ಸೈಬರ್ ಅಪರಾಧ ತಡೆಗೆ ಇನ್ನಷ್ಟು ಸಜ್ಜಾಗಬೇಕಿದೆ ಇಲಾಖೆ

 ಚಿತ್ರದುರ್ಗದಲ್ಲಿ ಗುರುವಾರ ಆಯೋಜಿಸಿದ್ದ ಪೊಲೀಸ್ ಧ್ವಜ ಹಾಗೂ ಕಲ್ಯಾಣ ದಿನಾಚರಣೆಯಲ್ಲಿ ನಿವೃತ್ತ ಪಿಎಸ್‌ಐ ಎಲ್.ಆರ್. ಬಸವರಾಜ್, ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಽÃಶ ರೋಣ್ ವಾಸುದೇವ, ರಂಜಿತ್‌ಕುಮಾರ್ ಬಂಡಾರು, ಡಾ.ಆರ್. ಶಿವಕುಮಾರ್, ಪಾಪಣ್ಣ ಇದ್ದರು.
ಚಿತ್ರದುರ್ಗದಲ್ಲಿ ಗುರುವಾರ ಆಯೋಜಿಸಿದ್ದ ಪೊಲೀಸ್ ಧ್ವಜ ಹಾಗೂ ಕಲ್ಯಾಣ ದಿನಾಚರಣೆಯಲ್ಲಿ ನಿವೃತ್ತ ಪಿಎಸ್‌ಐ ಎಲ್.ಆರ್. ಬಸವರಾಜ್, ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಽÃಶ ರೋಣ್ ವಾಸುದೇವ, ರಂಜಿತ್‌ಕುಮಾರ್ ಬಂಡಾರು, ಡಾ.ಆರ್. ಶಿವಕುಮಾರ್, ಪಾಪಣ್ಣ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸೌಜನ್ಯದ ವರ್ತನೆಯಿಂದ ಸಮಸ್ಯೆಗಳಿಗೆ ಪರಿಹಾರ
  • ನಿವೃತ್ತ ಪಿಎಸ್‌ಐ ಎಲ್.ಆರ್. ಬಸವರಾಜು ಅಭಿಮತ
  • ದುರ್ಗದಲ್ಲಿ ಪೊಲೀಸ್ ಧ್ವಜ, ಕಲ್ಯಾಣ ದಿನಾಚರಣೆ
ಚಿತ್ರದುರ್ಗ: ಸಾಮಾಜಿಕ ಜಾಲ ತಾಣಗಳಿಂದ ಕಾನೂನು ಸುವ್ಯವಸ್ಥೆಗೆ ಎದುರಾಗುತ್ತಿರುವ ಸವಾಲು ಹಾಗೂ ಸೈಬರ್ ಅಪರಾಧ ಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಇನ್ನಷ್ಟು ಸಜ್ಜಾಗಬೇಕಾಗಿದೆ ಎಂದು ನಿವೃತ್ತ ಪಿಎಸ್‌ಐ ಎಲ್.ಆರ್. ಬಸವರಾಜ್ ಅಭಿಪ್ರಾಯಪಟ್ಟರು.
ಪೊಲೀಸ್ ಇಲಾಖೆ ನಗರದ ಕವಾಯತು ಮೈದಾನದಲ್ಲಿ ಗುರುವಾರ ಆಯೋಜಿಸಿದ್ದ ರಾಜ್ಯ ಪೊಲೀಸ್ ಧ್ವಜ ಹಾಗೂ ಕಲ್ಯಾ ಣ ದಿನಾಚರಣೆಯಲ್ಲಿ ಪೊಲೀಸ್ ತುಕಡಿಗಳಿಂದ ಗೌರವ ವಂದನೆ ಸ್ವೀಕರಿಸಿ ಮಾತನಾಡಿದರು.
ಸೈಬರ್ ಅಪರಾಧ ನಿಯಂತ್ರಣ ಇಲಾಖೆ ಮುಂದಿರುವ ದೊಡ್ಡ ಸವಾಲಾಗಿದೆ. ಅಽಕಾರಿ, ಸಿಬ್ಬಂದಿಗೆ ತಾಂತ್ರಿಕ ತರಬೇತಿ ಅಗತ್ಯವಿದೆ ಎಂದು ಹೇಳಿದರು.
ಇತ್ತೀಚಿನ ವರ್ಷಗಳಲ್ಲಿ ಇಲಾಖೆ ಅಽಕಾರಿ, ಸಿಬ್ಬಂದಿ ಮೇಲೆ ಕೆಲಸದ ಒತ್ತಡ ಅಽಕವಾಗುತ್ತಿದೆ. ತಮ್ಮ ಒತ್ತಡವನ್ನು ಠಾಣೆಗೆ ಬರುವ ನಾಗರಿಕರ ಮೇಲೆ ಹಾಕುವುದು ಸರಿಯಲ್ಲ. ಸಾರ್ವಜನಿಕರನ್ನು ಸೌಜನ್ಯದಿಂದ ಮಾತನಾಡಿಸಿ ಅವರ ಸಮಸ್ಯೆಗಳಿಗೆ ಪರಿಹಾರ ಒದಗಿಸಬೇಕು.
ತಂಡವಾಗಿ ಕೆಲಸ ಮಾಡಿದರೆ ಅಪರಾಧ ಪತ್ತೆ ಸುಲಭ.ಅಗತ್ಯವಿದ್ದಾಗ ಅಽಕಾರಿಗಳು, ಸಿಬ್ಬಂದಿಗೆ ರಜೆ ಮಂಜೂರು ಮಾಡ ಬೇ ಕೆಂದ ಅವರು, ಮಾನಸಿಕ ನೆಮ್ಮದಿ, ಸದೃಢ ಆರೋಗ್ಯಕ್ಕೆ ಯೋಗ ಮತ್ತು ಧ್ಯಾನವನ್ನು ದೈನಂದಿನ ಭಾಗವಾಗಿ ಮಾಡಿಕೊಳ್ಳ ಬೇಕು ಎಂದು ಪೊಲೀಸರಿಗೆ ಸಲಹೆ ನೀಡಿದರು.
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಽÃಶ ರೋಣ್‌ವಾಸುದೇವ ಅವರು ಮಾತನಾಡಿ, ಹಬ್ಬ-ಹರಿದಿನಗಳಲ್ಲಿ ಇತರೆ ಎಲ್ಲ ಇಲಾ ಖೆಗಳ ನೌಕರರು ರಜೆ ಪಡೆದು ಕುಟುಂಬದವರೊAದಿಗೆ ಸಂಭ್ರಮಿಸಿದರೆ, ಪೊಲೀಸರು ಕರ್ತವ್ಯದಲ್ಲಿರುತ್ತಾರೆ. ಈ ಒತ್ತಡದಿಂದ ಆರೋಗ್ಯ ಮತ್ತು ಮಾನಸಿಕ ಸ್ಥಿತಿಯಲ್ಲಿ ಏರುಪೇರಾಗುವುದು ಸಹಜ. ಆದರೂ, ಒತ್ತಡ ನಿಭಾಯಿಸಿಕೊಂಡು ಕರ್ತವ್ಯ ನಿರ್ವಹಿಸುವ ಪೊಲೀಸರ ಗುಣ ಶ್ಲಾಘನೀಯ ಎಂದರು.
ಬದಲಾದ ಕಾಲಕ್ಕೆ ತಕ್ಕಂತೆ ಅಪರಾಧಗಳ ಸ್ವರೂಪಗಳಲ್ಲೂ ಬದಲಾವಣೆಗಳಾಗುತ್ತಿವೆ. ಇಲಾಖೆ ಮೇಲೂ ಜವಾಬ್ದಾರಿ ಹೆಚ್ಚಾಗುತ್ತಿದೆ ಎಂದು ಹೇಳಿದರು.
ಸಂವಿಧಾನ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯಿಂದ ಸೇವೆಗೆ ತಕ್ಕ ಗೌರವ, ಪ್ರತಿಫಲ ಸಿಗಲು ಸಾಧ್ಯವಿದೆ. ಜಿಲ್ಲೆಯಲ್ಲಿ ೬೫೦ ಜನ ನಿವೃತ್ತ ಪೊಲೀಸ್ ಅಽಕಾರಿ, ಸಿಬ್ಬಂದಿ ಇದ್ದಾರೆ. ನಿವೃತ್ತ ಪಿಎಸ್‌ಐ ಬಸವರಾಜ್ ಅವರಿಗೆ ಸಿಕ್ಕಂತೆ ಇಲಾಖೆಯಿಂದ ಪ್ರತಿಯೊಬ್ಬರಿಗೂ ಸೂಕ್ತ ಗೌರವ ಸಿಗುವಂತಾಗಬೇಕು ಎಂದು ಆಶಿಸಿದರು.
ಎಸ್‌ಪಿ ರಂಜಿತ್‌ಕುಮಾರ್ ಬಂಡಾರು ಮಾತನಾಡಿ, ೨೦೨೫-೨೬ನೇ ಸಾಲಿನಲ್ಲಿ ಪೊಲೀಸರ ೮೯ ಮಕ್ಕಳ ಶಿಕ್ಷಣಕ್ಕಾಗಿ ಪೊಲೀಸ್ ಕಲ್ಯಾಣ ನಿಽಯಿಂದ ೨೮ ಲಕ್ಷ ರೂ.ಧನಸಹಾಯ ಮಂಜೂರು ಮಾಡಲಾಗಿದೆ ಎಂದು ಕಲ್ಯಾಣ ನಿಽ ಬಳಕೆ ಹಾಗೂ ಜಾರಿಯಲ್ಲಿರುವ ಕಲ್ಯಾಣ ಕಾರ್ಯಕ್ರಮಗಳ ವರದಿ ವಾಚಿಸಿದರು.
ಕಾರ್ಯಕ್ರಮದ ಅಂಗವಾಗಿ ಪರೇಡ್ ಕಮಾಂಡರ್ ಡಿಎಆರ್‌ನ ಆರ್‌ಪಿಐ ಜಿ. ಶಶಿಕುಮಾರ್ ನೇತÊತ್ವದಲ್ಲಿ ಆಕರ್ಷಕ ಪಥ ಸಂಚಲನ ನಡೆಯಿತು. ನಿವÊತ್ತ ಪೊಲೀಸ್ ಅಽಕಾರಿ ಹಾಗೂ ಸಿಬ್ಬಂದಿಯನ್ನು ಗೌರವಿಸಲಾಯಿತು. ಐಮಂಗಲ ಪೊಲೀಸ್ ತರಬೇತಿ ಶಾಲೆ ಪ್ರಾಚಾರ್ಯ ಪಾಪಣ್ಣ ಇತರರು ಇದ್ದರು. ಎಎಸ್‌ಪಿ ಡಾ.ಆರ್. ಶಿವಕುಮಾರ್ ಸ್ವಾಗತಿಸಿ, ಪಿಐ ನಯೀಂ ಅಹಮದ್ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net