ಸಂವಿಧಾನಕ್ಕೆ ಎದುರಾಗಿದೆ ದೊಡ್ಡ ಅಪಾಯ

ಚಿತ್ರದುರ್ಗದಲ್ಲಿ ಶನಿವಾರ ಆಯೋಜಿಸಿದ್ದ ಅರಿವಿನ ಚಾವಡಿ ಕಾರ್ಯಕ್ರಮದಲ್ಲಿ ಲೇಖಕ ರಹಮತ್ ತರೀಕೆರೆ. ಡಾ. ದೊಡ್ಡಮಲ್ಲಯ್ಯ, ಡಾ. ಮಮತಾ ಇತರರು ಇದ್ದರು.
ಚಿತ್ರದುರ್ಗದಲ್ಲಿ ಶನಿವಾರ ಆಯೋಜಿಸಿದ್ದ ಅರಿವಿನ ಚಾವಡಿ ಕಾರ್ಯಕ್ರಮದಲ್ಲಿ ಲೇಖಕ ರಹಮತ್ ತರೀಕೆರೆ. ಡಾ. ದೊಡ್ಡಮಲ್ಲಯ್ಯ, ಡಾ. ಮಮತಾ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಚಿಂತಕ ಎ.ನಾರಾಯಣ್ ಆತಂಕ
  • ಧಮ್ಮ ಕೇಂದ್ರದಲ್ಲಿ ಅರಿವಿನ ಚಾವಡಿ ಕಾರ್ಯಕ್ರಮ
  • ಸಾಂಸ್ಕೃತಿಕ ಚಳವಳಿ
ಚಿತ್ರದುರ್ಗ: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ದೇಶಕ್ಕೆ ಕೊಡುಗೆಯಾಗಿ ನೀಡಿರುವ ಸಂವಿಧಾನಕ್ಕೆ ಅಪಾಯ, ಸವಾಲು ಎದುರಾಗಿದೆ ಎಂದು ಚಿಂತಕ ಎ.ನಾರಾಯಣ್ ಹೇಳಿದರು.
ಎದ್ದೇಳು ಕರ್ನಾಟಕ, ನಾಡು ನುಡಿ ಬಳಗ, ಸಂಜೀವಿನಿ ಜೀವ ರಕ್ಷಕ ಟ್ರಸ್ಟ್, ರಾಜ್ಯರೈತ ಸಂಘ ಹಾಗೂ ಹಸಿರುಸೇನೆ ಹಾಗೂ ಅಂಬೇಡ್ಕರ್‌ ವಿಚಾರ ವೇದಿಕೆ ಸಹಯೋಗದಲ್ಲಿ ನಗರದ ಧಮ್ಮ ಕೇಂದ್ರದಲ್ಲಿ ಶನಿವಾರ ಆಯೋಜಿಸಿದ್ದ `ಅರಿವಿನ ಚಾವಡಿ' ಕಾ ರ್ಯಕ್ರಮದಲ್ಲಿ ಸಂವಿಧಾನದ ಮುಂದಿರುವ ಸವಾಲುಗಳು ಕುರಿತು ಮಾತನಾಡಿದರು.
ವಿರೋಽಗಳ ಕೈಯಲ್ಲಿ ದೈತ್ಯ ರಾಜಕೀಯ ಬಲವಿರುವುದರಿಂದ ಸಂವಿಧಾನಕ್ಕೆ ಸವಾಲು ಎದುರಾಗಿದೆ. ಇದನ್ನು ಅರ್ಥಮಾಡಿ ಕೊಳ್ಳದಿದ್ದರೆ ಸಮಾನತೆ ದೂರದ ಮಾತಾಗುತ್ತದೆ. ಸಂವಿಧಾನ ರಕ್ಷಣೆ ೨ನೇ ಸ್ವಾತಂತ್ರ‍್ಯ ಸಂಗ್ರಾಮವಿದ್ದAತೆ. ಸಂವಿಧಾನ ವಿರೋಽಗಳು ಸ್ವಾತಂತ್ರ‍್ಯ ಕಿತ್ತು ಕೊಳ್ಳುವ ಕೆಲಸವನ್ನು ಕ್ಷಣ, ಕ್ಷಣಕ್ಕೂ ಮಾಡುತ್ತಿದ್ದಾರೆ ಎಂದರು.
ಸಾಮಾಜಿಕ ಚಳವಳಿಗಳ ಹಿಂದೆ ಹಲವು ಮಹನೀಯರಿದ್ದಾರೆ. ಸಾಮಾಜಿಕ ಸಮಾನತೆಗೆ ಅಂಬೇಡ್ಕರ್ ಹೋರಾಟವಾಗಿತ್ತು ಎಂ ದು ಲೇಖಕ ರಹಮತ್ ತರೀಕೆರೆ ಹೇಳಿದರು. ನಾಗರಿಕತೆ, ಸಂಸ್ಕೃತಿ ಮತ್ತು ಸಾಂಸ್ಕೃತಿಕ ಹೋರಾಟ ಕುರಿತು ಮಾತನಾಡಿದ ಅ ವರು, ಧರ್ಮ, ಭಾಷೆ, ನಂಬಿಕೆ, ಪರಂಪರೆಗಳನ್ನು ಬಳಸಿಕೊಂಡು ಜನರನ್ನು ಸಂಘಟಿಸಬಹುದು, ವಿಭಜಿಸಲೂಬಹುದು. ಹೊಸ ಸಾಂಸ್ಕೃತಿಕ ಪದ್ಧತಿಗಳನ್ನು ಹುಟ್ಟು ಹಾಕುವುದು ಸಾಂಸ್ಕೃತಿಕ ಚಳವಳಿಯ ಮುಖ್ಯಭಾಗವಾಗಿದೆ ಎಂದರು.
ಚಿಂತಕ ಪ್ರೊ.ಜೆ.ಯಾದವರೆಡ್ಡಿ ಮಾತನಾಡಿ, ಸಂವಿಧಾನದ ಮೂಲ ಆಶಯಕ್ಕೆ ಧಾರ್ಮಿಕ ಮೂಲಭೂತವಾದಿಗಳು ವಿರೋಽಗ ಳಾಗಿದ್ದಾರೆ. ಮರ್ಯಾದೆ ಹತ್ಯೆಗಳನ್ನು ನೋಡಿದರೆ ಯಾವ ನಾಗರಿಕ ಸಮಾಜದಲ್ಲಿದ್ದೇವೆ ಎನ್ನುವ ಭೀತಿ ಕಾಡುತ್ತಿದೆ. ಪ್ರಜಾ ಪ್ರಭುತ್ವದ ಮೇಲಿನ ನಂಬಿಕೆ ದೇಶ ಉಳಿಸಬಲ್ಲದು ಎಂದರು.
ಕಸಾಪ ಮಾಜಿ ಜಿಲ್ಲಾಧ್ಯಕ್ಷ ಡಾ.ದೊಡ್ಡಮಲ್ಲಯ್ಯ, ಉಪನ್ಯಾಸಕಿ ಡಾ. ಮಮತಾ ಮಾತನಾಡಿದರು. ಧಮ್ಮ ಕೇಂದ್ರದ ಆರ್. ವಿಶ್ವ ಸಾಗರ್, ಅನ್ನಪೂರ್ಣ ವಿಶ್ವಸಾಗರ್, ಚಿತ್ರದುರ್ಗ ವಿಜ್ಞಾನ ಕೇಂದ್ರದ ಉಪಾಧ್ಯಕ್ಷ ಎಂ.ಆರ್. ದಾಸೇಗೌಡ, ರೈತ ಮುಖಂಡ ಬಸ್ತಿ ಹಳ್ಳಿ ಜಿ.ಸುರೇಶ್‌ಬಾಬು ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net