ಹಣ ಪಾವತಿ ತಡೆಗೆ ಕ್ರಮವಹಿಸಿ

 ಚಿತ್ರದುರ್ಗದಲ್ಲಿ ಶುಕ್ರವಾರ ಗ್ಯಾರಂಟಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಆರ್.ಶಿವಣ್ಣ, ಡಿ.ಎನ್.ಮೈಲಾರಪ್ಪ, ಖಾದಿರಮೇಶ್,ನಿರಂಜನ್, ಎಚ್.ಟಿ.ಹನುಮಂತಪ್ಪ, ಅಬ್ದುಲ್‌ಶಾವಲಿ, ಪ್ರಕಾಶ್, ಮಧುಪಾಲೇಗೌಡ, ಕೃಷ್ಣಮೂರ್ತಿ, ಇಂದಿರಾ, ಜಿಪಂ ಸಿಪಿಒ ಸಿ.ಎಸ್.ಗಾಯತ್ರಿ, ಯೋಜನಾ ನಿರ್ದೇಶಕಿ ಜಯಲಕ್ಷಿ÷್ಮÃ ಇದ್ದರು.
ಚಿತ್ರದುರ್ಗದಲ್ಲಿ ಶುಕ್ರವಾರ ಗ್ಯಾರಂಟಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಆರ್.ಶಿವಣ್ಣ, ಡಿ.ಎನ್.ಮೈಲಾರಪ್ಪ, ಖಾದಿರಮೇಶ್,ನಿರಂಜನ್, ಎಚ್.ಟಿ.ಹನುಮಂತಪ್ಪ, ಅಬ್ದುಲ್‌ಶಾವಲಿ, ಪ್ರಕಾಶ್, ಮಧುಪಾಲೇಗೌಡ, ಕೃಷ್ಣಮೂರ್ತಿ, ಇಂದಿರಾ, ಜಿಪಂ ಸಿಪಿಒ ಸಿ.ಎಸ್.ಗಾಯತ್ರಿ, ಯೋಜನಾ ನಿರ್ದೇಶಕಿ ಜಯಲಕ್ಷಿ÷್ಮÃ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಪರಿಶೀಲನಾ ಸಭೆಯಲ್ಲಿ ಅಽಕಾರಿಗಳಿಗೆ ಸೂಚನೆ
  • ಸಂಭ್ರಮದ ಮಹಿಳಾ ದಿನಾಚರಣೆಗೆ ನಿರ್ದೇಶನ
  • ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ
ಚಿತ್ರದುರ್ಗ : ಗÊಹಲಕ್ಷಿ÷್ಮÃ ಯೋಜನೆ -Àಲಾನುಭವಿ ಮೃತಪಟ್ಟರೆ ಅವರ ಹೆಸರಲ್ಲಿ ಹಣ ಪಾವತಿ ಆಗುವುದನ್ನು ತಕ್ಷಣ ತಡೆಯಬೇಕೆಂದು ಜಿಲ್ಲಾ ಗ್ಯಾ ರಂಟಿ ಯೋಜನೆ ಅನುಷ್ಠಾನ ಪ್ರಾಽಕಾರದ ಅಧ್ಯಕ್ಷ ಆರ್.ಶಿವಣ್ಣ ಅಽಕಾರಿಗಳಿಗೆ ಸೂಚಿಸಿದರು.
ಜಿಪಂನಲ್ಲಿ ಶುಕ್ರವಾರ ಪಂಚ ಗ್ಯಾರಂಟಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಮರಣ ಹೊಂದಿದ -Àಲಾನುಭವಿ ವಿವರ ಪತ್ತೆಗೆ ಅಂಗನವಾಡಿ ಕಾರ್ಯಕರ್ತೆಯರ ನೆರವು ಪಡೆಯಬೇಕು. ಮೃತರ ಪ್ರಮಾಣ ಪತ್ರಗಳೊಂದಿಗೆ ವರದಿ ಸಲ್ಲಿಸಿ ಹಣ ಪಾವತಿ ತಡೆ ಹಿಡಿಯಬೇಕು ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ವಿಜಯಕುಮಾರ್ ಮಾತನಾಡಿ, ಗೃಹಲಕ್ಷಿ÷್ಮÃ ಯೋಜನೆಯಡಿ ಜಿಲ್ಲೆಯಲ್ಲಿ ೩,೯೮,೬೬೭ ಮಹಿಳೆಯರು ನೋಂದಾಯಿಸಿದ್ದು, ಇವರಲ್ಲಿ ೩,೮೬,೭೭೦ ಮಹಿಳೆಯರಿಗೆ ಹಣ ತಲುಪಿದೆ. ಮÊತರ ಹೆಸರಲ್ಲಿ ಹಣ ವರ್ಗಾವಣೆ ತಡೆಯಲು ಇ-ಗವರ್ನೆನ್ಸ್ ಅಂಕಿ-ಅAಶಗಳನ್ನು ಆಧರಿಸಿ ಕ್ರಮವಹಿಸಲಾಗಿದೆ.
ಯೋಜನೆ ಆರಂಭದಿAದ ಇಲ್ಲಿಯವರೆಗೂ ಮೃತ ೮೮೪೩ ಮಹಿಳೆಯರ ಹೆಸರನ್ನು ಪಟ್ಟಿಯಿಂದ ಕೈಬಿಡುವ ಪ್ರಕ್ರಿಯೆ ಆರಂಭವಾಗಿದ್ದು, ಮರಣ ಪ್ರಮಾಣಪತ್ರ ಪರಿಶೀಲನೆ ೧೫ ದಿನಗಳಲ್ಲಿ ಪೂರ್ಣಗೊಳ್ಳಲಿದೆ ಎಂದರು.
ಅನ್ನಭಾಗ್ಯ ಅಕ್ಕಿ ಮಾರಾಟ ದಂಧೆ ನಡೆಯುತ್ತಿದೆ ಎಂದು ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರು ಆಕ್ರೋಶ ವ್ಯಕ್ತ ಪಡಿಸಿದರು. ಆಟೋಗಳಲ್ಲಿ ಕೆ.ಜಿ. ಅಕ್ಕಿಗೆ ೧೦ ರೂ.ಬಹಿರಂಗವಾಗಿ ವ್ಯಾಪಾರ ಮಾಡಲಾಗುತ್ತಿದೆ. ಮಾಹಿತಿ ಇದ್ದರೂ ಕ್ರಮ ವಹಿಸಿಲ್ಲವೆಂದು ಅಽಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಬಿಪಿಎಲ್ ಕಾರ್ಡ್ ಹೊಂದಿರುವ ಅನರ್ಹರಿಂದ ಬಡವರಿಗೆ ಅನ್ಯಾಯವಾಗುತ್ತಿದೆ. ಪ್ರತಿ ನ್ಯಾಯಬೆಲೆ ಅಂಗಡಿ ಮುಂದೆ ಅನ್ನಭಾಗ್ಯ ಮತ್ತು ಗ್ಯಾರಂಟಿ ಯೋಜನೆಗಳ ಮಾಹಿತಿ ಫಲಕಗಳನ್ನು ಕಡ್ಡಾಯ ಅಳವಡಿಸಬೇಕು ಎಂದು ಸದಸ್ಯರು ಹೇಳಿದರು.
ಅಂತಾರಾಷ್ಟಿçÃಯ ಮಹಿಳಾ ದಿನಾಚರಣೆ ಅಂಗವಾಗಿ ಗೃಹಲಕ್ಷಿ÷್ಮÃ, ಶಕ್ತಿ ಯೋಜನೆ ಫಲಾನುಭವಿಗಳನ್ನು ಒಗ್ಗೂಡಿಸಿ ಅರ್ಥಪೂರ್ಣ ಕಾರ್ಯಕ್ರಮ ಆಯೋಜಿಸಬೇಕೆಂದು ಶಿವಣ್ಣ ಸೂಚಿಸಿದರು. ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಽಕಾರದ ಉಪಾಧ್ಯಕ್ಷ ಡಿ.ಎನ್.ಮೈಲಾರಪ್ಪ, ಖಾದಿರಮೇಶ್, ನಿರಂಜನ್, ಎಚ್.ಟಿ.ಹನುಮಂತಪ್ಪ, ಅಬ್ದುಲ್ ಶಾವಲಿ, ಪ್ರಕಾಶ್, ಮಧು ಪಾಲೇಗೌಡ, ಕೃಷ್ಣಮೂರ್ತಿ, ಇಂದಿರಾ, ಜಿಪಂ ಸಿಪಿಒ ಸಿ.ಎಸ್.ಗಾಯತ್ರಿ, ಯೋಜನಾ ನಿರ್ದೇಶಕಿ ಜಯಲಕ್ಷಿ÷್ಮà ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net