ಮೊದಲ ಪ್ರಯತ್ನದಲ್ಲೇ ಯಶಸ್ಸು

ಬಿ.ಸೋನು
ಬಿ.ಸೋನು
Published on

ಪ್ರಮುಖ ಮುಖ್ಯಾಂಶಗಳು

  • ಸಿವಿಲ್ ನ್ಯಾಯಾಽÃಶರ ಪರೀಕ್ಷೆ
  • ಹಿರಿಯರ ಮಾರ್ಗದರ್ಶನ
  • ಕಾರ್ಯಾಗಾರ
ಚಿತ್ರದುರ್ಗ: ಚಿತ್ರದುರ್ಗ ತಾಲೂಕು ಜಿ.ಆರ್.ಹಳ್ಳಿ ಮೂಲದ ಚಿತ್ರದುರ್ಗ ನಿವಾಸಿ ಬಿ.ಸೋನು ಅವರು ಮೊದಲ ಪ್ರಯತ್ನದಲ್ಲೇ ಸಿವಿಲ್ ನ್ಯಾಯಾಽÃಶರ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.
ಚಿತ್ರದುರ್ಗದ ಕೆಎಸ್‌ಎ-ï‌ಸಿ ವ್ಯವಸ್ಥಾಪಕ ಆರ್. ಬಾಬು, ಮಂಜುಳಾ ದಂಪತಿ ಪುತ್ರಿ ಸೋನು ಅವರು ದಾವಣಗೆರೆಯ ಧವನ್ ಕಾಲೇಜಿನಲ್ಲಿ ಬಿಬಿಎಂ, ಬೆಂಗಳೂರು ವಿವಿಯಲ್ಲಿ ಎಂಬಿಎ, ಚಿತ್ರದುರ್ಗದ ಎಸ್‌ಜೆಎಂ ಕಾಲೇಜಿನಲ್ಲಿ ೨೦೨೩ರಲ್ಲಿ ಕಾನೂನು ಪದವಿ ಪಡೆದು ಅದೇ ವರ್ಷ ಕೆಎಸ್‌ಬಿಸಿ ನೋಂದಣಿ ಮಾಡಿಕೊಂಡಿದ್ದರು. ಕಳೆದ ಎರಡೂವರೆ ವರ್ಷಗಳಿಂದ ವಕೀಲರಾಗಿ ಪ್ರಾಕ್ಟಿಸ್ ಮಾಡುತ್ತಲೇ ಪರೀಕ್ಷೆಗೂ ಸಿದ್ಧತೆ ನಡೆಸಿದ್ದರು.
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಽÃಶ ರೋಣ್‌ವಾಸುದೇವ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಽಕಾರ ಸದಸ್ಯ ಕಾ ರ್ಯದರ್ಶಿ ಎಂ. ವಿಜಯ್ ಅವರೂ ಸೇರಿ ನ್ಯಾಯಾಽÃಶರು, ಸೀನಿಯರ್ ವಕೀಲರಾದ ಕೆ.ಎಂ. ವಿಶ್ವನಾಥಯ್ಯ, ವಕೀಲರ ಸಂಘದ ಹಿರಿಯರ ಮಾರ್ಗದರ್ಶನದೊಂದಿಗೆ ಪರೀಕ್ಷೆ ಪಾಸು ಮಾಡಿದ್ದಾರೆ.
ವಕೀಲರು, ನ್ಯಾಯಾಽÃಶರ ಹುದ್ದೆ ನೇಮಕ ಆಕಾಂಕ್ಷಿಗಳಿಗೆ ಅನುಕೂಲವಾಗುವಂತೆ ರೋಣ್‌ವಾಸುದೇವ ಹಾಗೂ ವಿಜಯ್ ಅ ವರು ಬಾರ್ ಅಸೋಷಿಯೇಷನ್ ಸಹಕಾರದೊಂದಿಗೆ ದುರ್ಗದ ವಕೀಲರ ಸಂಘದಲ್ಲಿ ಏರ್ಪಡಿಸುತ್ತಿದ್ದ ಕಾರ್ಯಾಗಾರಗಳು, ಹಾಸನ ಹಿರಿಯ ನ್ಯಾಯಾಽÃಶ ರವಿಕುಮಾರ್ ಅವರು ನಡೆಸಿಕೊಡುತ್ತಿದ್ದ ಆನ್‌ಲೈನ್ ಕ್ಲಾಸ್‌ನೊಂದಿಗೆ ಪ್ರಾಕ್ಟಿಸ್ ಮಾಡುತ್ತಲೇ ಮನೆಯಲ್ಲೇ ಓದಿ ಕೊಂಡಿದ್ದೆ. ಕೋಚಿಂಗ್ ಕ್ಲಾಸ್‌ಗೆ ಸೇರಿಲ್ಲ ಎಂದು ವಿಜಯವಾಣಿಯೊಂದಿಗೆ ಸೋನು ಅವರು ತಮ್ಮ ಸಂತಸ ಹಂಚಿಕೊAಡರು.
ಕಾರ್ಯಾಗಾರಗಳು ಪ್ರಿಲಿಮನರಿ, ಮೇನ್ಸ್ ಹಾಗೂ ಸಂದರ್ಶನಕ್ಕೆ ಸಾಕಷ್ಟು ನೆರವಾಗಿವೆ. ಸೋನು ಅವರ ತಮ್ಮ ಬಿ. ಗುರುಪ್ರಸಾದ್ ಹೈದರಾಬಾದ್‌ನಲ್ಲಿ ಯುಪಿಎಸ್‌ಸಿ ಪರೀಕ್ಷೆಗೆ ಸಿದ್ಧತೆ ನಡೆಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net