ಚಿತ್ರದುರ್ಗ: ದುರಾಡಳಿತವನ್ನೇ ಸರ್ಕಾರದ ನೀತಿಯಾಗಿಸಿಕೊಂಡಿರುವ ಕಾಂಗ್ರೆಸ್ ಎಸ್‌ಐಆರ್‌ಗೆ ಹೆದರಿದೆ ಎಂದು ಸಂಸದ ಗೋವಿಂದ ಎಂ. ಕಾರಜೋಳ ಹೇಳಿದ್ದಾರೆ.
ನಗರದಲ್ಲಿ ಶನಿವಾರ ಸುದ್ದಿಗಾರರ ಜತೆ ಮಾತನಾಡಿ, ಕಾಂಗ್ರೆಸ್ಸಿಗರು ಮದರಸಾ, ಮಸೀದಿ, ಮಂದಿರ, ಕಲ್ಯಾಣ ಮಂಟಪಗಳಲ್ಲಿ ಗುಂಪು-ಗುAಪಾಗಿ ಎಸ್‌ಐಆರ್‌ಗೆ ಮುಂದಾಗಿದ್ದಾರೆ.ಇದು ಆ ಪಕ್ಷದ ದುರಾಡಳಿತಕ್ಕೆ ಸಾಕ್ಷಿಯಾಗಿದೆ ಎಂದು ಕಿಡಿ ಕಾರಿದರು.
ಬಿಎಲ್‌ಒಗಳು ಕೆಲವೆಡೆ ನಮೂನೆ ಕೊಟ್ಟು ಹೋಗ್ತಿದ್ದಾರೆ, ನೀವೇ ಭರ್ತಿ ಮಾಡಿ ಎನ್ನುತ್ತಿದ್ದಾರೆ. ಅನಕ್ಷರಸ್ಥರಿಗೆ -Áರಂ ಭರ್ತಿ ಮಾಡಲು ಆಗುವುದಿಲ್ಲ. ಗೊಲ್ಲರಹಟ್ಟಿ, ಹಾಡಿಗಳಲ್ಲಿ ಅನಕ್ಷರಸ್ಥರಿದ್ದಾರೆ ಎಂದು ರಾಜ್ಯಮುಖ್ಯ ಚುನಾವಣಾ ಆಯುಕ್ತರಿಗೆ ತಿಳಿಸಿದ್ದೇನೆ. ಅಽಕಾರಿಗಳೇ ಮತದಾರರಿಂದ ಮಾಹಿತಿ ಪಡೆದು -Áರಂ ತುಂಬುವ ವ್ಯವಸ್ಥೆ ಆಗಬೇಕು ಎಂದರು.
ಎಸ್‌ಐಆರ್ ವಿರೋಽಸಿ ಕೇಂದ್ರದ ಪ್ರತಿಪಕ್ಷ ನಾಯಕ ರಾಹುಲ್‌ಗಾಂಽ ಅವರು ರ‍್ಯಾಲಿ ಮಾಡುತ್ತಿದ್ದಾರೆ. ಆದರೆ, ಜನ ಕಾಂಗ್ರೆಸ್ ತಿರಸ್ಕರಿಸಿ ಬಿಜೆಪಿಗೆ ಮತ ನೀಡಿದ್ದಾರೆ. ಅವರು ಈ ಮೊದಲು ಇವಿಎಂ ಸರಿಯಿಲ್ಲ ಎಂದಿದ್ದರು. ನಾವು ಮತ್ತೆ ಹೆಬ್ಬೆಟ್ಟು ಸಂಸ್ಕೃತಿಗೆ ಹೋಗಬೇಕಾ ಎಂದು ಪ್ರಶ್ನಿಸಿದ ಸಂಸದರು, ಎಸ್‌ಐಆರ್ ಕೆಲವು ರಾಜ್ಯಗಳಲ್ಲಿ ಯಶಸ್ಸು ಕಂಡಿದೆ. ರೋಣದಲ್ಲಿ ಒಬ್ಬ ವ್ಯಕ್ತಿಯ ಹೆಸರು ೧೭ ಕಡೆ ಇದೆ ಎಂದರು.
ಮಸೀದಿ, ಮಂದಿರ, ಮದರಸಾ, ಕಲ್ಯಾಣಮಂಟಪಗಳಲ್ಲಿ ಎಸ್‌ಐಆರ್ ಪ್ರಕ್ರಿಯೆ ಕೈಬಿಡುವಂತೆ ಕೇಂದ್ರ ಸಚಿವ ಎಚ್.ಡಿ. ಕುಮಾರ ಸ್ವಾಮಿ ಒತ್ತಾಯಿಸಿದ್ದಾರೆ. ಕಾಂಗ್ರೆಸ್ ಸರ್ಕಾರಗಳಿರುವ ರಾಜ್ಯಗಳು ನುಸುಳುಕೋರರಿಗೆ ತವರುಮನೆ ಇದ್ದಂತೆ. ಆದ್ದರಿಂದಲೇ ಕಾಂಗ್ರೆಸ್ ಎಸ್‌ಐಆರ್ ವಿರೋಽಸುತ್ತಿದೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ಬರಗಾಲ ಆವರಿಸಿದ್ದು, ಹೋಬಳಿಗೆ ಒಂದರAತೆ ಗೋಶಾಲೆಗಳನ್ನು ತೆರೆಯಬೇಕು. ಬೆಳೆ ಪರಿಹಾರ ನೀಡಬೇಕು, ಬೆ ಳೆ ವಿಮೆ ಕಂತನ್ನು ಸರ್ಕಾರವೇ ಭರಿಸಬೇಕು. ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಜಿಲ್ಲೆಗೆ ೨೫ ಕೋಟಿ ರೂ. ಕೊಡುವಂತೆ ರಾಜ್ಯ ಸರ್ಕಾ ರವನ್ನು ಆಗ್ರಹಿಸಿದರು.
ಕಾAಗ್ರೆಸ್ಸಿನಿAದ ಅನಪೇಕ್ಷಿತ ಗೊಂದಲ
ಚಿತ್ರದುರ್ಗ: ಕಾಂಗ್ರೆಸ್ ಎಸ್‌ಐಆರ್ ವಿಚಾರದಲ್ಲಿ ಜನರಲ್ಲಿ ಅನಗತ್ಯ ಮತ್ತು ಅನಪೇಕ್ಷಿತ ಗೊಂದಲ ಸÊಷ್ಟಿಸುತ್ತಿದೆ ಎಂದು ಮಧುಗಿರಿ ಬಿಜೆಪಿ ಮಾಜಿ ಅಧ್ಯಕ್ಷ ಹನುಮಂತೇಗೌಡ ಆರೋಪಿಸಿದ್ದಾರೆ.
ಈ ಹಿಂದೆ ೨೦೦೨ರಲ್ಲಿ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ನಡೆದಿತ್ತು. ಕೇಂದ್ರ ಚುನಾವಣಾ ಆಯೋಗದ ಸೂಚನೆಯಂತೆ ಈಗ ಪುನಃ ನಡೆಯುತ್ತಿದೆ. ಅನರ್ಹರನ್ನು ಮತಪಟ್ಟಿಯಿಂದ ಕೈಬಿಡುವುದು, ಅರ್ಹರನ್ನು ಉಳಿಸಿಕೊಂಡು ಮತಪಟ್ಟಿ ಶುದ್ಧಗೊಳಿಸುವ ಪ್ರಕ್ರಿಯೆ ಇದಾಗಿದೆ.
ಆದರೆ, ಬಿಎಲ್‌ಒಗಳ ಮೇಲೆ ಅನಗತ್ಯ ಒತ್ತಡ ಹಾಕುವುದು ಕಂಡು ಬರುತ್ತಿದೆ. ಬಿಎಲ್‌ಒಗಳ ಮೇಲೆ ಅನಗತ್ಯ ಒತ್ತಡ ಹೇರುವು ದು ಮುಂದುವರಿದರೆ ಬಿಜೆಪಿ ಸುಮ್ಮನಿರದು, ಸೂಕ್ತ ಪ್ರತಿಕ್ರಿಯೆ ನೀಡಬೇಕಾಗುತ್ತದೆ ಎಂದು ಹೇಳಿಕೆಯಲ್ಲಿ ಎಚ್ಚರಿಸಿದ್ದಾರೆ.
ಎಸ್‌ಐಆರ್ ಕುರಿತಂತೆ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಘನತೆಗೆ ತಕ್ಕಂತೆ ಮಾತನಾಡಲಿ ಎಂದು ಹನುಮಂತೇಗೌಡ ಆಗ್ರಹಿಸಿದ್ದಾರೆ.