ಶೇ.7ರಷ್ಟು ಮೀಸಲಿಗೆ ಹೋರಾಟ convention

ಚಳ್ಳಕೆರೆಯಲ್ಲಿ ಎಸ್ಟಿ ಮೋರ್ಚಾ ಜಿಲ್ಲಾ ಸಮಾವೇಶವನ್ನು ಮಾಜಿ ಸಚಿವ ಬಿ. ಶ್ರೀರಾಮಲು ಉದ್ಘಾಟಿಸಿದರು. ಕೆ.ಟಿ. ಕುಮಾರ ಸ್ವಾಮಿ, ಬಂಗಾರು ಹನುಮಂತು, ಸೂರನಹಳ್ಳಿ ಶ್ರೀನಿವಾಸ್, ಬಾಳೆಕಾಯಿ ರಾಮದಾಸ್ ಇದ್ದರು. convention
ಚಳ್ಳಕೆರೆಯಲ್ಲಿ ಎಸ್ಟಿ ಮೋರ್ಚಾ ಜಿಲ್ಲಾ ಸಮಾವೇಶವನ್ನು ಮಾಜಿ ಸಚಿವ ಬಿ. ಶ್ರೀರಾಮಲು ಉದ್ಘಾಟಿಸಿದರು. ಕೆ.ಟಿ. ಕುಮಾರ ಸ್ವಾಮಿ, ಬಂಗಾರು ಹನುಮಂತು, ಸೂರನಹಳ್ಳಿ ಶ್ರೀನಿವಾಸ್, ಬಾಳೆಕಾಯಿ ರಾಮದಾಸ್ ಇದ್ದರು. convention
Published on

ಪ್ರಮುಖ ಮುಖ್ಯಾಂಶಗಳು

  • ಮಾಜಿ ಸಚಿವ ಬಿ. ಶ್ರೀರಾಮುಲು ಹೇಳಿಕೆ
  • ಎಸ್ಟಿ ಮೋರ್ಚಾ ಜಿಲ್ಲಾ ಜಾಗೃತಿ ಸಮಾವೇಶ
ಚಳ್ಳಕೆರೆ: ಪರಿಶಿಷ್ಟ ಪಂಗಡದವರ ಭವಿಷ್ಯಕ್ಕಾಗಿ ಶೇ.7ರಷ್ಟು ಮೀಸಲಾತಿ ಹೆಚ್ಚಳಕ್ಕೆ ಪಕ್ಷಾತೀತವಾಗಿ ಒಗ್ಗೂಡಿ ಹೋರಾಟ ನಡೆಸುವುದು ಅನಿವಾರ್ಯ ಎಂದು ಮಾಜಿ ಸಚಿವ ಬಿ. ಶ್ರೀರಾಮುಲು ಹೇಳಿದರು. convention
ನಗರದ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ಸೋಮವಾರ ತಾಲೂಕು ಬಿಜೆಪಿ ಮಂಡಲ ವತಿಯಿಂದ ಆಯೋಜಿಸಿದ್ದ ಎಸ್ಟಿ ಮೋರ್ಚಾ ಜಿಲ್ಲಾ ಜಾಗೃತಿ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ಮುದಾಯದ ಮಕ್ಕಳ ಶಿಕ್ಷಣ, ಉದ್ಯೋಗ ಭವಿಷ್ಯದ ದೃಷ್ಟಿಯಿಂದ ಮೀಸಲು ಸೌಲಭ್ಯ ಧಕ್ಕಿಸಿಕೊಳ್ಳಬೇಕಾಗಿದೆ. ಚುನಾವಣೆ ಬಂದಾಗ ಸ್ವಾರ್ಥಕ್ಕಾಗಿ ಸಮುದಾಯವನ್ನು ಇಬ್ಭಾಗ ಮಾಡುವ ತಂತ್ರ ನಿಲ್ಲಿಸಬೇಕು. ಊರ ಬೇಡರು ಮತ್ತು ಮ್ಯಾಸ ಬೇಡರು ಎಂಬ ಬೇದಭಾವ ಕೈಬಿಡಬೇಕು. ನಮ್ಮ ಸಮುದಾಯದ ಸ್ಥಿತಿಗತಿ ಮತ್ತು ಜನ ಜೀವನ ಸುಧಾರಣೆಗೆ ಶೇ.7ರಷ್ಟು ಮೀಸಲಾತಿ ಜಾರಿ ಆಗಬೇಕು ಎಂದರು.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದಾಗ ಸಾಮಾಜಿಕ ನ್ಯಾಯದಂತೆ ಎಸ್ಸಿ ಸಮುದಾಯಕ್ಕೆ ಶೇ.17ರಷ್ಟು, ಎಸ್ಟಿ ಸಮುದಾಯಕ್ಕೆ ಶೇ.7 ರಷ್ಟು ಮೀಸಲಾತಿ ಹೆಚ್ಚಳ ಮಾಡಲಾಗಿತ್ತು. ನಂತರ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಎಸ್ಟಿಗೆ ಹೆಚ್ಚಿಸಿದ್ದ ಮೀಸಲಾತಿಯನ್ನು ಕಿತ್ತುಕೊಳ್ಳುವ ಕೆಲಸ ಮಾಡುತ್ತಿದೆ. ಸಂವಿಧಾನ ಬದ್ದವಾಗಿ ಜನಸಂಖ್ಯೆಗೆ ಅನುಗುಣವಾಗಿ ನೀಡಲಾಗಿರುವ ಮೀಸಲಾತಿಯನ್ನು ಕಾಂಗ್ರೆಸ್ ಸಹಿಸುತ್ತಿಲ್ಲ. ಸಮುದಾಯಕ್ಕೆ ಆ ಪಕ್ಷ ಮಾಡುತ್ತಿರುವ ಅನ್ಯಾಯವನ್ನು ಜನರಿಗೆ ತಿಳಿಸುವ ಕೆಲಸ ಆಗಬೇಕು ಎಂದರು. ಸಮುದಾಯ ಮೀಸಲಾತಿಗಾಗಿ ಒಗ್ಗೂಡುವ ಅಗತ್ಯವಿದೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ತಕ್ಕಪಾಠ ಕಲಿಸಬೇಕು ಎಂದು ತಿಳಿಸಿದರು.
ವಾಲ್ಮೀಕಿ ಗುರುಪೀಠದ ಧರ್ಮದರ್ಶಿ ಅಪ್ಪಣ್ಣ ನಾಯಕ ಮಾತನಾಡಿ, ಕಾಂಗ್ರೆಸ್‌ನಿಂದ ಎಸ್ಟಿ ಮೀಸಲಾತಿಯಲ್ಲಿ ಅನ್ಯಾಯ ಆಗಿದೆ. ಆದರೂ, ಕಾಂಗ್ರೆಸ್‌ನಲ್ಲಿರುವ 15 ಜನ ಶಾಸಕರು ದನಿ ಎತ್ತುತ್ತಿಲ್ಲ. ಇಂತಹ ಭಿನ್ನಾಭಿಪ್ರಾಯಗಳಿಂದ ಸಮುದಾಯಕ್ಕೆ ಸಾಮಾಜಿಕ ನ್ಯಾಯ ಸಿಗುತ್ತಿಲ್ಲ. ಸಾಮಾಜಿಕ ಸಿದ್ಧಾಂತ ಹೇಳುತ್ತಿದ್ದ ಸಿದ್ದರಾಮಯ್ಯ ಅವರಿಂದಲೂ ಅನ್ಯಾಯ ಆಗಿದೆ ಎಂದು ಆರೋಪಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಟಿ. ಕುಮಾರಸ್ವಾಮಿ ಮಾತನಾಡಿ, ಎಸ್ಟಿ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಜಾರಿ ಮಾಡುತ್ತಿಲ್ಲ. ಇದರಿಂದ ಉದ್ಯೋಗ ಮತ್ತು ಶಿಕ್ಷಣದಲ್ಲಿ ಹಿನ್ನಡೆಯಾಗಲಿದೆ. ಸಮುದಾಯದ ಪರಿಸ್ಥಿತಿ ಸುಧಾರಣೆಗೆ ಗಟ್ಟಿ ದನಿಯಲ್ಲಿ ಹೋರಾಟಕ್ಕೆ ಸಜ್ಜಾಗಬೇಕು ಎಂದರು.
ಮಂಡಲ ಅಧ್ಯಕ್ಷ ಹಿರೇಮದುರೆ ಸುರೇಶ್, ಜಿಲ್ಲಾ ಉಪಾಧ್ಯಕ್ಷ ಸೂರನಹಳ್ಳಿ ಶ್ರೀನಿವಾಸ್, ಬಾಳೆಕಾಯಿ ರಾಮದಾಸ್, ಡಾ.ಬಿ. ರಾಮರಾಜ್, ಮಂಡಿ ಶ್ರೀನಿವಾಶ್, ದೊರೆ ನಾಗರಾಜ್, ಮಾಜಿ ಸಂಸದ ಬಿ.ವಿ. ನಾಯಕ, ಮಾಜಿ ಶಾಸಕರಾದ ರಾಮಚಂದ್ರಪ್ಪ, ಸೋಮಲಿಂಗಪ್ಪ, ಹೇಮಲತಾ ನಾಯಕ ಮಾತನಾಡಿದರು. ಮಾಜಿ ಸಂಸದ ಪಕ್ಕೀರಪ್ಪ, ಮಾಜಿ ಶಾಸಕ ರಾಜೇಶ್, ಸಿದ್ದರಾಜು, ಶ್ರೀನಿವಾಸ್ ದಾಸ್, ಮಹಂತೇಶ್ ನಾಯಕ ಇದ್ದರು.
ಎಸ್ಟಿ ಸಮುದಾಯಕ್ಕೆ ಸೋಲು: ಕಳೆದ ಚುನಾವಣೆಯಲ್ಲಿ ಬಹುಪಾಲು ಎಸ್ಟಿ ಸಮುದಾಯಕ್ಕೆ ಸೋಲಾಗಿದೆ. ಇದರಿಂದ ಮೀಸಲಾತಿ ಹೋರಾಟಕ್ಕೆ ಬಲ ಬರುತ್ತಿಲ್ಲ ಎಂದು ಎಸ್ಟಿ ಮೋರ್ಚಾ ರಾಜ್ಯಾಧ್ಯಕ್ಷ ಬಂಗಾರು ಹನುಮಂತು ಬೇಸರ ವ್ಯಕ್ತಪಡಿಸಿದರು. ಕಳೆದ ಬಿಜೆಪಿ ಸರ್ಕಾರದಲ್ಲಿ ಸಮುದಾಯಕ್ಕೆ ಶೇ3ರಿಂದ 7 ಕ್ಕೆ ಮೀಸಲು ಹೆಚ್ಚಳ ಮಾಡಲಾಗಿತ್ತು. ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಕಾರ್ಯಕರ್ತರು ಕೆಲಸ ಮಾಡಬೇಕು. ತಳ ಸಮುದಾಯಗಳನ್ನು ಕೇವಲ ವೋಟಿಗಾಗಿ ಬಳಸಿಕೊಳ್ಳುತ್ತಿರುವ ಕಾಂಗ್ರೆಸ್ ಪಕ್ಷದ ಕುತಂತ್ರದ ಕುರಿತು ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದರು.

ಸೋನಿಯಾ, ರಾಹುಲ್, ಖರ್ಗೆಗೆ ಕೊಡಲು ಸರ್ಕಾರದಲ್ಲಿ ಹಣ ಇದೆ. ಸರ್ಕಾರಿ ಶಾಲೆ ಮಕ್ಕಳಿಗೆ ಮೊಟ್ಟೆ, ಪಠ್ಯಪುಸ್ತಕ, ಬ್ಯಾಗ್, ವಿದ್ಯಾರ್ಥಿ ವೇತನ ಕೊಡಲು ಹಣ ಇಲ್ಲ. ಎಸ್ಸಿ, ಎಸ್ಟಿ ನಿಗಮಗಳಲ್ಲೂ ಹಗರಣಗಳು ನಡೆದಿವೆ. ಪ್ರವಾಸಿ ಮಂದಿರಗಳು ಮತ್ತು ವಿಶ್ವವಿದ್ಯಾಲಯಗಳ ಕರೆಂಟ್ ಬಿಲ್ ಕಟ್ಟಲು ಹಣ ಇಲ್ಲದ ರೀತಿಯಲ್ಲಿ ಸರ್ಕಾರ ದಿವಾಳಿ ಆಗಿದೆ.

— ಬಿ. ಶ್ರೀರಾಮಲು ಮಾಜಿ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net