ಚಿತ್ರದುರ್ಗದಲ್ಲಿ ಮಂಗಳವಾರ ಮಾದಕ ಪದಾರ್ಥಗಳ ದುರ್ಬಳಕೆ ವಿರುದ್ಧ ಪ್ರತಿಜ್ಞೆ ವಿಽ ಬೋಧನಾ ಕಾರ್ಯಕ್ರಮದಲ್ಲಿ ಜಿಲ್ಲಾ ಅಂಗವಿಕಲರ ಕಲ್ಯಾಣಾಽಕಾರಿ ಜೆ. ವೈಶಾಲಿ, ಮುಖೇಶ್, ಸಿದ್ದೇಶ್, ಚೇತನ್, ಶಂಕರಪ್ಪ ಇತರರು ಇದ್ದರು.
ಚಿತ್ರದುರ್ಗ: ಚಿತ್ರದುರ್ಗ ಜಿಲ್ಲಾ ಪಂಚಾಯಿತಿಯ ಎನ್‌ಐಸಿ ಕೇಂದ್ರದಲ್ಲಿ ಮಂಗಳವಾರ ಮಾದಕ ಪದಾರ್ಥಗಳ ದುರ್ಬಳಕೆ ವಿರುದ್ಧ ಪ್ರತಿಜ್ಞಾವಿಽ ಬೋಽಸಲಾಯಿತು.
ಕೇಂದ್ರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದಿಂದ ನಶಾಮುಕ್ತ ಭಾರತ ಅಭಿಯಾನದ ೫ನೇ ವಾರ್ಷಿಕೋತ್ಸವವನ್ನು ಪಂಜಾಬ್‌ನ ಅಮೃತಸರ್‌ನಲ್ಲಿ ಆಯೋಜಿಸಲಾಗಿತ್ತು. ಇದರ ಅಂಗವಾಗಿ ಪ್ರತಿಜ್ಞಾವಿಽ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಈ ವೇಳೆ ಮಾತನಾಡಿದ ಜಿಲ್ಲಾ ಅಂಗವಿಕಲರ ಕಲ್ಯಾಣಾಽಕಾರಿ ಜೆ. ವೈಶಾಲಿ, ನಶಾಮುಕ್ತ ಭಾರತ ಅಭಿಯಾನದಡಿ ಜಿಲ್ಲೆಯಲ್ಲಿ ಈವರೆಗೆ ೭೭೮ ವಿವಿಧ ಕಾರ್ಯಕ್ರಮಗಳನ್ನು ಶಾಲಾ, ಕಾಲೇಜುಗಳಲ್ಲಿ ಆಯೋಜಿಸಿ ಜಾಗೃತಿ ಮೂಡಿಸಲಾಗಿದೆ ಎಂದರು.
ಕೇAದ್ರ ಸರ್ಕಾರ ಅಭಿಯಾನವನ್ನು ಆಗಸ್ಟ್ ೨೦೨೦ರಿಂದ ಜಾರಿಗೊಳಿಸಿದೆ. ಮೊದಲ ಹಂತದಲ್ಲಿ ೨೦೨೧-೨೨ ನೇ ಸಾಲಿನಿಂದ ಕರ್ನಾಟಕದ ೬ ಜಿಲ್ಲೆಗಳಲ್ಲಿ ಉಳಿದ ೨೫ ಜಿಲ್ಲೆಗಳಲ್ಲಿ ೨೦೨೪-೨೫ರಿಂದ ಅನುಷ್ಠಾನಗೊಳಿಸಲಾಗಿದೆ. ಅಭಿಯಾನದ ೫ನೇ ವಾರ್ಷಿಕೋತ್ಸವ ಅಂಗವಾಗಿ ಕಳೆದ ಆಗಸ್ಟ್ ೧ರಿಂದ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಘೋಷಣೆಗಳ ಬರವಣಿಗೆ, ರಂಗೋಲಿ, ಚಿತ್ರ ಬಿಡಿಸುವ ಸ್ಪರ್ಧೆ ಮತ್ತಿತರ ಚಟುವಟಿಕೆಗಳ ಮೂಲಕ ಮಾದಕ ವಸ್ತುಗಳ ವಿರುದ್ಧ ಜಾಗೃತಿ ಮೂಡಿಸಲಾಗಿದೆ ಎಂದು ತಿಳಿಸಿದರು.
ಜಿಲ್ಲಾ ಸೂಚನಾಽಕಾರಿ ಮುಖೇಶ್, ನೆಟ್‌ವರ್ಕ್ ಇಂಜಿನಿಯರ್‌ಗಳಾದ ಸಿದ್ದೇಶ್, ಚೇತನ್, ಬಸವೇಶ್ವರ ವಿದ್ಯಾಸಂಸ್ಥೆ ಕಾರ್ಯದರ್ಶಿ ಶಂಕರಪ್ಪ ಇತರರು ಇದ್ದರು.