ಸಿರಿಗೆರೆಯ ಬಿ. ಲಿಂಗಯ್ಯ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿ ಸಂಘದ ಉದ್ಘಾಟನೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಡಾ. ಜೆ.ಸಿ. ಮಂಜುನಾಥ, ಕೆ.ಈ. ಬಸವರಾಜಪ್ಪ, ಜಮ್ಮೇನಹಳ್ಳಿ ಮಹದೇವಪ್ಪ, ಬಿ.ಎಸ್. ಅರುಣ್‌ಕುಮಾರ್, ಜಿ.ಎನ್. ರವಿಕುಮಾರ್, ಯು. ಚಂದ್ರಪ್ಪ, ಬಿ.ಎಸ್. ಮರುಳಸಿದ್ದಯ್ಯ, ಸುಮಾ, ವಿಜಯಚಾರಿ ಇತರರು ಇದ್ದರು. goals
ಬಿ. ಲಿಂಗಯ್ಯ ಪಿಯು ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘದ ಉದ್ಘಾಟನೆ
ಸಿರಿಗೆರೆ: ವಿದ್ಯಾರ್ಥಿಗಳು ಶ್ರದ್ಧೆ, ಆಸಕ್ತಿಯಿಂದ ಕಲಿತು ಪ್ರತಿಭಾವಂತರಾಗಿ ಹೊರಹೊಮ್ಮಬೇಕು ಎಂದು ಉಪನ್ಯಾಸಕ ಡಾ.ಜೆ.ಸಿ. ಮಂಜುನಾಥ್ ಹೇಳಿದರು. goals
ಬಿ. ಲಿಂಗಯ್ಯ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗ ಆಯೋಜಿಸಿದ್ದ ವಿದ್ಯಾರ್ಥಿ ಸಂಘದ ಉದ್ಘಾಟನೆ, ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿ, ವಿದ್ಯಾರ್ಥಿಗಳಿಗೆ ನಿರ್ದಿಷ್ಟ ಗುರಿ ಮುಖ್ಯ. ಅದನ್ನು ಸಾಕಾರಗೊಳಿಸಲು ಶಿಕ್ಷಕರ ಮಾರ್ಗದರ್ಶನ ಪಡೆದುಕೊಳ್ಳಬೇಕು. ಸಮಯ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಯಾವುದಾದರೂ ವಿಷಯದಲ್ಲಿ ಹಿನ್ನಡೆಯಾದರೆ ಕುಗ್ಗಬಾರದು. ವಿದ್ಯಾರ್ಥಿಗಳು ಸದಾ ಜ್ಞಾನದ ಹಿಂದೆ ಬೀಳಬೇಕು. ಏಕಲವ್ಯನ ಏಕಾಗ್ರತೆ, ಮೌಂಟ್ ಎವರೆಸ್ಟ್ ಏರಿದ ತೇನ್‌ಸಿಂಗ್ ನೋರ್ಕೆ, ಎಡ್ಮಂಡ್ ಹಿಲರಿಯಂಥವರ ಸಾಧಕರು ಆದರ್ಶವಾಗಬೇಕು ಎಂದರು.
ಉಪ ಪ್ರಾಚಾರ್ಯ ಕೆ.ಈ. ಬಸವರಾಜಪ್ಪ ಮಾತನಾಡಿ, ವಿದ್ಯಾರ್ಥಿಗಳು ಆದರ್ಶಗಳನ್ನು ಪಾಲಿಸಬೇಕು. ಉತ್ತಮ ಲಿತಾಂಶಕ್ಕೆ ನಿರಂತರ ಅಧ್ಯಯನ ನಡೆಸಬೇಕು ಎಂದು ತಿಳಿಸಿದರು.
2025-26ನೇ ಸಾಲಿನಲ್ಲಿ ಹೆಚ್ಚು ಅಂಕಗಳಿಸಿದ ಒ.ಎಲ್. ಗಾಯತ್ರಿ, ಎಸ್.ವಿ. ಸಮನ್ವಿತ ಹಾಗೂ ಕೆ.ಎಸ್. ಸರಸ್ವತಿ ಅವರಿಗೆ ಪ್ರತಿಭಾ ಪುರಸ್ಕಾರ, ಪ್ರೋತ್ಸಾಹಧನ ನೀಡಿ ಗೌರವಿಸಲಾಯಿತು.
ಸಲಹಾ ಸಮಿತಿ ಉಪಾಧ್ಯಕ್ಷ ಕೆ.ಜಿ. ಬಸವನಗೌಡ, ಸದಸ್ಯ ಜಮ್ಮೇನಹಳ್ಳಿ ಮಹದೇವಪ್ಪ, ಅಧ್ಯಾಪಕ ಕಾರ್ಯದರ್ಶಿ ಬಿ.ಎಸ್. ಅರುಣ್‌ಕುಮಾರ್, ಸಹ ಕಾರ್ಯದರ್ಶಿ ಜಿ.ಎನ್. ರವಿಕುಮಾರ್, ಹಿರಿಯ ಶಿಕ್ಷಕ ಯು. ಚಂದ್ರಪ್ಪ, ಬಿ.ಎಸ್. ಮರುಳಸಿದ್ದಯ್ಯ ಇದ್ದರು.
ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಸಿ. ಅಮೃತ ಮತ್ತು ಸಂಗಡಿಗರು ಪ್ರಾರ್ಥಿಸಿದರು. ನಂದಿನಿ ಸ್ವಾಗತಿಸಿದರು. ಯು. ಜಯಕಿರಣ ವಂದಿಸಿದರು. ಪೂರ್ಣಿಮಾ ನಿರೂಪಿಸಿದರು.