ನಿಗದಿತ ಅವಽಯೊಳಗೆ ವೆಚ್ಚದ ಲೆಕ್ಕ ಸಲ್ಲಿಸಿ

 ಚಿತ್ರದುರ್ಗ ತಾಲೂಕು ವ್ಯಾಪ್ತಿಯ ಎಲ್ಲ ಬಟವಾಡೆ ಅಽಕಾರಿಗಳು, ಪಿಡಿಒಗಳಿಗೆ ಜಿಪಂನಲ್ಲಿ ಆಯೋಜಿಸಿದ್ದ ಕಾರ್ಯಾಗಾರವನ್ನು ಜಿಲ್ಲಾ ಖಜಾನೆ ಉಪ ನಿರ್ದೇಶಕ ಎಚ್.ಟಿ. ಅಶೋಕ್ ಉದ್ಘಾಟಿಸಿದರು. ವೀರೇಶ್, ಎನ್. ಬೋರಯ್ಯ, ಬಿ. ವೀರಭದ್ರಪ್ಪ, ಎಚ್.ಪಿ. ಅಮರ ನಾಥ್‌ಜೈನ್, ಎಂ.ಎಸ್.ನ್ಯಾಮತಿ ಇತರರು ಇದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾ ಖಜಾನೆ ಉಪ ನಿರ್ದೇಶಕ ಎಚ್.ಟಿ. ಅಶೋಕ್ ಸಲಹೆ
  • ಎಚ್‌ಆರ್‌ಎಂಎಸ್, ಖಜಾನೆ-೨ ತಂತ್ರಾAಶ
  • ಅಽಕಾರಿಗಳಿಗೆ ಕಾರ್ಯಾಗಾರ
ಚಿತ್ರದುರ್ಗ: ಪ್ರತಿ ತಿಂಗಳ ವೆಚ್ಚದ ಲೆಕ್ಕ, ಜಿಎಸ್‌ಟಿ ಸಮನ್ವಯೀಕರಣ, ಜಿಪಂ ಮತ್ತು ತಾಪಂ ಲೆಕ್ಕ ಸಮನ್ವಯೀಕರಣವನ್ನು ನಿಗದಿತ ಅವಽಯೊಳಗೆ ಸಲ್ಲಿಸ ಬೇಕು ಎಂದು ಜಿಲ್ಲಾ ಖಜಾನೆ ಉಪ ನಿರ್ದೇಶಕ ಎಚ್.ಟಿ.ಅಶೋಕ್ ಹೇಳಿದರು.
ಜಿಪಂದಲ್ಲಿ ಶುಕ್ರವಾರ ಚಿತ್ರದುರ್ಗ ತಾಲೂಕು ವ್ಯಾಪ್ತಿಯ ಎಲ್ಲ ಬಟವಾಡೆ ಅಽಕಾರಿಗಳು(ಡಿಡಿಒ)ಹಾಗೂ ಪಂಚಾಯಿತಿ ಅಭಿವೃದ್ಧಿ ಅಽ ಕಾರಿಗಳಿಗೆ ಎಚ್‌ಆರ್‌ಎಂಎಸ್-೨ ಹಾಗೂ ಖಜಾನೆ-೨ ತಂತ್ರಾAಶ ಕುರಿತು ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಖಜಾನೆ-೨ರಲ್ಲಿ ಬಿಲ್ಲನ್ನು ಸೃಜಿಸಿ ಸಲ್ಲಿಸುವಾಗ ಅನುಸರಿಸಬೇಕಾದ ನಿಯಮಾಳಿಗಳ ಬಗ್ಗೆ ವಿವರಿಸಿದ ಅವರು, ವರ್ಷಾಂತ್ಯ ಸಮೀ ಪಿಸುತ್ತಿರುವುದರಿಂದ ಡಿಎಸ್‌ಸಿ ನವೀಕರಣ, ಪ್ರಯಾಣ ಭತ್ಯೆ, ಜಿಪಿಎ-ï ಬಿಲ್‌ಗಳು, ಎಚ್‌ಆರ್‌ಎಂಎಸ್-೨, ಎನ್‌ಪಿಎಸ್ ಹಾಗೂ ಆನ್‌ಲೈನ್ ಕಚೇರಿ ಆದೇಶ ಸÊಜನೆ ಬಗ್ಗೆ ತಿಳಿಸಿದರು.
ಸಂಪನ್ಮೂಲ ವ್ಯಕ್ತಿ ದಾವಣಗೆರೆ ವೀರೇಶ್ ಅವರು ಇಪ್ರಕ್ಯೂರ್‌ಮೆಂಟ್ ಪೋರ್ಟಲ್‌ನಲ್ಲಿ ವರ್ಕ್ ಬಿಲ್ ಸÊಜನೆ ಬಗ್ಗೆ ತರಬೇತಿ ನೀಡಿ ದರು. ಜಿಲ್ಲಾ ಖಜಾನೆ ಇಲಾಖೆ ಸಹಾಯಕ ನಿರ್ದೇಶಕ ಎನ್. ಬೋರಯ್ಯ, ಸಹಾಯಕ ಖಜನಾಽಕಾರಿ ಬಿ. ವೀರಭದ್ರಪ್ಪ, ಇಇ ಎಚ್. ಪಿ.ಅಮರನಾಥ್‌ಜೈನ್, ಎಸಿಎ-ï ಎಂ.ಎಸ್. ನ್ಯಾಮತಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net