ತರಾಸು ರಂಗಮAದಿರ ನವೀಕರಣ ಅಂತಿಮ ಹಂತಕ್ಕೆ

ನೂತನ ವಿನ್ಯಾಸದೊಂದಿಗೆ ಆಕರ್ಷಿಸಲು ಸಜ್ಜಾಗುತ್ತಿರುವ ಚಿತ್ರದುರ್ಗದ ತರಾಸು ರಂಗಮAದಿರದ ಕಾಮಗಾರಿಗಳನ್ನು ಬುಧವಾರ ಟಿ.ವೆಂಕಟೇಶ್ ಪರಿಶೀಲಿಸಿದರು. ಬಿ.ಟಿ.ಕುಮಾರಸ್ವಾಮಿ, ಎಂ.ಜೆ.ಮಹೇಶ್, ಡಾ.ಬಿ.ಎಂ.ಗುರುನಾಥ್, ಬಿ.ಎಸ್.ಹರೀಶ್‌ಕುಮಾರ್ ಇತರರಿದ್ದರು.
ನೂತನ ವಿನ್ಯಾಸದೊಂದಿಗೆ ಆಕರ್ಷಿಸಲು ಸಜ್ಜಾಗುತ್ತಿರುವ ಚಿತ್ರದುರ್ಗದ ತರಾಸು ರಂಗಮAದಿರದ ಕಾಮಗಾರಿಗಳನ್ನು ಬುಧವಾರ ಟಿ.ವೆಂಕಟೇಶ್ ಪರಿಶೀಲಿಸಿದರು. ಬಿ.ಟಿ.ಕುಮಾರಸ್ವಾಮಿ, ಎಂ.ಜೆ.ಮಹೇಶ್, ಡಾ.ಬಿ.ಎಂ.ಗುರುನಾಥ್, ಬಿ.ಎಸ್.ಹರೀಶ್‌ಕುಮಾರ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಆಧುನಿಕ ಶೈಲಿಯೊಂದಿಗೆ ಹೊಸ ವಿನ್ಯಾಸ
  • ಕಾಮಗಾರಿ ವೀಕ್ಷಿಸಿದ ಡಿಸಿ ವೆಂಕಟೇಶ್
  • ನಿರ್ಮಿತಿ ಕೇಂದ್ರ
ಚಿತ್ರದುರ್ಗ: ನಗರದ ತರಾಸು ರಂಗಮAದಿರದ ನವೀಕರಣ ಕಾಮಗಾರಿಗಳು ಅಂತಿಮ ಹಂತ ತಲುಪಿದ್ದು, ಜಿ¯್ಲÁಽಕಾರಿ ಟಿ.ವೆಂಕಟೇಶ್ ಬುಧವಾರ ಭೇಟಿ ನೀಡಿ ಪರಿಶೀಲಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ರಂಗಮAದಿರ ತೀರಾ ಹದಗೆಟ್ಟಿತ್ತು. ಹೀಗಾಗಿ ಸಾರ್ವಜನಿಕರ ಬಳಕೆ ನಿಲ್ಲಿಸಿ, ನವೀ ಕರಣ ಕಾಮಗಾರಿ ಕೈಗೆತ್ತಿಕೊಂಡು ಸುಸಜ್ಜಿತವಾಗಿ ನಿರ್ಮಿಸುವ ಉದ್ದೇಶದಿಂದ ನಿರ್ಮಿತಿ ಕೇಂದ್ರಕ್ಕೆ ವಹಿಸಲಾಗಿತ್ತು ಎಂದು ತಿಳಿ ಸಿದರು.
ಪಿವಿಆರ್ ಮಾದರಿಯಲ್ಲಿ ಅತ್ಯಾಧುನಿಕ ಸೌಂಡ್ ಮತ್ತು ಲೈಟಿಂU್ಸï ಹೊಂದಿರುವ ಅಕಾಸ್ಟಿಕ್ ಥಿಯೇಟರ್ ಆಗಿ ಪರಿವರ್ತಿಸಲಾ ಗಿದೆ. ಬೆಂಗಳೂರಿನ ಬ್ರಿP್ಸï ವಾಲ್ ಎಂಬ ಸಂಸ್ಥೆಯ ತಾಂತ್ರಿಕ ನೆರವಿನೊಂದಿಗೆ ಸುಸಜ್ಜಿತ ಒಳಾಂಗಣ ವಿನ್ಯಾಸ ಮಾಡ ಲಾಗಿದೆ. ಹೊರಭಾಗದಲ್ಲಿ ನಾಮ-Àಲಕ, ಪ್ಲಾಂಟೇಶನ್ ಕೆಲಸ ಬಾಕಿ ಉಳಿದಿವೆ ಎಂದರು.
ಡಿಎAಎ-ï ನಿಽಯಿಂದ ೨.೫ ಕೋಟಿ ರೂ. ವೆಚ್ಚದಲ್ಲಿ ಒಳಾಂಗಣ, ಹೊರಾಂಗಣದ ಸಿವಿಲ್ ಸ್ಟçಕ್ಚರ್, ಪೇವರ್ಸ್, ಚಾವಣಿ ಸೇರಿ ಸಂಪೂರ್ಣ ದುರಸ್ತಿ ಮಾಡಲಾಗಿದೆ ಎಂದು ವಿವರಿಸಿದರು. ತರಾಸು ಕಾದಂಬರಿಗಳ ಹೆಸರುಗಳ ಪ್ರದರ್ಶನ: ಜಿ¯್ಲೆಯ ಹೆಮ್ಮೆಯ ಬರಹಗಾರ ತರಾಸು ಸ್ಮರಣಾರ್ಥ ರಂಗಮAದಿರ ನಿರ್ಮಾಣವಾಗಿದೆ.
ಇಂದಿನ ಪೀಳಿಗೆಗೆ ಅವರ ಕೊಡುಗೆ ಪರಿಚಯಿಸುವ ಉದ್ದೇಶದಿಂದ ಅವರ ಪ್ರಸಿದ್ಧ ಕಾದಂಬರಿಗಳಾದ ದುರ್ಗಾಸ್ತಮಾನ, ಕಂಬನಿ ಯ ಕುಯಿಲು, ರಕ್ತರಾತ್ರಿ ಸೇರಿ ಹಲವು ಕೃತಿಗಳ ಹೆಸರುಗಳನ್ನು ಒಳಾಂಗಣದಲ್ಲಿ ಪ್ರದರ್ಶಿಸಲಾಗಿದೆ ಎಂದು ಮಾಹಿತಿ ನೀಡಿ ದರು.
ಜಿ¯್ಲÁ ಉಸ್ತುವಾರಿ ಸಚಿವರು, ಶಾಸಕರು ಇದಕ್ಕೆ ಸಹಕರಿಸಿದ್ದಾರೆ. ಆದರೆ, ಸಚಿವರ ಅಕಾಲಿಕ ನಿಧನದಿಂದ ಜಿ¯್ಲÉಯ ಶಾಸಕ ರೊಟ್ಟಿಗೆ ಚರ್ಚಿಸಿ, ಸೂಕ್ತ ಸಮಯ ನಿಗದಿಪಡಿಸಿ ರಂಗಮAದಿರ ಉದ್ಘಾಟಿಸಿ ಸಾರ್ವಜನಿಕರ ಬಳಕೆಗೆ ಅನುವು ಮಾಡಿಕೊಡಲಾ ಗುವುದು ಎಂದು ಡಿಸಿ ತಿಳಿಸಿದರು.
ಎಡಿಸಿ ಬಿ.ಟಿ. ಕುಮಾರಸ್ವಾಮಿ, ಗಣಿ ಮತ್ತು ಭೂ ವಿe್ಞÁನ ಇಲಾಖೆ ಉಪನಿರ್ದೇಶಕ ಎಂ.ಜೆ. ಮಹೇಶ್, ಕನ್ನಡ ಮತ್ತು ಸಂಸ್ಕೃ ತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ಎಂ. ಗುರುನಾಥ್, ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಬಿ.ಎಸ್. ಹರೀಶ್‌ ಕುಮಾರ್ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net