ಸಮಸ್ಯೆ ಬಗೆಹರಿಸದಿದ್ದರೆ ಗ್ರಾಪಂ ಸೇವೆ ಸ್ಥಗಿತ ಅನಿವಾರ್ಯ

ಆರ್.ಪಾತಣ್ಣ
ಆರ್.ಪಾತಣ್ಣ
Published on

ಪ್ರಮುಖ ಮುಖ್ಯಾಂಶಗಳು

  • ಹಣಕಾಸು ಆಯೋಗದ ಅನುದಾನ ಕೊರತೆ,
  • ಇ-ಸ್ವತ್ತು ತಂತ್ರಾAಶದಲ್ಲಿ ತೊಡಕು
  • ಪಿಡಿಒಗಳ ಕ್ಷೇಮಾಭಿವೃದ್ಧಿ ಸಂಘ ಅಸಮಾಧಾನ
ಚಿತ್ರದುರ್ಗ: ಹದಿನೈದನೇ ಹಣಕಾಸು ಆಯೋಗದ ಅನುದಾನ ಬಿಡುಗಡೆ ವಿಳಂಬ ಹಾಗೂ ಇ-ಸ್ವತ್ತು ೨.೦ ತಂತ್ರಾAಶ ತಾಂತ್ರಿಕ ಸಮಸ್ಯೆಯಿಂದ ರಾಜ್ಯದ ಗ್ರಾಪಂಗಳ ಕಾರ್ಯನಿರ್ವಹಣೆ ತೀವ್ರ ಸಂಕಷ್ಟಕ್ಕೆ ಸಿಲುಕಿದೆ ಎಂದು ರಾಜ್ಯ ಪಂಚಾಯತ್ ಅಭಿವÊದ್ಧಿ ಅಽಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಆರ್. ಪಾತಣ್ಣ ಕಳವಳ ವ್ಯಕ್ತಪಡಿದ್ದಾರೆ.
೨೦೨೪-೨೫ ಹಾಗೂ ೨೦೨೫-೨೬ನೇ ಸಾಲಿನ ೧೫ನೇ ಹಣಕಾಸು ಆಯೋಗದ ಅನುದಾನ ಸಮರ್ಪಕವಾಗಿ ಬಿಡುಗಡೆ ಆಗದೆ ಗ್ರಾಪಂಗಳು ಆರ್ಥಿಕ ಸಂಕಷ್ಟ ಎದುರಿಸುತ್ತಿವೆ. ಹೀಗಾಗಿ ಕುಡಿವ ನೀರು, ನೈರ್ಮಲ್ಯ, ಬೀದಿ ದೀಪ ನಿರ್ವಹಣೆ, ಸ್ವಚ್ಛತಾ ಸಿಬ್ಬಂದಿ ವೇತನ, ಕಚೇರಿ ನಿರ್ವಹಣೆ ಸೇರಿ ಮೂಲ ಸೇವೆಗಳ ನಿರ್ವಹಣೆ ಕಷ್ಟವಾಗಿದೆ.
ತೆರಿಗೆ ಸಂಗ್ರಹ ಕಡಿಮೆ ಇರುವ ಗ್ರಾಪಂಗಳು ಹಲವು ತಿಂಗಳಿAದ ಸಾಲ ಪಡೆದು ಸಾರ್ವಜನಿಕ ಸೇವೆ ಮುಂದುವರಿಸುವ ಅನಿವಾರ್ಯತೆಗೆ ಸಿಲುಕಿವೆ.
ಇ-ಸ್ವತ್ತು ೨.೦ ತಂತ್ರಾAಶ ಜಾರಿ ನಂತರ ರಾಜ್ಯಾದ್ಯಂತ ಹಲವು ತಾಂತ್ರಿಕ ಸಮಸ್ಯೆಗಳು ಮುಂದುವರಿದಿದೆ. ೧೧ಬಿ, ಮೇಲಽ ಕಾರಿಗಳ ಲಾಗಿನ್, ಹೊಸ ಅರ್ಜಿ ಅನುಮೋದನೆ ಹಾಗೂ ದಾಖಲೆ ತಿದ್ದುಪಡಿ ಸೇರಿ ಹಲವು ಪ್ರಕ್ರಿಯೆಗಳು ವಿಳಂಬವಾಗುತ್ತಿವೆ.
ಇದರಿಂದ ಸಾರ್ವಜನಿಕರಿಗೆ ಸಮಯಕ್ಕೆ ಸರಿಯಾಗಿ ಸೇವೆ ನೀಡಲು ಸಾಧ್ಯವಾಗುತ್ತಿಲ್ಲ. ತಾಂತ್ರಿಕ ದೋಷ, ಅನುದಾನ ಕೊರತೆ ಯಿಂದ ಸಮಸ್ಯೆಗಳಾಗುತ್ತಿದ್ದರೂ, ಅದರ ಹೊಣೆ ಪಿಡಿಒಗಳ ಮೇಲೆ ಹಾಕುವ ಕ್ರಮ ಸರಿಯಲ್ಲ ಎಂದು ಹೇಳಿದ್ದಾರೆ. ೧೦ ದಿನ ದೊಳಗೆ ಬಾಕಿ ಅನುದಾನ ಬಿಡುಗಡೆ ಮಾಡಬೇಕು. ಇ-ಸ್ವತ್ತು ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳದಿದ್ದರೆ ರಾಜ್ಯದಾದ್ಯಂತ
ಗ್ರಾಪಂಗಳ ಸೇವೆ ಸ್ಥಗಿತಗೊಳಿಸುವುದು ಅನಿವಾರ್ಯವಾಗಲಿದೆ. ಇದರ ನೇರ ಹೊಣೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಮತ್ತು ರಾಜ್ಯ ಸರ್ಕಾರದ್ದಾಗಲಿದೆ. ಎಂದು ಪಾತಣ್ಣ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net