ಚಿತ್ರದುರ್ಗ: ಜೆಇಇ ಆಡ್ವಾನ್ಸ್ ರಾಷ್ಟಿçÃಯ ಪರೀಕ್ಷೆಯಲ್ಲಿ ನಗರದ ಎಸ್‌ಆರ್‌ಎಸ್ ಪಿಯು ಕಾಲೇಜು ವಿದ್ಯಾರ್ಥಿಗಳು ಉತ್ತಮ ರ‍್ಯಾಂಕ್‌ಗಳೊAದಿಗೆ ದೇಶದ ಪ್ರತಿಷ್ಠಿತ ಸಂಸ್ಥೆಗಳ ಪ್ರವೇಶ ನಿರೀಕ್ಷೆಯಲ್ಲಿದ್ದಾರೆ.
ಕಾಲೇಜಿನ ಡಿ. ಸುಮಂತ್ ೪೮೫ನೇ ರ‍್ಯಾಂಕ್‌ಗಳಿಸುವುದರೊAದಿಗೆ ಐಐಟಿ ಸೀಟು ಪಡೆಯುವ ನಿರೀಕ್ಷೆ ಹೊಂದಿದ್ದಾರೆ. ಟಿ.ಪುನೀ ತ್‌ಪ್ರಭು ೧೧೯೧ನೇ, ಡಿ. ಮಿಥುನ್ ೧೨೪೮ನೇ, ತನುಶ್ರೀ ೩೨೪೮ನೇ.
ನಮಿತಾರಾಜ್ ೪೭೦೮ ಹಾಗೂ ರಿತ್ವಿಕ್ ೬೧೨೬ನೇ ರ‍್ಯಾಂಕ್ ಪಡೆದಿದ್ದಾರೆ. ೨೩ವಿದ್ಯಾರ್ಥಿಗಳು ೧೦ ಸಾವಿರ ಒಳಗೆ ರ‍್ಯಾಂ ಕ್‌ಗಳನ್ನು ಪಡೆದು ಐಐಟಿ, ಐಐಐಟಿ ಹಾಗೂ ಎನ್‌ಐಟಿ ಪ್ರವೇಶಾವಕಾಶ ಪಡೆದಿದ್ದಾರೆ.
ಕಳೆದ ಶೈಕ್ಷಣಿಕ ಸಾಲಿನಲ್ಲೂ ಈ ಕಾಲೇಜಿನ ಐವರು ವಿದ್ಯಾರ್ಥಿಗಳು ಐಐಟಿ, ಆರು ವಿದ್ಯಾರ್ಥಿಗಳು ಐಐಐಟಿ ಹಾಗೂ ನಾಲ್ವರು ವಿದ್ಯಾರ್ಥಿಗಳು ಎನ್‌ಐಟಿಗೆ ಆಯ್ಕೆಯಾಗಿದ್ದರು.
ಪ್ರತಿ ವರ್ಷವೂ ನಮ್ಮ ಕಾಲೇಜು ವಿದ್ಯಾರ್ಥಿಗಳು ರಾಷ್ಟಿçÃಯ ಮಟ್ಟದಲ್ಲಿ ಅತ್ಯುತ್ತಮ ಸಾಧನೆ ಮಾಡುತ್ತಿರುವುದು ವಿಶೇಷ ಮ ತ್ತು ಜೆಇಇ ಆಕಾಂಕ್ಷಿಗಳ ಪಾಲಿಗೆ ತಮ್ಮ ಸಂಸ್ಥೆ ಆಶಾಕಿರಣವಾಗಿದೆ ಎಂದು ಎಸ್‌ಆರ್‌ಎಸ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಬಿ.ಎ.ಲಿಂಗಾರೆಡ್ಡಿ ಹರ್ಷ ವ್ಯಕ್ತಪಡಿಸಿದ್ದಾರೆ.
ಜೆಇಇ ಹಾಗೂ ನೀಟ್ ಪರೀಕ್ಷೆಗಳಿಗೆ ಸಮಗ್ರ ತರಬೇತಿ ಯೋಜನೆಯೊಂದಿಗೆ ಅನುಭವಿ ಉಪನ್ಯಾಸಕರ ಮಾರ್ಗದರ್ಶನದಿಂದ ಈ ಫಲಿತಾಂಶ ಪಡೆಯಲು ಸಾಧ್ಯವಾಗಿದೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.