ನಗರಾಭಿವೃದ್ಧಿ ಇಲಾಖೆ, ಪೌರಾಡಳಿತ ನಿರ್ದೇಶನಾಲಯ ನಿಯಮಾನುಸಾರ ಸ್ವಯಂಘೋಷಿತ ಆಸ್ತಿ ತೆರಿಗೆ ಪ್ರತಿ ೩ ವರ್ಷಗಳಿ ಗೊಮ್ಮೆ ಶೇ.೧೫ರಿಂದ ಶೇ.೩೦ರ ಮಿತಿಯೊಳಗೆ ಹೆಚ್ಚಿಸಲು ಈ ಹಿಂದೆ ಅವಕಾಶವಿತ್ತು. ಆದರೆ,ಸರ್ಕಾರ ಮನೆ,ಖಾಲಿ ನಿವೇಶ ನ,ವಾಣಿಜ್ಯ ಹಾಗೂ ಇತರ ತೆರಿಗೆಯನ್ನು ಬಡಾವಣೆಗಳ ಪ್ರಗತಿ, ಮಾರುಕಟ್ಟೆ ಮೌಲ್ಯ ಆಧರಿಸಿ ಪ್ರತಿ ವರ್ಷ ದರ ನಿಗದಿಪಡಿಸ ಲು ಆದೇಶಿಸಿದ ನಂತರ ತೆರಿಗೆ ಪಾವತಿಯ ಮೊತ್ತ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ.