ಹಿರಿಯರ ಕೊಡುಗೆ ಅನನ್ಯ

 ಚಿತ್ರದುರ್ಗದ ಬಿಜೆಪಿ ಜಿ¯್ಲÁ ಘಟಕದ ಕಚೇರಿಯಲ್ಲಿ ಸೋಮವಾರ ಪಕ್ಷದ ೪೭ನೇ ಸಂಸ್ಥಾಪನಾ ದಿನ ಆಚರಿಸಲಾಯಿತು. ಕೆ.ಟಿ.ಕುಮಾರಸ್ವಾಮಿ, ನರೇಂದ್ರನಾಥ್, ಸೌಭಾಗ್ಯಾ ಬಸವರಾಜನ್, ಡಾ.ಸಿz್ದÁರ್ಥ ಗುಂಡಾರ್ಪಿ, ರೇಖಾ, ಪಾಲಯ್ಯ, ಕಿರಣ್, ಚಂದ್ರಶೇಖರ್, ಲೀಲಾವತಿ ಶಶಿಧರ್, ಬಸವೇಶ್, ನಾಗರಾಜ್ ಬೇದ್ರೆ ಇತರರಿದ್ದರು.
ಚಿತ್ರದುರ್ಗದ ಬಿಜೆಪಿ ಜಿ¯್ಲÁ ಘಟಕದ ಕಚೇರಿಯಲ್ಲಿ ಸೋಮವಾರ ಪಕ್ಷದ ೪೭ನೇ ಸಂಸ್ಥಾಪನಾ ದಿನ ಆಚರಿಸಲಾಯಿತು. ಕೆ.ಟಿ.ಕುಮಾರಸ್ವಾಮಿ, ನರೇಂದ್ರನಾಥ್, ಸೌಭಾಗ್ಯಾ ಬಸವರಾಜನ್, ಡಾ.ಸಿz್ದÁರ್ಥ ಗುಂಡಾರ್ಪಿ, ರೇಖಾ, ಪಾಲಯ್ಯ, ಕಿರಣ್, ಚಂದ್ರಶೇಖರ್, ಲೀಲಾವತಿ ಶಶಿಧರ್, ಬಸವೇಶ್, ನಾಗರಾಜ್ ಬೇದ್ರೆ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾಧ್ಯಕ್ಷ ಕೆ.ಟಿ.ಕುಮಾರಸ್ವಾಮಿ ಅಭಿಪ್ರಾಯ
  • ಬಿಜೆಪಿ ಕಚೇರಿಯಲ್ಲಿ ಸಂಸ್ಥಾಪನಾ ದಿನ
  • ಪಕ್ಷದ ಬೆಳವಣಿಗೆ
ಚಿತ್ರದುರ್ಗ: ಪಕ್ಷದ ಬೆಳವಣಿಗೆಯಲ್ಲಿ ಕಾರ್ಯಕರ್ತರ ಶ್ರಮ ಅತ್ಯಂತ ದೊಡ್ಡದಿದೆ. ಸಾಧನೆಗಳಲ್ಲೂ ಪ್ರಧಾನಿ ನರೇಂದ್ರ ಮೋದಿ ಅವರನ್ನು ಒಳಗೊಂಡAತೆ ಅನೇಕ ಹಿರಿಯರ ಕೊಡುಗೆ ಅಪಾರ ಎಂದು ಜಿ¯್ಲÁಧ್ಯಕ್ಷ ಕೆ.ಟಿ.ಕುಮಾರಸ್ವಾಮಿ ಸ್ಮರಿಸಿದರು.
ನಗರದ ಕೆಳಗೋಟೆಯ ಬಿಜೆಪಿ ಜಿ¯್ಲÁ ಘಟಕದ ಕಚೇರಿಯಲ್ಲಿ ಸೋಮವಾರ ಪಕ್ಷದ ಧ್ವಜಾರೋಹಣ ನೆರವೇರಿಸುವ ಮೂಲಕ ೪೭ನೇ ಸಂಸ್ಥಾಪನಾ ದಿನ ಆಚರಿಸಿ ಮಾತನಾಡಿದರು.
ಇದೇ ವೇಳೆ ಪಕ್ಷದ ಹಿರಿಯ ಕಾರ್ಯಕರ್ತರಾದ ಟಿ.ಜಿ.ನರೇಂದ್ರನಾಥ್, ಕೆ.ಶಿವಣ್ಣಾಚಾರ್, ಎ.ಬಿ.ಮಂಜುಳಮ್ಮ ಅವರನ್ನು ಸನ್ಮಾನಿಸಲಾಯಿತು.
ಜಿಪಂ ಮಾಜಿ ಅಧ್ಯಕ್ಷೆ ಸೌಭಾಗ್ಯಾ ಬಸವರಾಜನ್, ಪದಾಽಕಾರಿಗಳಾದ ಡಾ.ಸಿz್ದÁರ್ಥ ಗುಂಡಾರ್ಪಿ, ಮಾಧುರಿ ಗಿರೀಶ್, ವೆಂಕಟೇಶ್ ಯಾದವ್, ಮೋಹನ್, ಶೈಲಜಾರೆಡ್ಡಿ, ಎಚ್.ಎನ್.ಲೋಕೇಶ್‌ಕುಮಾರ್, ನಾಗರಾಜ್, ಸುರೇಶ್ ಸಿz್ದÁಪುರ, ಸಂಪತ್, ಬಸಮ್ಮ, ನಾಗರಾಜ್ ಬೇದ್ರೆ ಇತರರಿದ್ದರು.
ಚಳ್ಳಕೆರೆ
ಭಾರತೀಯ ಜನತಾ ಪಾರ್ಟಿ ದೇಶವ್ಯಾಪಿಯಾಗಿ ಬಲವರ್ಧನೆ ಕಂಡಿದೆ ಎಂದು ತಾಲೂಕು ಬಿಜೆಪಿ ಮಂಡಲ ಅಧ್ಯಕ್ಷ ಬಿ.ಎಂ. ಸುರೇಶ್ ಹಿರೇಮದುರೆ ಹೇಳಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಸೋಮವಾರ ಪಕ್ಷದ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಮೂರು ಜನ ಸಂಸದರಿAದ ಆರಂಭಗೊAಡ ಪಕ್ಷ, ಪ್ರಸ್ತುತ ದೇಶದ ಆಡಳಿತ ಮಾಡುವಷ್ಟು ಶಕ್ತಿಯಾಗಿದೆ. ಜನ ಸಂಘಟಿತ ಕೆಲಸಗಳಿಂದ ಪಕ್ಷಕ್ಕೆ ಒಳ್ಳೆಯ ಭವಿಷ್ಯ ಇದೆ. ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತ ಮತ್ತು ದೇಶದ ಅಭಿವೃದ್ಧಿಯ ಕನಸು ಜನರ ಮೆಚ್ಚುಗೆ ಪಡೆಯುತ್ತಿವೆ ಎಂದರು.
ಇತರೆ ದೇಶಗಳ ಸಂಬAಧ ಬೆಸೆಯುವಲ್ಲಿ ಮೋದಿ ಅವರ ಚಾಣಕ್ಯ ರಾಜಕಾರಣ ನೆರವಾಗಿದೆ. ಇದನ್ನು ಕಾರ್ಯಕರ್ತರು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು. ಸ್ಥಳೀಯ ಚುನಾವಣೆಯಲ್ಲಿ ಉತ್ತಮ ಕೆಲಸ ಮಾಡಬೇಕು. ಕೇಂದ್ರ ಸರ್ಕಾರದ ಜನಪರ ಯೋಜನೆಗಳನ್ನು ಹಳ್ಳಿಗಳ ಜನರಿಗೆ ತಿಳಿಸಬೇಕು. ಸಾಮಾನ್ಯ ಕಾರ್ಯಕರ್ತರಿಗೂ ಪಕ್ಷದಲ್ಲಿ ಗೌರವ ಸಿಗುತ್ತಿದೆ ಎಂದು ಹೇಳಿದರು.
ವಿಧಾನಸಭಾ ಕ್ಷೇತ್ರದ ಎಸ್‌ಐಆರ್ ತಂಡದ ಬಿಎಲï‌ಎ ಡಿ. ದಯಾನಂದ ಮಾತನಾಡಿದರು. ಮುಖಂಡರಾದ ಸಿ.ಎಸ್. ಪ್ರಸಾದ್, ಬಿ.ಎಸ್. ಶಿವಪುತ್ರಪ್ಪ, ಬಾಳೆಕಾಯಿ ರಾಮದಾಸ್, ಡಾ.ಬಿ. ರಾಮರಾಜï, ಆರ್. ಕಾಂತರಾಜï, ಸಣ್ಣ ತಿಮ್ಮಕ್ಕ ಬೋರಣ್ಣ, ಜಗದಾಂಬ, ಭದ್ರಪ್ಪ, ಮೀರಾಸಾಬಿಹಳ್ಳಿ ಸುರೇಶ್ ಇದ್ದರು.
ಹಿರಿಯೂರು
ಬಿಜೆಪಿ ಪಕ್ಷದ ನಿಷ್ಠಾವಂತ ಕಾರ್ಯಕರ್ತರ ಶಕ್ತಿ ಮತ್ತು ಉತ್ಸಾಹ ಸಂಘಟನೆಗೆ ಪ್ರೇರಣೆಯಾಗಿದೆ ಎಂದು ಮಂಡಲ ಅಧ್ಯಕ್ಷ ಕೆ.ಅಭಿನಂದನ್ ಹೇಳಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಸೋಮವಾರ ಆಯೋಜಿಸಿದ್ದ ಬಿಜೆಪಿ ಸಂಸ್ಥಾಪನಾ ದಿನಾಚರಣೆಯಲ್ಲಿ ಮಾತನಾಡಿ, ಕಾಂಗ್ರೆಸ್ ಪಕ್ಷದ ದುರಾಡಳಿತ, ಜನ ವಿರೋಽ ನೀತಿ, ಭ್ರಷ್ಟಾಚಾರದಿಂದ ಜನರು ಬೇಸತ್ತಿದ್ದು, ಬಿಜೆಪಿ ಮೇಲೆ ಜನರ ನಂಬಿಕೆ, ವಿಶ್ವಾಸ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಎಂದರು.
ಪಕ್ಷ ಬಲವರ್ಧನೆಗೆ ಹಗಲಿರುಳು ದುಡಿದು ತಮ್ಮ ಜೀವವನ್ನೇ ಕಾರ್ಯಕರ್ತರು ಸಮರ್ಪಣೆ ಮಾಡಿದ್ದರಿಂದ ಇಂದು ಬಿಜೆಪಿ ವಿಶ್ವದ ಅತಿ ದೊಡ್ಡ ರಾಜಕೀಯ ಪಕ್ಷವಾಗಿ ಹೊರಹೊಮ್ಮಿದೆ ಎಂದು ತಿಳಿಸಿದರು.
ತಾಲೂಕು ಪ್ರಧಾನ ಕಾರ್ಯದರ್ಶಿ ಎಚ್.ಆರ್.ಯೋಗೇಶ್ ಮಾತನಾಡಿ, ರಾಷ್ಟಿçÃಯ ಚಿಂತನೆಗಳ ಮೂಲಕ ಅಭಿವೃದ್ಧಿಯ ಪಥಕ್ಕೆ ನಾಂದಿ ಹಾಡಿದ ಪಕ್ಷದ ಹಿರಿಯರನ್ನು ಸ್ಮರಿಸಿಕೊಂಡು, ತಳಮಟ್ಟದಿಂದ ಪಕ್ಷವನ್ನು ಬಲಪಡಿಸುತ್ತಿರುವ ಕಾರ್ಯಕರ್ತರ ಶ್ರಮವನ್ನು ಗೌರವಿಸಬೇಕು ಎಂದರು.
ಪಕ್ಷದ ಸಂಸ್ಥಾಪಕ ಶ್ಯಾಮಪ್ರಸಾದ್ ಮುಖರ್ಜಿ, ದೀನ ದಯಾಳ ಉಪಧ್ಯಾಯ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.
ಬಿಜೆಪಿ ಜಿಲ್ಲಾ ಕಾರ್ಯದರ್ಶಿ ವಿ.ವಿಶ್ವನಾಥ್, ಜೆ.ಬಿ.ರಾಜಣ್ಣ, ರಾಕೇಶ್, ಗೋವಿಂದರಾಜ್, ಮುರಳಿ, ನಿತಿನ್ ಗೌಡ, ಪ್ರಜ್ವಲ್, ಪ್ರದೀಪ್, ಕೆ.ಟಿ.ಹನುಮಂತ್, ಏಕಾಂತ್, ಹರೀಶ್, ಮಾರಣ್ಣ, ಸಿದ್ದೇಶ್, ಕಣುಮಯ್ಯ ಇತರರಿದ್ದರು.
ಹೊಸದುರ್ಗ
ಭಾರತೀಯ ಸಂಸ್ಕೃತಿ ಹಾಗೂ ಸಂಸ್ಕಾರ ಹೊಂದಿರುವ ದೇಶಭಕ್ತ ಪಕ್ಷವಾಗಿರುವ ಬಿಜೆಪಿಯಲ್ಲಿ ಸೇವೆ ಮಾಡುತ್ತಿರುವುದು ಕಾರ್ಯಕರ್ತರ ಹೆಮ್ಮೆಯಾಗಿದೆ ಎಂದು ರಾಜ್ಯ ಖನಿಜ ನಿಗಮದ ಮಾಜಿ ಅಧ್ಯಕ್ಷ ಎಸ್. ಲಿಂಗಮೂರ್ತಿ ಹೇಳಿದರು. ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಸೋಮವಾರ ಆಯೋಜಿಸಿದ್ದ ಪಕ್ಷದ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ದೀನ ದಯಾಳ ಉಪಾಧ್ಯಾಯ ಹಾಗೂ ಶ್ಯಾಮ ಪ್ರಸಾದ್ ಮುಖರ್ಜಿ ಅವರ ದೇಶಾಭಿಮಾನಿ ಚಿಂತನೆಗಳ -Àಲವಾಗಿ ೧೯೮೦ ಏಪ್ರಿಲï ೦೬ ರಂದು ಭಾರತೀಯ ಜನತಾ ಪಕ್ಷ ಆರಂಭವಾಯಿತು. ದೇಶದ ರಾಜಕೀಯ ಕ್ಷೇತ್ರದಲ್ಲಿ ಹೊಸ ಮನ್ವಂತರಕ್ಕೆ ಪಕ್ಷವು ಮುನ್ನುಡಿ ಬರೆಯಿತು ಎಂದು ತಿಳಿಸಿದರು.
೪೬ನೇ ವರ್ಷದ ಸಂಸ್ಥಾಪನಾ ದಿನಾಚರಣೆ ವೇಳೆಗೆ ಪ್ರಪಂಚದ ಅತಿ ಹೆಚ್ಚು ಕಾರ್ಯಕರ್ತರನ್ನು ಹೊಂದಿರುವ ಪಕ್ಷವಾಗಿ ಬಿಜೆಪಿ ಹೊರಹೊಮ್ಮಿದೆ. ದೇಶ ಮೊದಲು ಎನ್ನುವ ತತ್ವ ಸಿದ್ಧಾಂತದ ಮೂಲಕ ಬಹುತೇಕ ಭಾರತೀಯರ ಮನ ಗೆದ್ದು ದೇಶದ ಚುಕ್ಕಾಣಿ ಹಿಡಿದಿದೆ. ದೇಶದ ಜನರು ನೆಮ್ಮದಿಯಿಂದ ಬದುಕುವಂತಹ ವಾತಾವರಣ ನಿರ್ಮಾಣವಾಗಿದೆ ಎಂದರು.
ಪಕ್ಷದ ಮೊದಲ ಅಧ್ಯಕ್ಷರಾದ ಅಟಲï ಬಿಹಾರಿ ವಾಜಪೇಯಿ ಅವರು ಹಾಕಿಕೊಟ್ಟ ಭದ್ರ ಬುನಾದಿಯಲ್ಲಿ ಪಕ್ಷ ಬಲಿಷ್ಠವಾಗಿ ಬೆಳೆದು ನಿಂತಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಅಭಿವೃದ್ಧಿ ಹಾಗೂ ದಕ್ಷ ಆಡಳಿತದಿಂದಾಗಿ ಭಾರತ ವಿಶ್ವದ ರಾಷ್ಟçಗಳ ಸಾಲಿನಲ್ಲಿ ಮುಂಚೂಣಿಯ ದೇಶವಾಗಿ ಗುರುತಿಸಿಕೊಂಡಿದೆ.
ಸಮರ್ಥ ನಾಯಕತ್ವದ -Àಲದಿಂದಾಗಿ ಪ್ರಪಂಚವೇ ಯುದ್ಧದ ತಲ್ಲಣಕ್ಕೆ ಸಿಲುಕಿದ್ದರೂ ಭಾರತೀಯರು ಮಾತ್ರ ನೆಮ್ಮದಿಯಿಂದ ಬದುಕಲು ಸಾಧ್ಯವಾಗಿದೆ. ನರೇಂದ್ರ ಮೋದಿ ಅವರ ರಾಜ ತಾಂತ್ರಿಕ ನೀತಿಯು ದೇಶದ ಅಭಿವೃದ್ಧಿಗೆ ಪೂರಕವಾಗಿದೆ. ದೇಶಪ್ರೇಮಿ ಕಾರ್ಯಕರ್ತರ ಪಡೆಯು ಪಕ್ಷದ ನಿಜವಾದ ಆಸ್ತಿಯಾಗಿದೆ ಎಂದರು.
ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಕೆ.ಎಸ್. ಕಲ್ಮಠ ಮಾತನಾಡಿ, ೪೬ ವರ್ಷಗಳ ಇತಿಹಾಸ ಹೊಂದಿರುವ ಬಿಜೆಪಿಯು ದೇಶಪ್ರೇಮಿ ಹಾಗೂ ಬದ್ಧತೆಯ ಸಿದ್ಧಾಂತದ ಮೂಲಕ ದೇಶದ ಜನರ ಹೃದಯ ಗೆದ್ದಿದೆ. ಪಕ್ಷ ತಾಯಿಯ ರೂಪದಲ್ಲಿದ್ದು ಪ್ರತಿಯೊ ಬ್ಬರೂ ಪಕ್ಷವನ್ನು ಗೌರವಿಸಿದರೆ ಉತ್ತಮ ಸ್ಥಾನಮಾನ ದೊರೆಯುತ್ತದೆ.
ಸಾಮಾನ್ಯ ಕಾರ್ಯಕರ್ತ ಕೂಡ ಪಕ್ಷದ ಉನ್ನತ ಅಽಕಾರ ಹೊಂದಲು ಬಿಜೆಪಿಯಲ್ಲಿ ಮಾತ್ರ ಸಾಧ್ಯವಾಗಿದೆ. ಮುಖಂಡರಿಗಿAತ ಕಾರ್ಯಕರ್ತರಿಗೆ ಹೆಚ್ಚಿನ ಪ್ರಾಶಸ್ತ್ಯ್ತ ನೀಡುವ ಪದ್ಧತಿಯನ್ನು ಬಿಜೆಪಿಯಲ್ಲಿ ಮಾತ್ರ ಕಾಣಬಹುದಾಗಿದೆ ಎಂದು ಹೇಳಿದರು.
ಬಿಜೆಪಿ ಜಿ¯್ಲÁ ಉಪಾಧ್ಯಕ್ಷ ಎಚ್.ಬಿ ರವಿಕುಮಾರ್, ಮಂಜುನಾಥ್, ತಾಲೂಕು ಅಧ್ಯಕ್ಷ ಅಣ್ಣಪ್ಪಸ್ವಾಮಿ, ಕಾರ್ಯದರ್ಶಿ ಚಿತ್ತಪ್ಪ, ದೇವಪುರ ವಿರೂಪಾಕ್ಷ, ಜಗದೀಶ, ನಾಗರಾಜï, ಮುಖಂಡರಾದ ಜಗದೀಶ, ರಾಜಪ್ಪ, ಎಂ ಲಕ್ಷ್ಮಣ, ಹೆಗ್ಗೆರೆ ಶಂಕ್ರಪ್ಪ, ಮಲ್ಲಿಕಾರ್ಜುನ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net