ಮತಹಕ್ಕು ದೇಶದ ಪೌರತ್ವಕ್ಕೆ ದಾಖಲೆ SIR

ಮಾಜಿ ಸಚಿವ ಎಚ್. ಆಂಜನೇಯ ಅವರು ಹೊಳಲ್ಕೆರೆಯ ತಮ್ಮ ನಿವಾಸದಲ್ಲಿ ಬಿಎಲ್‌ಒಗಳಿಗೆ ತಮ್ಮ ಮತಪಟ್ಟಿ ಕುರಿತು ಮಾಹಿತಿ ನೀಡುತ್ತಿರುವುದು. ಉಪ ತಹಸೀಲ್ದಾರ್ ಸನಾವುಲ್ಲ ಖಾನ್ ಇತರರು ಇದ್ದರು. SIR
ಮಾಜಿ ಸಚಿವ ಎಚ್. ಆಂಜನೇಯ ಅವರು ಹೊಳಲ್ಕೆರೆಯ ತಮ್ಮ ನಿವಾಸದಲ್ಲಿ ಬಿಎಲ್‌ಒಗಳಿಗೆ ತಮ್ಮ ಮತಪಟ್ಟಿ ಕುರಿತು ಮಾಹಿತಿ ನೀಡುತ್ತಿರುವುದು. ಉಪ ತಹಸೀಲ್ದಾರ್ ಸನಾವುಲ್ಲ ಖಾನ್ ಇತರರು ಇದ್ದರು. SIR
Published on

ಪ್ರಮುಖ ಮುಖ್ಯಾಂಶಗಳು

  • ಮಾಜಿ ಸಚಿವ ಎಚ್.ಆಂಜನೇಯ ಹೇಳಿಕೆ
  • ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯಕ್ರಮ
ಚಿಕ್ಕಜಾಜೂರು: ದೇಶದ ನಾಗರಿಕ ಪೌರತ್ವ ಸಾಬೀತುಪಡಿಸಲು ಮತಪಟ್ಟಿಯೇ ಪ್ರಮುಖ ದಾಖಲೆ ಆಗಲಿದ್ದು, ಈ ನಿಟ್ಟಿನಲ್ಲಿ ನಿರ್ಲಕ್ಷೃ ವಹಿಸಿದರೆ ದೇಶದಲ್ಲಿ ಬದುಕುವ ಹಕ್ಕನ್ನೇ ಕಳೆದಕೊಳ್ಳಬೇಕಾಗುತ್ತದೆ ಎಂದು ಮಾಜಿ ಸಚಿವ ಎಚ್. ಆಂಜನೇಯ ಎಚ್ಚರಿಸಿದರು. SIR
ಹೊಳಲ್ಕೆರೆಯಲ್ಲಿ ಮಂಗಳವಾರ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಮತದಾರರ ಪಟ್ಟಿ ಪರಿಷ್ಕರಣೆ ಜು.30ರ ವರೆಗೆ ನಡೆಯಲಿದೆ. ಈ ಕಾರ್ಯದಲ್ಲಿ ಪ್ರತಿ ನಾಗರಿಕನೂ ಪಾಲ್ಗೊಳ್ಳಬೇಕು ಎಂದರು.
ದೇಶದ ಪ್ರಜೆಯಾಗಿ ಬದುಕಲು ಪೌರತ್ವವೇ ಅತಿಮುಖ್ಯ. ಅಂತಹ ಪೌರತ್ವ ಹಾಗೂ ಮತದಾನದ ಹಕ್ಕನ್ನು ಉಳಿಸಿಕೊಳ್ಳಲು ಈ ಅವಕಾಶವನ್ನು ಪ್ರತಿಯೊಬ್ಬರೂ ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಸರ್ಕಾರಿ ಸೌಲಭ್ಯಕ್ಕೆ ಅರ್ಹತೆ: ಮತದಾರರ ಪಟ್ಟಿಯಲ್ಲಿ ಹೆಸರು ಇರುವವರಿಗೆ ಮಾತ್ರ ಕೇಂದ್ರ-ರಾಜ್ಯ ಸರ್ಕಾರದ ಸೌಲಭ್ಯಗಳು ದೊರೆಯಲಿವೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ನೂರಾರು ಯೋಜನೆಗಳಿಗೆ ಮತದಾರರ ಗುರುತಿನ ಚೀಟಿಯೇ ಆಧಾರ. ಮತಪಟ್ಟಿಯಲ್ಲಿ ಹೆಸರು ಇಲ್ಲದಿದ್ದರೆ, ನೀವು ದೇಶದ ನಾಗರಿಕರೇ ಅಲ್ಲ ಎಂಬಂತಾಗುತ್ತದೆ ಎಂದು ಎಚ್ಚರಿಸಿದರು.
ಕ್ಷೇತ್ರಾದ್ಯಂತ ಬಿಎಲ್‌ಒಗಳು ತೀವ್ರಗತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ಪ್ರತಿ ಬೂತ್‌ಗೂ ಸ್ವಯಂ ಸೇವಕರನ್ನು ನೇಮಿಸಲಾಗಿದೆ. ಅವರು ಮನೆ ಮನೆಗೆ ತೆರಳಿ ಅರ್ಜಿ ತುಂಬಲು, ದಾಖಲೆ ಜೋಡಿಸಲು ನೆರವು ನೀಡಲಿದ್ದಾರೆ. ವಯಸ್ಸಾದವರಿಗೆ, ಅಂಗವಿಕಲರಿಗೆ ವಿಶೇಷ ಸಹಕಾರ ನೀಡುತ್ತಾರೆ ಎಂದರು. ಒಂದು ಗಂಟೆ ಸಮಯ ಮೀಸಲಿಟ್ಟರೆ ಸಾಕು ನಿಮ್ಮ ಪೌರತ್ವ, ನಾಗರಿಕತ್ವ ಭದ್ರವಾಗುತ್ತದೆ. ನಿಮ್ಮ ಮಕ್ಕಳ ಭವಿಷ್ಯಕ್ಕೂ ಇದು ಅಗತ್ಯ. ಬಿಎಲ್‌ಒಗಳು ಬಂದಾಗ ನಿರ್ಲಕ್ಷೃ ಮಾಡಬೇಡಿ. ಕೇಳುವ ದಾಖಲೆಗಳನ್ನು ತಕ್ಷಣ ನೀಡಿ, ಸಾರ್ವಜನಿಕರು 1950 ಸಹಾಯವಾಣಿಗೆ ಕರೆ ಮಾಡಿ ಹೆಚ್ಚಿನ ಮಾಹಿತಿ ಪಡೆಯಬಹುದು ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಮತದಾರರ ಜಾಗೃತಿ ಕಾರ್ಯದಲ್ಲಿ ತೊಡಗಿರುವ ಉಪ ತಹಸೀಲ್ದಾರ್ ಸನಾವುಲ್ಲ ಖಾನ್ ಅವರನ್ನು ಸನ್ಮಾನಿಸಲಾಯಿತು.
ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net