ಮಕ್ಕಳ ಕ್ರಿಯಾಶೀಲ ವ್ಯಕ್ತಿತ್ವ ವಿಕಸನಕ್ಕೆ ಬೇಸಿಗೆ ಶಿಬಿರ ಸಹಕಾರಿ
ಚಿತ್ರದುರ್ಗದಲ್ಲಿ ಈಚೆಗೆ ಏರ್ಪಡಿಸಿದ್ದ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಜೆ.ವೈಶಾಲಿ,ವೀಣಾ,ಸಂತೋಷ್,ವಿನೋ ದಮ್ಮ,ಕುಮಾರಸ್ವಾಮಿ,ತಿಪ್ಪೇರುದ್ರಪ್ಪ, ಮಂಜುಳಾ, ಚಂದನಾ,ಪವಿತ್ರಾ ಇತರರು ಇದ್ದರು.
ಚಿತ್ರದುರ್ಗ: ಮಕ್ಕಳಲ್ಲಿ ಅಡಗಿರುವ ವಿವಿಧ ಪ್ರತಿಭೆಗಳ ಅನಾವರಣಕ್ಕೆ ಬಾಲ ಭವನದ ಚಟುವಟಿಕೆಗಳು ಪೂರಕವಾಗಿವೆ. ಪ್ರಯತ್ನ ಮತ್ತು ಏಕಾಗ್ರ ತೆ ಮೈಗೂಡಿಸಿಕೊಂಡರೆ ಕ್ರಿಯಾಶೀಲ ವ್ಯಕ್ತಿತ್ವಕ್ಕೆ ಬೇಸಿಗೆ ಶಿಬಿರಗಳು ಸಹಕಾರಿಯಾಗುತ್ತವೆ ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣÁಽಕಾರಿ ಜೆ.ವೈಶಾಲಿ ಹೇಳಿದರು.
ರಾಜ್ಯಬಾಲ ಭವನ ಸೊಸೈಟಿ,ಜಿಪಂ,ಜಿಲ್ಲಾ ಬಾಲ ಭವನ ಸಮಿತಿ,ಮಹಿಳಾ ಮತ್ತು ಮಕ್ಕಳ ಅಭಿವÊದ್ಧಿ ಇಲಾಖೆ ಸಂಯುಕ್ತಾಶ್ರಯದಲ್ಲಿ ನಗರದ ಬಾಲ ಭವನ ಸಭಾಂಗಣದಲ್ಲಿ ಈಚೆಗೆ ಆಯೋಜಿಸಿದ್ದ ೧೫ದಿನಗಳ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ ಉದ್ಘಾ ಟಿಸಿ ಅವರು ಮಾತನಾಡಿದರು.
ಇತ್ತೀಚಿನ ಸಂಶೋಧನೆಗಳ ಪ್ರಕಾರ,ಬೇಸಿಗೆ ರಜೆಯಲ್ಲಿ ಮಕ್ಕಳು ಅತಿಯಾಗಿ ಮೊಬೈಲ್ ಮತ್ತು ಟಿವಿ ನೋಡುವುದರಿಂದ ಅವ ರಲ್ಲಿ ವಿಶೇಷ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ಇಂತಹ ಕಾಯಿಲೆಗಳನ್ನು ನಿಯಂತ್ರಿಸಲು ಮತ್ತು ಸಮಯದ ಸದು ಪಯೋಗಕ್ಕಾಗಿ ಇಂಥ ಶಿಬಿರಗಳು ಉತ್ತಮ ವೇದಿಕೆ ಒದಗಿಸುತ್ತವೆ.
ಶಿಬಿರದಲ್ಲಿ ಮಕ್ಕಳು ಸಂಗೀತ,ನಾಟಕ,ಚಿತ್ರಕಲೆ, ಯೋಗ, ಕರಾಟೆ ಹಾಗೂ ನÊತ್ಯ ಕಲಿತು ಪ್ರದರ್ಶಿಸುತ್ತಿರುವುದು ಸಂತೋಷದ ವಿಷಯವೆಂದರು.
ಶಿಶು ಅಭಿವÊದ್ಧಿ ಯೋಜನಾಽಕಾರಿ ವೀಣಾ ಅವರು ಮಾತನಾಡಿ,ಮಕ್ಕಳು ಸಂಸ್ಕೃತಿ ಮತ್ತು ಸಂಸ್ಕಾರವನ್ನು ಬೆಳೆಸಿಕೊಳ್ಳಬೇಕು. ಈ ಬಾ ರಿಯ ಶಿಬಿರದಲ್ಲಿ ಅಗ್ನಿಶಾಮಕ ದಳದ ಪ್ರಾತ್ಯಕ್ಷಿಕೆ, ಉರಗ ಪರಿಚಯ ಹಾಗೂ ಮಾತನಾಡುವ ಗೊಂಬೆ ಕಾರ‍್ಯಕ್ರಮಗಳು ವಿಶೇಷ ಆಕರ್ಷ ಣೆಯಾಗಿದ್ದವು ಎಂದರು.
ಸಹಾಯಕ ಶಿಶು ಅಭಿವÊದ್ಧಿ ಯೋಜನಾಽಕಾರಿ ಮಂಜುಳಾ ಅವರು ಮಾತನಾಡಿ,ಪಾಲಕರು ಓದುಬರಹದ ಜತೆಗೆ ಮಕ್ಕಳ ಸÊಜನಾ ತ್ಮಕ ಚಟುವಟಿಕೆಗಳನ್ನೂ ಪ್ರೋತ್ಸಾಹಿಸ ಬೇಕೆಂದರು.
ಜಿಲ್ಲಾ ಬಾಲ ಭವನ ವ್ಯವಸ್ಥಾಪಕ ಪಿ.ಸುರೇಶ್ ಮಾತನಾಡಿ, ಈ ಬಾರಿಯ ಶಿಬಿರದ ಲ್ಲಿ ೯೫ ಮಕ್ಕಳು ನೋಂದಾಯಿಸಿಕೊಂಡು ಯಶಸ್ವಿಯಾಗಿ ತರಬೇತಿ ಪೂರೈಸಿದ್ದಾರೆ ಎಂದರು. ಜಿಲ್ಲಾ ಬಾಲಭವನ ಕಾರ‍್ಯಕ್ರಮ ಸಂಯೋ ಜಕ ಡಿ.ಶ್ರೀಕುಮಾರ್ ಪ್ರಾಸ್ತಾವಿಕ ವಾಗಿ ಮಾತನಾಡಿದರು.
ಬಾಲಕರ ಬಾಲ ಮಂದಿರದ ಅಽÃಕ್ಷಕ ಸಂತೋಷ್,ಬಾಲಕಿಯರ ಬಾಲ ಮಂದಿರದ ಅಽÃಕ್ಷಕಿ ವಿನೋದಮ್ಮ,ಸಂಪನ್ಮೂಲ ವ್ಯಕ್ತಿ ಗಳಾದ ಕುಮಾರಸ್ವಾಮಿ,ತಿಪ್ಪೇರುದ್ರಪ್ಪ, ಮಂಜುಳಾ, ಚಂದನಾ,ಪವಿತ್ರಾ ಮತ್ತಿತರರು ಇದ್ದರು. ಶಿಬಿರದಲ್ಲಿ ಮಕ್ಕಳು ಸಿದ್ಧಪಡಿಸಿ ದ ವಿವಿಧ ಕರ ಕುಶಲ ವಸ್ತುಗಳು ಹಾಗೂ ಚಿತ್ರಕಲೆಗಳ ಪ್ರದರ್ಶನ ನೋಡುಗರ ಗಮನ ಸೆಳೆಯಿತು. ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಮಕ್ಕಳು ಸಾಂಸ್ಕೃತಿಕ ಕಾರ‍್ಯಕ್ರಮಗಳನ್ನು ನಡೆಸಿಕೊಟ್ಟರು.