ರೈತರಿಂದ ೯ರಂದು ಸುವರ್ಣ ಸೌಧ ಚಲೋ

ಚಿತ್ರದುರ್ಗ ರಾಜ್ಯರೈತ ಸಂಘ ವಾಸುದೇವ ಮೇಟಿ ಬಣದ ಜಿಲ್ಲಾಧ್ಯಕ್ಷ ಇ.ಎನ್.ಲಕ್ಷಿ÷್ಮÃ್ಮಕಾಂತ ಲಿಂಗಾವರ ಹಟ್ಟಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಚಿತ್ರದುರ್ಗ ರಾಜ್ಯರೈತ ಸಂಘ ವಾಸುದೇವ ಮೇಟಿ ಬಣದ ಜಿಲ್ಲಾಧ್ಯಕ್ಷ ಇ.ಎನ್.ಲಕ್ಷಿ÷್ಮÃ್ಮಕಾಂತ ಲಿಂಗಾವರ ಹಟ್ಟಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
Published on

ಪ್ರಮುಖ ಮುಖ್ಯಾಂಶಗಳು

  • ಬೆಳಗಾವಿ ಸುವರ್ಣ ಸೌಧ ಚಲೋ
  • ಬೆಳೆ ಹಾನಿ ಪರಿಹಾರ
  • ರಾಜ್ಯರೈತ ಸಂಘ
ಚಿತ್ರದುರ್ಗ: ಬೆಳೆ ಹಾನಿ ಪರಿಹಾರ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಡಿ.೯ರಂದು ಬೆಳಗಾವಿ ಸುವರ್ಣ ಸೌಧ ಚಲೋ ಹಮ್ಮಿ ಕೊಳ್ಳಲಾಗಿದೆ ಎಂದು ರಾಜ್ಯರೈತ ಸಂಘ ಹಾಗೂ ಹಸಿರುಸೇನೆ ವಾಸುದೇವ ಮೇಟಿ ಬಣದ ಜಿಲ್ಲಾಧ್ಯಕ್ಷ ಇ.ಎನ್.ಲಕ್ಷಿ÷್ಮÃ್ಮಕಾಂತ ಲಿಂಗಾವರ ಹಟ್ಟಿ ಹೇಳಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಎಲ್ಲ ಬೆಳೆಗಳ ನಷ್ಟಕ್ಕೆ ಪ್ರತಿ ಎಕರೆಗೆ ೪೦ ಸಾವಿರ ರೂ. ಕೊಡಬೇಕು. ಬೆಳೆ ವಿಮೆ ಪಾವತಿಸಿರುವ ರೈತರಿಗೆ ವಿಮೆ ಪರಿಹಾರ ಹಣ ಶೀಘ್ರ ಪಾವತಿಸಬೇಕು. ಜಿಲ್ಲಾ, ತಾಲೂಕು ಹಾಗೂ ಹೋಬಳಿ ಮಟ್ಟ ದಲ್ಲಿ ಮೆಕ್ಕೆಜೋಳ ಖರೀದಿ ಕೇಂದ್ರ ತೆರೆದು ಪ್ರತಿ ರೈತನಿಂದ ೫೦ ಕ್ವಿಂಟಾಲ್ ಮೆಕ್ಕೆಜೋಳ ಖರೀದಿಸಬೇಕು. ಗೋಮಾಳ ಅರಣ್ಯ ಭೂಮಿ, ಬಗರ್‌ಹುಕುಂ, ಸೇಂದಿವನ, ಹುಲ್ಲುಬನ್ನಿ, ಖರಾಬು, ಸಾಗುವಳಿ ಮಾಡುತ್ತಿರುವ ರೈತರಿಗೆ ಹಕ್ಕುಪತ್ರ ವಿತರಿಸಬೇಕು ಎಂದು ಒತ್ತಾಯಿಸಿದರು.
ರೈತರ ಸಂಪೂರ್ಣ ಬೆಳೆ ಸಾಲ ಮನ್ನಾ ಮಾಡಬೇಕು. ಭದ್ರಾಮೇಲ್ದಂಡೆ ಯೋಜನೆಯಿಂದ ವಂಚಿತವಾಗಿರುವ ಕೆರೆಗಳಿಗೆ ನೀರು ಹರಿಸಬೇಕು. ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿಪಡಿಸುವುದು, ಮೂರು ಕÊಷಿ ಕಾಯಿದೆಗಳನ್ನು ಸರ್ಕಾರ ಹಿಂದಕ್ಕೆ ಪಡೆಯುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸಲಾಗುವುದು ಎಂದರು.
ಸಿ.ಡಿ. ನಿಜಲಿಂಗಪ್ಪ, ನವೀನ ಆರ್.ಮದಕರಿ, ಬಿ. ವೆಂಕಟೇಶ, ಲೋಕಾಕ್ಷಮ್ಮ, ಶಿವಮೂರ್ತಿ, ನಾಗರಾಜ್, ಎಚ್.ಎನ್.ಅಂಜು, ಅರುಣ್ ಕುಮಾರ್, ವೆಂಕಟೇಶ್, ರಂಗಸ್ವಾಮಿ, ಮಲ್ಲಿಕಾರ್ಜುನ್, ಜಯಲಕ್ಷಿ÷್ಮÃ, ಶಕುಂತಲಾ, ಮಂಜುಳಾ ಕೊಳಹಾಳ್, ಕಾಂತರಾಜ್‌ಮಾಳಪ್ಪನಹಟ್ಟಿ ಸುದ್ದಿಗೋಷ್ಠಿಯಲ್ಲಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net