ಶಿಕ್ಷಕರ ಮೇಲಿದೆ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಹೊಣೆ

 ಚಿತ್ರದುರ್ಗದ ಶ್ರೀ ವೆಂಕಟೇಶ್ವರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಶನಿವಾರ ಆಯೋಜಿಸಿದ್ದ ನವೋತ್ಸವ ಸಮಾರಂಭವನ್ನು ಚಳ್ಳಕೆರೆ ಶ್ರೀ ನರಹರಿ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಯಾದಾಟಿ ರಾಜಾರಾಂ ಉದ್ಘಾಟಿಸಿದರು. ಕೆ.ಪಿ. ನಾಗಭೂಷಣ ಶೆಟ್ಟಿ, ಎ.ಜೆ. ಶಿವಕುಮಾರ್ ಇದ್ದರು.
ಚಿತ್ರದುರ್ಗದ ಶ್ರೀ ವೆಂಕಟೇಶ್ವರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಶನಿವಾರ ಆಯೋಜಿಸಿದ್ದ ನವೋತ್ಸವ ಸಮಾರಂಭವನ್ನು ಚಳ್ಳಕೆರೆ ಶ್ರೀ ನರಹರಿ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಯಾದಾಟಿ ರಾಜಾರಾಂ ಉದ್ಘಾಟಿಸಿದರು. ಕೆ.ಪಿ. ನಾಗಭೂಷಣ ಶೆಟ್ಟಿ, ಎ.ಜೆ. ಶಿವಕುಮಾರ್ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಯಾದಾಟಿ ರಾಜಾರಾಂ ಸಲಹೆ
  • ಶ್ರೀ ವೆಂಕಟೇಶ್ವರ ಶಿಕ್ಷಣ ಮಹಾವಿದ್ಯಾಲಯ
  • `ನವೋತ್ಸವ ೨ಕೆ ೨೬' ಸಮಾರಂಭ
ಚಿತ್ರದುರ್ಗ: ವಿದ್ಯಾರ್ಥಿಗಳು ಎಷ್ಟೇ ತುಂಟರಾಗಿದ್ದರೂ ಅವರನ್ನು ಪ್ರೀತಿಯಿಂದ ತಿದ್ದಿ ಭವಿಷ್ಯ ರೂಪಿಸಬೇಕು ಎಂದು ಚಳ್ಳಕೆರೆ ಶ್ರೀ ನರಹರಿ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಯಾದಾಟಿ ರಾಜಾರಾಂ ಶಿಕ್ಷಕರಿಗೆ ಸಲಹೆ ನೀಡಿದರು.
ನಗರದ ಶ್ರೀ ವೆಂಕಟೇಶ್ವರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಶನಿವಾರ ಆಯೋಜಿಸಿದ್ದ ವಿದ್ಯಾರ್ಥಿ ಸಂಘದ ಉದ್ಘಾಟನೆ, ಪ್ರತಿಭಾ ಪುರಸ್ಕಾರ ಹಾಗೂ ಪ್ರಥಮ ಸೆಮಿಸ್ಟರ್ ವಿದ್ಯಾರ್ಥಿಗಳ ಸ್ವಾಗತಿಸುವ `ನವೋತ್ಸವ ೨ಕೆ ೨೬' ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳ ತುಂಟತನಕ್ಕೆ ಬಾಹ್ಯದಲ್ಲಿ ಅವರನ್ನು ಶಿಕ್ಷಿಸಿದರೂ, ಅಂತರ್ಯದಲ್ಲಿ ಅವರೆಡೆ ವಿಶ್ವಾಸ, ಪ್ರೀತಿ, ಮಮಕಾರೊಂದಿಗೆ ಅವರ ಭವಿಷ್ಯ ಬೆಳಗುವ ಹೊಣೆ ಶಿಕ್ಷಕರ ಮೇಲಿದೆ ಎಂದರು.
ದೇವರಾಜ ಅರಸು ಶಿಕ್ಷಣ ಸಂಸ್ಥೆ ಸಂಸ್ಥೆ ಸಿಇಒ ಎಂ.ಸಿ.ರಘುಚAದನ್ ಮಾತನಾಡಿ, ವ್ಯವಸ್ಥೆ ಹದ ಗೆಡುತ್ತಿರುವ ಈ ಆತಂಕದ ಸಮಯದಲ್ಲಿ ಶಿಕ್ಷಕರು ಸಮಾಜಕ್ಕೆ ಕೈಗನ್ನಡಿಯಂತಾಗಬೇಕು. ಕೆಲವರಿಂದ ಇಡೀ ಶಿಕ್ಷಕವÊತ್ತಿಗೆ ಧಕ್ಕೆ ಆಗುತ್ತಿದೆ. ಇದು ಸಲ್ಲದು ಎಂದರು.
ಮಹಾವಿದ್ಯಾಲಯದ ಪ್ರಾಚಾರ್ಯ ಕೆ.ಪಿ. ನಾಗಭೂಷಣ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಶ್ರೀ ವೆಂಕಟೇಶ್ವರ ಪ್ರಥಮ ದರ್ಜೆ ಕಾ ಲೇ ಜಿನ ಪ್ರಾಚಾರ್ಯ ಎ.ಜೆ. ಶಿವಕುಮಾರ್, ವಿನಸ್ ಆಕಾಡೆಮಿ ಶೈಕ್ಷಣಿಕ ನಿರ್ದೇಶಕ ಡಾ.ಎಚ್.ಎನ್. ಪ್ರದೀಪ್, ಸಹಾಯಕ ಪ್ರಾ ಧ್ಯಾಪಕರಾದ ಆರ್.ಎಸ್. ರಾಜು, ವಿ. ಪ್ರಕಾಶ್, ಡಾ.ಜಿ.ಬಿ. ರಾಜಪ್ಪ, ಡಾ.ಬಿ. ಚಂದ್ರಪ್ಪ, ಡಾ.ಲಿಂಗರಾಜ ಹಂಚಿನಮನಿ, ಗ್ರಂಥ ಪಾಲಕ ಸಿ. ಬಸವರಾಜ, ಪ್ರತಿಭಾ ಪುರಸ್ಕೃತರಾದ ಎಂ. ಹೇಮಾವತಿ, ಎಚ್.ಎಂ. ಅಂಜಲಿ, ಎನ್.ಬಿ. ಅಶ್ವಿನಿ, ಎಂ.ಎಸ್. ಮೇಘನಾ ಮತ್ತಿತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net