ಅಲ್ಲಮ ಪ್ರಭುದೇವರ ಅರಿಯಲು ಅಧ್ಯಯನ ಅಗತ್ಯ

 ಚಿತ್ರರ್ದು ಮುರುಘಾ ಮಠದಲ್ಲಿ ಮಂಗಳವಾರ ಯುಗಾದಿ ಹಬ್ಬದ ಪ್ರಯುಕ್ತ ಆಯೋಜಿಸಿದ್ದ ರಾಜ್ಯಮಟ್ಟದ ಕವಿಗೋಷ್ಠಿಯಲ್ಲಿ ಡಾ. ಬಸವಕುಮಾರ ಸ್ವಾಮೀಜಿ, ಡಾ. ಬಸವಪ್ರಭು ಸ್ವಾಮೀಜಿ, ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ ಇತರರು ಇದ್ದರು.
ಚಿತ್ರರ್ದು ಮುರುಘಾ ಮಠದಲ್ಲಿ ಮಂಗಳವಾರ ಯುಗಾದಿ ಹಬ್ಬದ ಪ್ರಯುಕ್ತ ಆಯೋಜಿಸಿದ್ದ ರಾಜ್ಯಮಟ್ಟದ ಕವಿಗೋಷ್ಠಿಯಲ್ಲಿ ಡಾ. ಬಸವಕುಮಾರ ಸ್ವಾಮೀಜಿ, ಡಾ. ಬಸವಪ್ರಭು ಸ್ವಾಮೀಜಿ, ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಅಲ್ಲಮಪ್ರಭುದೇವರ ವ್ಯಕ್ತಿತ್ವ ಕುರಿತ ಸ್ವರಚಿತ ಕವನ ವಾಚನ
  • ಯುಗಾದಿ ಪ್ರಯುಕ್ತ ಮುರುಘಾಮಠದಲ್ಲಿ ಕವಿಗೋಷ್ಠಿ
  • ಮುರುಘಾಮಠ
ಚಿತ್ರದುರ್ಗ: ಅಲ್ಲಮಪ್ರಭುದೇವರ ಒಳ ನೋಟ ತಿಳಿಯಲು ಅವರ ಹಾಗೂ ಶೈವ ಕೃತಿಗಳನ್ನು ಓದಬೇಕು ಎಂದು ಮುರುಘಾ ಮಠದ ಆಡಳಿತ ಮಂಡಳಿ ಸದಸ್ಯ ಡಾ. ಬಸವಕುಮಾರ ಸ್ವಾಮೀಜಿ ಹೇಳಿದರು.
ಶ್ರೀ ಮಠದಲ್ಲಿ ಮಂಗಳವಾರ ಯುಗಾದಿ ಹಬ್ಬದ ಪ್ರಯುಕ್ತ ಆಯೋಜಿಸಿದ್ದ ರಾಜ್ಯ ಮಟ್ಟದ ಕವಿಗೋಷ್ಠಿಯ ಸಾನ್ನಿಧ್ಯವಹಿಸಿ ಮಾತ ನಾಡಿದ ಅವರು, ವಚನ ನಿರ್ವಚನ ಕೃತಿ ಅಧ್ಯಯನದಿಂದಲೂ ಅಲ್ಲಮರ ಜೀವನ, ಕಾವ್ಯ ಶೈಲಿಗಳು ಮತ್ತು ವಚನ ಸಾಹಿತ್ಯದ ಬಗ್ಗೆ ತಿಳಿಯಬಹುದು ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಧ್ಯಾಪಕಿ ಪ್ರೊ. ತಾರಿಣಿ ಶುಭದಾಯಿನಿ ಮಾತನಾಡಿ, ಪರಂಪರೆಯ ಸಂಕೇತವಾಗಿರುವ ಶ್ರೀ ಮಠದಲ್ಲಿ ಕವಿಗೋಷ್ಠಿ ಆಯೋಜಿಸಿರುವುದು ಸ್ವಾಗತಾರ್ಹ. ಅಲ್ಲಮರು ಭಾಷೆಗೆ ನಿಲುಕದ ವ್ಯಕ್ತಿ. ಭಾಷೆಯನ್ನು ತನ್ನದಾಗಿಸಿಕೊಳ್ಳದೆ ಸತ್ವ ಯುತ ಕಾವ್ಯ ಸೃಷ್ಟಿಸಲಾಗದು. ಲೋಕಾಂತ, ಏಕಾಂತದ ಅನುಭವದಿಂದ ಕವಿಯಾಗಲು ಸಾಧ್ಯ. ತತ್ವ್ವಜ್ಞಾನ ಮತ್ತು ಅರಿವಿನೊಂದಿಗೆ ಸಾಹಿತ್ಯದ ರಚನೆ ಆಗಬೇಕಿದೆ ಎಂದರು.
ಪ್ರಾಚಾರ್ಯ ಪ್ರೊ.ಜೆ. ಕರಿಯಪ್ಪ ಮಾಳಿಗೆ ಮಾತನಾಡಿ, ಅಲ್ಲಮರ ಕುರಿತು ಮಧ್ಯ ಕರ್ನಾಟಕದಲ್ಲಿ ಆಯೋಜಿಸಿರುವ ಈ ಕಾರ್ಯ ಕ್ರಮ ಒಂದು ಮಹಾ ಅಭಿಯಾನ ಎಂದು ಬಣ್ಣಿಸಿದರು.
ಸಿದ್ಧ, ಸಂತರು, ದಾರ್ಶನಿಕರನ್ನು ಅರಿತರೆ ಅಲ್ಲಮರ ಜೀವನ, ಅವರ ಕ್ರಾಂತಿ ತಿಳಿಯಲು ಸಾಧ್ಯವಾಗಲಿದೆ ಎಂದರು. ದ್ಯಾವರ ಹಳ್ಳಿ ಆನಂದಕುಮಾರ್ ಮಾತನಾಡಿದರು.
ದಾವಣಗೆರೆ ವಿರಕ್ತ ಮಠದ ಡಾ. ಬಸವಪ್ರಭು ಸ್ವಾಮೀಜಿ, ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ, ಶ್ರೀ ತಿಪ್ಪೇರುದ್ರ ಸ್ವಾಮೀಜಿ, ಗೋವಿಂದಸ್ವಾಮೀಜಿ, ಎಸ್‌ಜೆಎಂ ವಿಶ್ವವಿದ್ಯಾಲಯದ ಕುಲಪತಿ ಡಾ.ಕೆ.ಬಿ. ಗುಡಸಿ, ಕೆಇಬಿ ಷಣ್ಮುಖಪ್ಪ, ಇತಿಹಾಸ ಸಂಶೋಧಕ ಬಿ. ರಾಜಶೇಖರಪ್ಪ, ಬಾಪೂಜಿ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಕೆ.ಎಂ. ವಿರೇಶ್, ಶಣೆÃಚಾರ್ ಇತರರು ಇದ್ದರು.
ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ನೂರಾರು ಕವಿಗಳು, ಸಾಹಿತಿಗಳು, ವಿಮರ್ಶಕರು ಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು. ಜಮುರಾ ಕಲಾವಿದರು ಪ್ರಾರ್ಥಿಸಿದರು. ಬಿ.ಟಿ. ನಂದೀಶ್ ಸ್ವಾಗತಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net