ನಾಡಿಗೆ ಅಮೂಲ್ಯ ಕೊಡುಗೆ
ಚಾತುರ್ವರ್ಣ ವ್ಯವಸ್ಥೆ ವಿರುದ್ಧದ ವೈಚಾರಿಕ ಕ್ರಾಂತಿಯನ್ನು ಶರಣ ಅಥವಾ ಭಕ್ತಿ ಚಳವಳಿ ಎನ್ನುತ್ತೇವೆ ಎಂದು ನಿವೃತ್ತ ಇತಿಹಾಸ ಪ್ರಾಧ್ಯಾಪಕ ಬಿ. ರಾಜಶೇಖರಯ್ಯ ಹೇಳಿದರು.
ಚಿತ್ರದುರ್ಗ ಮುರುಘಾಮಠದಲ್ಲಿ ಬುಧವಾರ ಶಿವಶರಣ ಹಡಪದ ಅಪ್ಪಣ್ಣನವರ ಜಯಂತ್ಯುತ್ಸವದಲ್ಲಿ ಮಾತನಾಡಿ, ವಿಶ್ವಗುರು ಬಸವಣ್ಣ ತುಳಿತಕ್ಕೆ ಒಳಪಟ್ಟ ಸಮುದಾಯಗಳನ್ನು ಒಂದು ಸೂರಿನಡಿ ತಂದ ಽÃಮಂತ ವ್ಯಕ್ತಿ. ಇವರ ಆಪ್ತ ಕಾರ್ಯದರ್ಶಿಯಾಗಿದ್ದ ಹಡಪದ ಅಪ್ಪಣ್ಣನವರಿಗೆ ವಿಶೇಷ ಗೌರವವಿತ್ತು. ಕಾರ್ಲ್ಮಾರ್ಕ್ಸ್ಗೂ ಅಪ್ಪಣ್ಣನವರ ವಚನಗಳು ಪ್ರೇರಣೆ ನೀಡಿವೆ ಎಂದರು.
ಸಾನ್ನಿಧ್ಯ ವಹಿಸಿದ್ದ ಆಡಳಿತ ಮಂಡಳಿ ಸದಸ್ಯ ಡಾ.ಬಸವಕುಮಾರ ಸ್ವಾಮೀಜಿ ಮಾತನಾಡಿ,ಅನುಭವ ಮಂಟಪ ಎಲ್ಲ ಕುಶಲ ಕರ್ಮಿ ಗಳಿಂದ ನಿರ್ಮಾಣವಾಗಿತ್ತು. ಅಪ್ಪಣ್ಣನವರು ಜ್ಯೋತಿಯಾಗಿ ಬೆಳಗಿ ಈ ನಾಡಿಗೆ ಅಮೂಲ್ಯ ಕೊಡುಗೆ ನೀಡಿದ್ದಾರೆ. ಅಂತಹ ಮಹಿಮಾ ಪುರುಷನ ಜಯಂತ್ಯುತ್ಸವ ಇಂದಿನ ಗುರುಪೂರ್ಣಿಮೆಗೆ ಸಾಕ್ಷಿಯಾಗಿರುವುದು ಯೋಗಾಯೋಗ ಎಂದರು.
ಸಮ್ಮುಖ ವಹಿಸಿದ್ದ ದಾವಣಗೆರೆ ವಿರಕ್ತಮಠದ ಡಾ.ಬಸವಪ್ರಭು ಸ್ವಾಮೀಜಿ ಮಾತನಾಡಿ,೧೨ನೇ ಶತಮಾನ ಈ ಪ್ರಪಂಚದ ಸುವರ್ಣ ಯುಗ. ಬಸವಣ್ಣ ಶೋಷಣÉಮುಕ್ತ ಸಮಾಜ ನಿರ್ಮಾಣಕ್ಕೆ ಕಟಿಬದ್ಧರಾಗಿದ್ದವರು. ಅಂಥವರ ಆಪ್ತರಾಗಿದ್ದ ಅಪ್ಪಣ್ಣ, ಮೌಢ್ಯಗಳಿಗೆ ಸೊಪ್ಪು ಹಾಕದೆ ಮುನ್ನಡೆಯಬೇಕೆಂದಿದ್ದರು ಎಂದ ಶ್ರೀಗಳು, ಸವಿತಾ ಸಮಾಜದವರ ಸೇವೆಯನ್ನು ಶ್ಲಾಘಿಸಿದರು.
ಹಡಪದ ಅಪ್ಪಣ್ಣ ಸಮಾಜ ಜಿಲ್ಲಾಧ್ಯಕ್ಷ ಕೆ.ನಾಗರಾಜ್ ಮಾತನಾಡಿದರು. ಬಸವಮುರುಘೇಂದ್ರ ಶ್ರೀಗಳು, ಈಚಲನಾಗೇನಹಳ್ಳಿ ಗೋವಿಂದ ಶ್ರೀಗಳು ಹಡಪದ ಅಪ್ಪಣ್ಣ ಸಮಾಜದ ಚಿತ್ರದುರ್ಗ ತಾಲೂಕು ಅಧ್ಯಕ್ಷ ವಿ. ವÊಷಭೇಂದ್ರಪ್ಪ, ಗಂಗಮ್ಮ, ಸವಿತಾ ಸಮಾಜದ ಅಧ್ಯಕ್ಷ ಪ್ರಸನ್ನ.
ಹಡಪದ ಅಪ್ಪಣ್ಣ ಸಮಾಜದ ರವಿಕುಮಾರ್, ಶಿವಕುಮಾರ್, ಪ್ರಕಾಶ್ ಹಂಪನೂರು, ಜಯದೇವಪ್ಪ, ಆರ್. ಸುರೇಶ್, ಚನ್ನ ವೀರಪ್ಪ, ಶ್ರೀನಿವಾಸ್, ಚನ್ನಬಸಪ್ಪ, ನಾಗರಾಜ್, ವೀರೇಶ್, ಕೆ. ನಾಗರಾಜ್, ಅಜ್ಜಯ್ಯ, ಪಾರ್ವತಮ್ಮ, ಅನುಪಮಾ, ತಾರಾ, ಸವಿತಾ ಸಮಾಜದ ರಂಜಿತ್, ಶ್ರೀನಿವಾಸ್, ಅರುಣ್, ಸಂತೋಷ್, ರಾಜು, ಅನಿತಾ ಹಾಗೂ ನಾನಾ ಸಂಘಟನೆಗಳ ಪ್ರಮುಖರು ಇದ್ದರು.
ಉಮೇಶ್ ಪತ್ತಾರ್ ಹಡಪದ ಅಪ್ಪಣ್ಣನವರ ವಚನ ಹಾಡಿದರು. ಶಿಕ್ಷಕಿ ವೀಣಾ ಸ್ವಾಗತಿಸಿ, ಮುಖ್ಯಶಿಕ್ಷಕಿ ಗಾಯತ್ರಿ ವಂದಿಸಿದರು. ಶಿಕ್ಷಕಿ ಭಾರತಿ ನಿರೂಪಿಸಿದರು.