ಚಿತ್ರದುರ್ಗದ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಆಯೋಜಿಸಿದ್ದ ಪದಾಽಕಾರಿಗಳ ಸಭೆಯಲ್ಲಿ ಜಿಲ್ಲಾಧ್ಯಕ್ಷ ಕೆ.ಟಿ. ಕುಮಾರಸ್ವಾಮಿ, ಮಾಧುರಿ ಗಿರೀಶ್, ಡಾ.ಮಂಜುನಾಥ, ವೆಂಕಟೇಶ್ ಯಾದವ್, ಜಿ.ಎಚ್. ಮೋಹನ್ ಕುಮಾರ್, ಮಲ್ಲಿಕಾರ್ಜುನ ಇತರರು ಇದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಜಿಲ್ಲಾಧ್ಯಕ್ಷ ಕೆ.ಟಿ. ಕುಮಾರಸ್ವಾಮಿ ಸಲಹೆ
ಬಿಜೆಪಿ ಜಿಲ್ಲಾ ಮಟ್ಟದ ಪದಾಽಕಾರಿಗಳ ವಿಶೇಷ ಸಭೆ
ವಿಧಾನಸಭೆ ಚುನಾವಣೆ
ಚಿತ್ರದುರ್ಗ: ಕೇಂದ್ರದ ಸಾಧನೆಗಳನ್ನು ಜಿಲ್ಲೆಯ ಮತದಾರರಿಗೆ ತಿಳಿಸುವ ಮೂಲಕ ಮುಂಬರುವ ಎಲ್ಲ ಚುನಾವಣೆಗಳಲ್ಲಿ ಪಕ್ಷವನ್ನು ಗೆಲ್ಲಿಸಲು ಸಜ್ಜಾಗುವಂತೆ ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಟಿ.ಕುಮಾರಸ್ವಾಮಿ ಕಾರ್ಯಕರ್ತರಿಗೆ ಸಲಹೆ ನೀಡಿದರು.
ಪಕ್ಷದ ಜಿಲ್ಲಾ ಕಚೇರಿಯಲ್ಲಿ ಶುಕ್ರವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಪದಾಽಕಾರಿಗಳ ವಿಶೇಷ ಸಭೆಯಲ್ಲಿ ಮಾತನಾಡಿದ ಅ ವರು, ಜಿಲ್ಲೆಯ ಎಲ್ಲ ಮಂಡಲಗಳಲ್ಲಿ ಪ್ರತಿ ಬೂತ್‌ಮಟ್ಟದಲ್ಲಿ ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ಜನರಿಗೆ ಮಾಹಿತಿ ತಿಳಿಸ ಬೇಕು. ರಾಜ್ಯದ ೨೦೨೮ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಸಮಿಶ್ರ ಸರ್ಕಾರÀವನ್ನು ಅಽಕಾರಕ್ಕೆ ತರಲು ಶ್ರಮಿಸ ಬೇಕಿದೆ ಎಂದರು.
ದಾವಣಗೆರೆ ವಿಭಾಗ ಸಹಾ ಪ್ರಭಾರಿ ಎ.ಮುರಳಿ ಮಾತನಾಡಿ,ಪಕ್ಷ ಬಲ ಪಡಿಸಲು ಪ್ರತಿ ತಿಂಗಳು ನಿರಂತರವಾಗಿ ಸಭೆಗಳನ್ನು ನಡೆಸಲಾಗುತ್ತಿದೆ. ವಿಶ್ವ ಪರಿಸರ, ಅಂತಾರಾಷ್ಟೀಯ ಯೋಗ ದಿನಾಚರಣÉಗಳು, ಪ್ರಧಾನ ಮಂತ್ರಿಯಾಗಿ ನರೇಂದ್ರ ಮೋದಿ ಅವರು ೧೨ ವರ್ಷ ಪೂರ್ಣಗೊಳಿಸಿರುವ ಹಿನ್ನೆಲೆಯಲ್ಲಿ ಪ್ರಗತಿಪಥ ಯಾತ್ರೆ, ಸಮಾಜದ ನಾನಾ ವಲಯದ ಪ್ರಮುಖರೊಂದಿಗೆ ಸಂವಾದ ಕಾರ್ಯಕ್ರಮಗಳನ್ನು ಆಯೋಜಿಸಬೇಕಿದೆ ಎಂದರು.
ಸಭೆಯಲ್ಲಿ ಜಿಲ್ಲಾ ಪದಾಽಕಾರಿಗಳಿಗೆ ನೇಮಕ ಪತ್ರ ವಿತರಿಸಲಾಯಿತು. ಎಸ್‌ಐಆರ್ ಕುರಿತು ಚರ್ಚಿಸಲಾಯಿತು. ಮಾಧುರಿ ಗಿರೀಶ್, ಡಾ. ಮಂಜುನಾಥ, ವೆಂಕಟೇಶ್ ಯಾದವ್, ಜಿ.ಎಚ್. ಮೋಹನ್ ಕುಮಾರ್, ಮಲ್ಲಿಕಾರ್ಜುನ, ಭಾರ್ಗವಿ ದ್ರಾವಿಡ, ನಾಗರಾಜ್ ಬೇದ್ರೆ ಇತರರು ಇದ್ದರು.
ನೇಮಕ: ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷರಾಗಿ ಬಿ.ಎನ್.ಅರುಣ್‌ಕುಮಾರ್, ಒಬಿಸಿ ಮೋರ್ಚಾ ಜಿಲ್ಲಾಧ್ಯಕ್ಷರಾಗಿ ಬಾಲರಾಜ್ ಯಾದವ್, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷರಾಗಿ ರೂಪಾ ವಿನಯ್‌ಕುಮಾರ್, ರೈತ ಮೋರ್ಚಾ ಜಿಲ್ಲಾಧ್ಯಕ್ಷರಾಗಿ ಜಗದೀಶ್ ಗೂಳಿ ಹಟ್ಟಿ, ಸಾಮಾಜಿಕ ಜಾಲಾತಾಣದ ಜಿಲ್ಲಾ ಸಂಚಾಲಕರಾಗಿ ಹನುಮಂತಪ್ಪ ಉಪ್ಪಾರ, ಪ್ರಕೋಷ್ಠ ಜಿಲ್ಲಾ ಸಂಯೋಜಕರಾಗಿ ಸಂತೋಷ್ ಗುಡಿಮಠ ಹಾಗೂ ಜಿಲ್ಲಾ ಸಹ ಸಂಯೋಜಕರಾಗಿ ನಂದಿ ನಾಗರಾಜ್ ನೇಮಕವಾಗಿದ್ದಾರೆ.