಪದಾಽಕಾರಿಗಳು ಗುರುವಾರ ಸರ್ಕಾರವನ್ನು ಒತ್ತಾಯಿಸಿದರು. ಸೂರ್ತಿ, ನೂತನ, ಅರುಂಧತಿ, ಚಂದ್ರಪ್ಪ, ಸಾನ್ಯ, ಕಾಂಚನಾ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಮೂಲ ಸಮಸ್ಯೆಗಳಿಗೆ ಬಜೆಟ್‌ನಲ್ಲಿ ಪರಿಹಾರವಿಲ್ಲ
  • ಲಿಂಗತ್ವ ಅಲ್ಪಸಂಖ್ಯಾತರ ಕಡೆಗಣನೆ
  • ಸಮರ ಸಾರಥಿ ಸೇವಾ ಸಂಘ
ಚಿತ್ರದುರ್ಗ: ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯಲ್ಲಿ ಲಿಂಗತ್ವ ಅಲ್ಪಸಂಖ್ಯಾತರಿಗೆ ೨೦೦ ಕೋಟಿ ರೂ. ಅನುದಾನ ನೀಡುವ ಭರವಸೆ ನೀಡಿತ್ತು. ಬಜೆಟ್‌ನಲ್ಲಿ ಮೀಸಲಿರಿಸದೆ, ಮೂಲಸೌಕರ್ಯಕ್ಕೆ ಒತ್ತು ನೀಡದೆ ನಿರಾಸೆ ಮೂಡಿಸಿದೆ ಎಂದು ಸಮರ ಸಾರಥಿ ಸೇವಾ ಸಂಘ ದೂರಿದೆ.
ಇಡೀ ಲಿಂಗತ್ವ ಅಲ್ಪಸಂಖ್ಯಾತ ಸಮುದಾಯವನ್ನು ರಾಜ್ಯ ಸರ್ಕಾರ ಕಡೆಗಣಿಸಿದೆ ಎಂಬುದಕ್ಕೆ ಇದಕ್ಕಿಂತ ನಿದರ್ಶನ ಬೇಕಿಲ್ಲ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಸಂಘದ ಸೂರ್ತಿ ಅಸಮಾಧಾನ ಹೊರಹಾಕಿದರು.
\ನಮ್ಮ ಮೂಲ ಸಮಸ್ಯೆಗಳಾದ ಶಿಕ್ಷಣ, ವಸತಿ, ಜೀವನೋಪಾಯ, ಆರೋಗ್ಯ ಒಳಗೊಂಡು ಸಾಮಾಜಿಕ ಭದ್ರತೆ ಕಲ್ಪಿಸಲು ಸಿಎಂ ಸಿದ್ದರಾಮಯ್ಯ ಬಜೆಟ್‌ನಲ್ಲಿ ಸಮರ್ಪಕ ಅನುದಾನ ಮೀಸಲಿಡುವ ವಿಶ್ವಾಸವಿತ್ತು. ಆದರೆ, ಎಲ್ಲೂ ಆದ್ಯತೆ ನೀಡಿರುವುದು ಕಂಡುಬAದಿಲ್ಲ. ಇನ್ನಾದರೂ ಸರ್ಕಾರ ಲಿಂಗತ್ವ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ಸ್ಥಾಪಿಸಿ, ಅನುದಾನ ನೀಡುವ ಮೂಲಕ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
ಹೋರಾಟಗಾರ್ತಿ ಅರುಂಧತಿ ಮಾತನಾಡಿ, ಲಿಂಗತ್ವ ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಅನುದಾನ ನೀಡುವ ಭರವಸೆ ಹುಸಿ ಯಾಗಿದೆ. ಸ್ವಂತ ಉದ್ದಿಮೆ ಕೈಗೊಳ್ಳಲು ೩೦ ಸಾವಿರದಿಂದ ೪೫ ಸಾವಿರ ರೂ.ಗೆ ಸಹಾಯಧನ ಸರ್ಕಾರ ಹೆಚ್ಚಿಸಿರುವುದನ್ನು ಹೊರತುಪಡಿಸಿ ಸಮುದಾಯದ ಮೂಲ ಸಮಸ್ಯೆಗಳನ್ನು ಪರಿಹರಿಸುವ ಯಾವುದೇ ಮಹತ್ವದ ಹೊಸ ಯೋಜನೆಗಳಿಲ್ಲ ಎಂದು ಬೇಸರಿಸಿದರು.
ಸಂಘದ ಅಧ್ಯಕ್ಷೆ ಚಂದ್ರಮ್ಮ ಮಾತನಾಡಿ, ನಮ್ಮಲ್ಲಿ ವಯೋವೃದ್ಧರು ಆರ್ಥಿಕ ಮತ್ತು ಸಾಮಾಜಿಕವಾಗಿ ಅನೇಕ ಸಂಕಷ್ಟಗಳನ್ನು ಎದುರಿಸುತ್ತಿz್ದÁರೆ. ಅವರೆಲ್ಲರ ಪಿಂಚಣಿ ಮೊತ್ತ ಹೆಚ್ಚಿಸುವುದು ಸೇರಿ ಸಾಮಾಜಿಕ ಭದ್ರತಾ ಕ್ರಮಗಳನ್ನು ಸರ್ಕಾರ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಸಂಘದ ಕಾರ್ಯದರ್ಶಿ ನೂತನ ಮಾತನಾಡಿ, ಲಿಂಗತ್ವ ಅಲ್ಪಸಂಖ್ಯಾತರಿಗೆ ಸುರಕ್ಷಿತ, ಗೌರವಯುತ ವಾಸಸ್ಥಳದ ಕೊರತೆ ಗಂಭೀರ ಸಮಸ್ಯೆಯಾಗಿದೆ. ಕೊನೆ ಪಕ್ಷ ವಸತಿ ಸೌಲಭ್ಯವನ್ನಾದರೂ ಸರ್ಕಾರ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಸಾನ್ಯ, ಕಾಂಚನಾ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net