ಪ್ರತಿಭೆಯ ಅನಾವರಣ ಬೇಕು ಅವಕಾಶ

ಚಿತ್ರದುರ್ಗ ಡಯಟ್‌ನಲ್ಲಿ ಆಯೋಜಿಸಿದ್ದ ವಿಜ್ಞಾನ ವಸ್ತುಪ್ರದರ್ಶನದ ಗುಂಪು ವಿಭಾಗ ಸ್ಪರ್ಧೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ಆದರ್ಶಿನಿ ಮತ್ತು ಹೇಮಂತ್ ಮಾಸಣಗಿ ಅವರಿಗೆ ಉಪ ಪ್ರಾಚರ‍್ಯ ಎಸ್.ನಾಗಭೂಷಣ್ ಪ್ರಶಸ್ತಿಪತ್ರ ವಿತರಿಸಿದರು. ಶಿವಲೀಲಾ, ಎಸ್.ಬಸವರಾಜು, ಶಿಕ್ಷಕಿ ಅನ್ನಪೂರ್ಣ ಇದ್ದರು.
ಚಿತ್ರದುರ್ಗ ಡಯಟ್‌ನಲ್ಲಿ ಆಯೋಜಿಸಿದ್ದ ವಿಜ್ಞಾನ ವಸ್ತುಪ್ರದರ್ಶನದ ಗುಂಪು ವಿಭಾಗ ಸ್ಪರ್ಧೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ಆದರ್ಶಿನಿ ಮತ್ತು ಹೇಮಂತ್ ಮಾಸಣಗಿ ಅವರಿಗೆ ಉಪ ಪ್ರಾಚರ‍್ಯ ಎಸ್.ನಾಗಭೂಷಣ್ ಪ್ರಶಸ್ತಿಪತ್ರ ವಿತರಿಸಿದರು. ಶಿವಲೀಲಾ, ಎಸ್.ಬಸವರಾಜು, ಶಿಕ್ಷಕಿ ಅನ್ನಪೂರ್ಣ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಡಯಟ್ ಪ್ರಾಚರ‍್ಯ ಹೇಳಿಕೆ
  • ವಿಜ್ಞಾನ ವಸ್ತು ಪ್ರದರ್ಶನ
  • ಭಾರತಕ್ಕೆ ಇದೆ ವಿಶ್ವ ಮಾನ್ಯತೆ
ಚಿತ್ರದುರ್ಗ:ವಿದ್ಯಾರ್ಥಿಗಳಲ್ಲಿ ಶಾಲಾ ಹಂತದಿAದಲೇ ಅನ್ವೇಷಣೆ, ವೈಜ್ಞಾನಿಕ ಮನೋಭಾವನೆ ಬೆಳೆಸುವಂತೆ ಡಯಟ್ ಪ್ರಾಚರ‍್ಯ ಎಂ.ನಾಸಿರುದ್ದೀನ್ ಶಿಕ್ಷಕರಿಗೆ ಸಲಹೆ ನೀಡಿದರು.
ಉರ್ದು ಮತ್ತು ಇತರೆ ಭಾಷಾ ಅಲ್ಪಸಂಖ್ಯಾತರ ನಿರ್ದೇಶನಾಲಯ, ಬೆಂಗಳೂರು ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ವಸ್ತು ಸಂಗ್ರಹಾಲಯ ಸಹಯೋಗದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ನಗರದ ಡಯಟ್‌ನಲ್ಲಿ ಗುರುವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ವಿಜ್ಞಾನ ವಸ್ತುಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿ ಮಗುವಿನಲ್ಲಿ ಪ್ರತಿಭೆಯಿರುತ್ತದೆ. ಮಕ್ಕಳಿಗೆ ಪಠ್ಯ, ಸಹಪಠ್ಯ ಚಟುವಟಿಕೆಗಳಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಿದಾಗ ಅವರ ಪ್ರತಿಭೆ ಅನಾವರಣ ಸಾಧ್ಯವಾಗಲಿದೆ. ಸ್ಪರ್ಧಾತ್ಮಕ ಜಗತ್ತಿಗೆ ಮಕ್ಕಳನ್ನು ಸಿದ್ಧಗೊಳಿಸುವಲ್ಲಿ ಶಿಕ್ಷಕರ ಪಾತ್ರ ಮುಖ್ಯವಾಗಿದೆ ಎಂದರು.
ಉಪ ಪ್ರಾಚರ‍್ಯ ಎಸ್.ನಾಗಭೂಷಣ್ ಮಾತನಾಡಿ, ಪ್ರಸ್ತುತ ಸಂದರ್ಭದಲ್ಲಿ ವೈಜ್ಞಾನಿಕ ಮತ್ತು ತಾಂತ್ರಿಕವಾಗಿ ಭಾರತ ಪ್ರಗತಿ ಸಾಽಸಿ ದ್ದು ವಿಶ್ವಮಾನ್ಯತೆ ಪಡೆದಿದೆ. ಆತ್ಮವಿಶ್ವಾಸ, ಏಕಾಗ್ರತೆ, ಪರಿಶ್ರಮದಿಂದ ಕೆಲಸ ಮಾಡಿದಾಗ ನಾವು ಯಶಸ್ಸು ಪಡೆಯ ಬಹುದು. ವಿದ್ಯಾರ್ಥಿಗಳು ರಾಜ್ಯ ಹಂತದ ಸ್ಪರ್ಧೆಯಲ್ಲಿ ಉತ್ತಮ ಪ್ರದರ್ಶನ ನೀಡಿ ಯಶಸ್ಸು ಪಡೆಯಬೇಕು ಎಂದು ತಿಳಿಸಿದರು.
ನೋಡಲ್ ಅಽಕಾರಿ ಶಿವಲೀಲಾ, ಉಪನ್ಯಾಸಕ ಎಸ್.ಬಸವರಾಜು, ತೀರ್ಪುಗಾರರಾದ ದಾಸೇಗೌಡ, ವೆಂಕಟಶಿವನರೆಡ್ಡಿ, ಜಯಚಿತ್ರ, ವೇಣು ಇದ್ದರು.
ವಿಜೇತ ವಿದ್ಯಾರ್ಥಿಗಳ ವಿವರ
ವೈಯಕ್ತಿಕ ವಿಭಾಗ: ಚಿತ್ರದುರ್ಗ ತಾಲೂಕು ಭರಮಸಾಗರ ಸ.ಪ್ರೌ.ಶಾಲೆ ಶ್ರೇಯಸ್ ಧನಿಕ್(ಪ್ರ), ಚಳ್ಳಕೆರೆ ಮಹಾತ್ಮಗಾಂಽ ಆಂಗ್ಲ ಮಾಧ್ಯಮ ಪ್ರೌ. ಶಾಲೆಯ ದಿಯಾ ಎಂ.ಗAಧವಿದಿ(ದ್ವಿ), ಹೊಸದುರ್ಗ ತಾಲೂಕು ಕಂಗುವಳ್ಳಿ ಸ.ಪ್ರೌ.ಶಾಲೆಯ ಎಂ.ಹರೀಶ್(ತÊ).
ಗುAಪು ವಿಭಾಗ: ಚಿತ್ರದುರ್ಗ ತಾಲೂಕು ಸಿರಿಗೆರೆ ಬಿ.ಎಲ್.ಆರ್.ಪ್ರೌ.ಶಾಲೆಯ ವಿ.ಕೆ.ಆದರ್ಶಿನಿ, ಹೇಮಂತ್ ಮಾಸಣಗಿ(ಪ್ರ), ಹಿರಿಯೂರು ತಾ ಲೂಕು ಅಂಬಲಗೆರೆ ಸ.ಪ್ರೌ.ಶಾಲೆಯ ಎನ್.ವಿನಯ್‌ಕುಮಾರ್, ಎಸ್.ಪ್ರೀತಮ್(ದ್ವಿ), ಚಳ್ಳಕೆರೆ ಚಿನ್ಮಯಿ ಪಬ್ಲಿಕ್ ಪ್ರೌ. ಶಾಲೆಯ ಸೋನಮ್, ಎಸ್. ಹರಿಪ್ರಿಯಾ (ತÊ)ಸ್ಥಾನ ಪಡೆದಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net