ತಾಲೂಕನ್ನು ಭದ್ರಾ ಮೇಲ್ದಂಡೆ ಯೋಜನೆಯಡಿ ಸಮಗ್ರ ನೀರಾವರಿಗೆ ಒಳಪಡಿಸಬೇಕು ಎಂದು ಆಗ್ರಹಿಸಿ ರೈತ ಸಂಘದ ಪದಾಧಿಕಾರಿಗಳು ಹೊಳಲ್ಕೆರೆಯಲ್ಲಿ ಗುರುವರ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು. ಈಚಘಟ್ಟದ ಸಿದ್ದವೀರಪ್ಪ, ರಂಗಸ್ವಾಮಿ, ಶ್ರೀನಿವಾಸ್ ಎಮ್ಮಿಗನೂರು, ಚಂದ್ರಮೌಳಿ, ಪ್ರಸನ್ನ ಕುಮಾರ್, ತಿಮ್ಮಣ್ಣ, ತಾಳಿಕಟ್ಟೆ ಕುಮಾರ್, ಬಿದರೆಕೆರೆ ಜಯಣ್ಣ, ಮಲ್ಲಣ್ಣ ಇನ್ನಿತರರು ಇದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಈಚಘಟ್ಟದ ಸಿದ್ದವೀರಪ್ಪ ತೀವ್ರ ಅಸಮಾಧಾನ
ರಾಮಗಿರಿ ಹೋಬಳಿಯಲ್ಲಿ ರೈತ ಸಂಘದಿಂದ ಜಾಥಾ
ಹೊಳಲ್ಕೆರೆ: ಹಲವು ದಶಕಗಳ ರೈತರ ಹೋರಾಟದ ಫಲವಾಗಿ ಭದ್ರಾ ನೀರು ಚಿತ್ರದುರ್ಗ ಜಿಲ್ಲೆಗೆ ಹರಿದು ಬರುತ್ತಿದೆ. ಆದರೆ, ಹೊಳಲ್ಕೆರೆ ತಾಲೂಕು ಸಮಗ್ರ ನೀರಾವರಿಯಿಂದ ಕೈಬಿಟ್ಟುಹೋಗಿರುವುದರ ಬಗ್ಗೆ ಇಲ್ಲಿನ ಜನಪ್ರತಿನಿಧಿಗಳಿಗೆ ಕಿಂಚಿತ್ತೂ ಜವಾಬ್ದಾರಿ ಇಲ್ಲವಾಗಿದೆ ಎಂದು ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಈಚಘಟ್ಟದ ಸಿದ್ದವೀರಪ್ಪ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯ ರೈತ ಸಂಘದ ಪದಾಧಿಕಾರಿಗಳು ಗುರುವಾರ ರಾಮಗಿರಿ ಹೋಬಳಿಯ ಗ್ರಾಮಗಳಲ್ಲಿ ಆಯೋಜಿಸಿದ್ದ aÜವನ್ನುದ್ದೇಶಿಸಿ ಮಾತನಾಡಿದರು.
ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಪ್ರತಿ ರೈತನ ಜಮೀನಿಗೆ ನೀರುಣಿಸುವ ಕೆಲಸ ಮಾಡಲಾಗುತ್ತಿದೆ. ಆದರೆ, ಹೊಳಲ್ಕೆರೆ ತಾಲೂಕು ಇದರಿಂದ ಬಿಟ್ಟು ಹೋಗಿದೆ. ಈ ಬಗ್ಗೆ ಯಾವುದೇ ಪಕ್ಷದ ರಾಜಕಾರಣಿಗಳು ಚಕಾರವೆತ್ತಿಲ್ಲ. ಇದು ತಾಲೂಕಿನ ರೈತಾಪಿ ವರ್ಗಕ್ಕೆ ಮಾಡಿದ ಘೋರ ಅನ್ಯಾಯ ಎಂದು ಹೇಳಿದರು.
ಬರಗಾಲ ಅನುಭವಿಸುತ್ತಿರುವ ನಮ್ಮ ಭಾಗದ ರೈತರು ಅಡಿಕೆ ತೋಟಗಳನ್ನು ಉಳಿಸಿಕೊಳ್ಳಲು ಟ್ಯಾಂಕರ್ ನೀರಿನ ಮೊರೆ ಹೋಗಿದ್ದಾರೆ. ಅದಾಗ್ಯೂ ಕೆಲವು ರೈತರ ತೋಟಗಳು ಒಣಗಿವೆ. ಪರಿಸ್ಥಿತಿ ಹೀಗಿದ್ದರೂ ನಮ್ಮ ತಾಲೂಕು ಸಮಗ್ರ ನೀರಾವರಿ ಯೋಜನೆಯಿಂದ ಹೊರಗೆ ಉಳಿದಿದೆ ಎಂದು ಕಳವಳ ವ್ಯಕ್ತಪಡಿಸಿದರು.
ರಾಜ್ಯ ರೈತ ಸಂಘದ ತಾಲೂಕು ಅಧ್ಯಕ್ಷ ರಂಗಸ್ವಾಮಿ ಮಾತನಾಡಿ, ಹೊಳಲ್ಕೆರೆ ತಾಲ್ಲೂಕಿಗೆ ಸರ್ಕಾರ ಮೋಸ ಮಾಡಿದೆ. ಯೋಜನೆಯಡಿ ಸಮಗ್ರ ನೀರಾವರಿಗೆ ನಮ್ಮ ತಾಲೂಕನ್ನು ಒಳಪಡಿಸಬೇಕು. ಇಲ್ಲವಾದರೆ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದರು.
ನಂತರ ರೈತ ಸಂಘದ ಪದಾಧಿಕಾರಿಗಳು ತಾಲೂಕು ಕಚೇರಿಗೆ ತೆರಳಿ ತಹಸೀಲ್ದಾರ್ ಮೂಲಕ ಜಲಸಂಪನ್ಮೂಲ ಸಚಿವರಿಗೆ ಮನವಿ ಸಲ್ಲಿಸಿದರು. ರೈತ ಸಂಘದ ತಾಲೂಕು ಘಟಕದ ಪದಾಧಿಕಾರಿಗಳಾದ ಶ್ರೀನಿವಾಸ್ ಎಮ್ಮಿಗನೂರು, ಚಂದ್ರಮೌಳಿ, ಪ್ರಸನ್ನ ಕುಮಾರ್, ತಿಮ್ಮಣ್ಣ, ತಾಳಿಕಟ್ಟೆ ಕುಮಾರ್, ಬಿದರೆಕೆರೆ ಜಯಣ್ಣ, ಮಲ್ಲಣ್ಣ ಇನ್ನಿತರರು ಭಾಗವಹಿಸಿದ್ದರು.