ಚಿತ್ರದುರ್ಗದಲ್ಲಿ ಸೋಮವಾರ ಆಯೋಜಿಸಿದ್ದ ಶ್ರೀ ದೇವರದಾಸಿಮಯ್ಯ ಅವರ ಜಯಂತ್ಯುತ್ಸವದಲ್ಲಿ ಕಾಂತರಾಜ್, ಬಿ. ಮಂಜುನಾಥ್, ಡಾ. ಸತ್ಯನಾರಾಯಣ, ಡಾ. ಸುರೇಶ್‌ಏಕಬೋಟೆ, ಡಾ. ಗುರುಪ್ರಸಾದ್, ಹರ್ಷಿಣಿ, ಗೋವಿಂದಪ್ಪ, ಎಸ್. ಸುರೇಶ್, ಎನ್.ಆರ್. ಶಶಿಧರ್, ಜಿ. ಶ್ರೀನಿವಾಸ್, ಜಿ.ಎನ್. ಚಂದ್ರಶೇಖರ್, ಶ್ರೀದೇವಿ, ಮಮತಾ, ಸಿ. ಮಲ್ಲಮ್ಮ ಇತರರು ಇದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಬಸವಣ್ಣನ ಮೆಚ್ಚುಗೆ ಪಾತ್ರರಾದವರು
ಸಮಾರಂಭದಲ್ಲಿ ಸಾಧಕರಿಗೆ ಸನ್ಮಾನ
ಉಪವಿಭಾಗಾಽಕಾರಿ ಡಾ. ಕಾಂತರಾಜ್
ಚಿತ್ರದುರ್ಗ: ಬಸವಣ್ಣನವರಿಗಿಂತಲೂ ಪೂರ್ವದಲ್ಲಿ ಭಕ್ತಿಯ ಪರಾಕಾಷ್ಠೆ ಮೆರೆದಿದ್ದ ದೇವರ ದಾಸಿಮಯ್ಯನವರು, ವಚನ ಸಾಹಿತ್ಯ ದ ಮೂಲಕ ಸಾ ಮಾಜಿಕ ಕ್ರಾಂತಿಗೆ ಭದ್ರ ಬುನಾದಿ ಹಾಕಿದ ಮಹಾ ಪುರುಷ ಎಂದು ಉಪವಿಭಾಗಾಽಕಾರಿ ಡಾ. ಕಾಂತರಾಜ್ ಹೇಳಿದರು.
ಜಿಲ್ಲಾಡಳಿತ, ಜಿಪಂ, ನಗರಸಭೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸೋಮವಾರ ಡಿಸಿ ಕಚೇರಿಯಲ್ಲಿ ಆಯೋಜಿಸಿದ್ದ ಶ್ರೀ ದೇವರ ದಾಸಿಮಯ್ಯನವರ ಜಯಂತ್ಯುತ್ಸವದಲ್ಲಿ ಮಾತನಾಡಿ, ಆಡುಭಾಷೆಯಲ್ಲಿ ಸಾಹಿತ್ಯ ರಚಿಸಿದ ಕೀರ್ತಿ ವಚನಕಾರರಿಗೆ ಸಲ್ಲುತ್ತದೆ. ಬಸವಣ್ಣನವರೇ ತಮ್ಮ ವಚನದಲ್ಲಿ ದಾಸಿಮಯ್ಯನವರ ಭಕ್ತಿಯನ್ನು ಕೊಂಡಾಡಿದ್ದಾರೆ ಎಂದು ತಿಳಿಸಿದರು.
ಲಿಂಗ ತಾರತಮ್ಯದ ವಿರುದ್ಧ ಧ್ವನಿ ಎತ್ತಿದ್ದ ದಾಸಿಮಯ್ಯನವರು, ಆತ್ಮಕ್ಕೆ ಲಿಂಗಭೇದವಿಲ್ಲ ಎಂಬ ಸಾರ್ವಕಾಲಿಕ ಸತ್ಯವನ್ನು ಜಗತ್ತಿ ಗೆ ಸಾರಿದರು. ನೇಯ್ಗೆ ಕಾಯಕದ ದಾಸಿಮಯ್ಯನವರು ಮಹಾನ್ ಪವಾಡ ಪುರುಷ. ರಾಮನಾಥ ಅಂಕಿತನಾಮದಲ್ಲಿ ದಾಸಿಮ ಯ್ಯನವರು ರಚಿಸಿದ ೧೭೬ಕ್ಕೂ ಅಽಕ ವಚನಗಳು ಸಮಾಜದ ಅಂಕು, ಡೊಂಕುಗಳನ್ನು ತಿದ್ದಲು ದಾರಿದೀಪವಾಗಿವೆ ಎಂದರು.
ಚಿತ್ರದುರ್ಗ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಕನ್ನಡ ಪ್ರಾಧ್ಯಾಪಕಿ ಡಾ.ಗಾಯತ್ರಿ ಉಪನ್ಯಾಸ ನೀಡಿ, ೧೧ನೇ ಶತ ಮಾನದಲ್ಲೇ ಸಾಮಾಜಿಕ, ಧಾರ್ಮಿಕ ಮತ್ತು ವೈಚಾರಿಕ ಕ್ರಾಂತಿಗೆ ನಾಂದಿ ಹಾಡಿದ ಶ್ರೀ ದೇವರ ದಾಸಿಮಯ್ಯ ವಚನ ಸಾಹಿತ್ಯದ ಆದ್ಯ ಪ್ರವರ್ತಕರು. ಹೆಣ್ಣಿಗೆ ಸಮಾನ ಗೌರವ ನೀಡಬೇಕೆಂಬ ಪ್ರಗತಿಪರ ಆಲೋಚನೆ ಹೊಂದಿದ್ದರು ಎಂದರು.
ಜAಟಿ ಕÊಷಿ ನಿರ್ದೇಶಕ ಬಿ. ಮಂಜುನಾಥ್ ಸಮಾಜದಲ್ಲಿ ಆವರಿಸಿರುವ ಮೌಢ್ಯ ಮತ್ತು ಅಜ್ಞಾನದ ಅಂಧಕಾರ ಹೋಗಲಾಡಿ ಸಲು ಶರಣರ ವಿಚಾರಧಾರೆಗಳು ಇಂದಿಗೂ ದಾರಿದೀಪವಾಗಿವೆ. ಇವರನ್ನು ಒಂದು ಜಾತಿಗೆ ಸೀಮಿತಗೊಳಿಸದೆ, ಇವರ ಮಾನ ವೀಯ ಮೌಲ್ಯಗಳನ್ನು ಸಮಾಜಕ್ಕೆ ತಲುಪಿಸುವ ಕೆಲಸವಾಗಬೇಕಿದೆ ಎಂದರು.
ಹಿರಿಯೂರು ಕÊಷಿ ಮತ್ತು ತೋಟಗಾರಿಕೆ ಮಹಾ ವಿದ್ಯಾಲಯದ ಡೀನ್ ಡಾ. ಸುರೇಶ್ ಏಕಬೋಟೆ ಮಾತನಾಡಿದರು. ನೇಕಾರ ಸಮಾಜದ ಸಾಂಸ್ಕೃತಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ಹಾಸ್ಟೆಲ್, ಸಮುದಾಯ ಭವನ ನಿರ್ಮಿಸಲು ಚಿತ್ರದುರ್ಗ ನಗರದಲ್ಲಿ ಸೂಕ್ತ ನಿವೇಶನ, ನೇಕಾರಿಕೆ ವÊತ್ತಿಗಾಗಿ ನಗರ ಸಮೀಪ ೨ ಎಕರೆ ಜಮೀನು, ಶ್ರೀ ದೇವರ ದಾಸಿಮಯ್ಯನವರ ಅಭಿವÊದ್ಧಿ ಪ್ರಾಽ ಕಾರ ರಚನೆ ಹಾಗೂ ಚಿತ್ರದುರ್ಗದ ವÊತ್ತ ಹಾಗೂ ರಸ್ತೆಯೊಂದಕ್ಕೆ ಶ್ರೀ ದೇವರ ದಾಸಿಮಯ್ಯನವರ ಹೆಸರಿಡುವಂತೆ ಜಿಲ್ಲಾ ನೇಕಾರರ ಒಕ್ಕೂಟದ ಅಧ್ಯಕ್ಷ ಎಂ.ಗೋವಿಂದಪ್ಪ ಜಿಲ್ಲಾಡಳಿತಕ್ಕೆ ಮನವಿ ಮಾಡಿದರು.
ಸಾಧಕರಿಗೆ ಸನ್ಮಾನ
ಸಮಾರಂಭದ ಅಂಗವಾಗಿ ಬಿ.ಮಂಜುನಾಥ್, ಸಮುದಾಯದ ಹಿರಿಯ ಡಾ. ಸತ್ಯನಾರಾಯಣ, ಡಾ. ಸುರೇಶ್ ಏಕಬೋಟೆ, ಚಳ್ಳಕೆರೆ ತಾಲೂಕು ಮೀರಸಾಬಿಹಳ್ಳಿ ಆಡಳಿತ ವೈದ್ಯಾಽಕಾರಿ ಡಾ. ಗುರುಪ್ರಸಾದ್ ಹಾಗೂ ವಿದ್ಯಾರ್ಥಿನಿ ಹರ್ಷಿಣಿ ಅವರನ್ನು ಸನ್ಮಾನಿಸಲಾಯಿತು.
ಜಿಲ್ಲಾ ನೇಕಾರರ ಒಕ್ಕೂಟದ ಕಾರ್ಯದರ್ಶಿ ಎಸ್. ಸುರೇಶ್, ಸಹ ಕಾರ್ಯದರ್ಶಿ ಎನ್.ಆರ್. ಶಶಿಧರ್, ಪಟ್ಟಸಾಲಿ ಸಮಾಜದ ಜಿ. ಶ್ರೀನಿವಾಸ್, ದೇವಾಂಗ ಸಮಾಜದ ಗೋವಿಂದಪ್ಪ, ಪದ್ಮಶಾಲಿ ಸಮಾಜದ ಜಿ.ಎನ್. ಚಂದ್ರಶೇಖರ್, ಮುಖಂಡರಾದ ಯೋಗೇಶ್, ಸುರೇಶ್, ರಘು, ಶಕಾಂಬರಿ, ಮಹಿಳಾ ಸಮಾಜದ ಶ್ರೀದೇವಿ, ಮಮತಾ, ಜಿಲ್ಲಾ ನೇಕಾರ ಮಹಿಳಾ ಒಕ್ಕೂಟದ ಅಧ್ಯಕ್ಷೆ ಸಿ. ಮಲ್ಲಮ್ಮ ಇತರರು ಇದ್ದರು. ಕೆ.ಎಚ್. ಭಾಗ್ಯಮ್ಮ ತಂಡದವರು ಗೀತಗಾಯನ ನಡೆಸಿಕೊಟ್ಟರು. ಡಾ.ನವೀನ್ ಮಸ್ಕಲ್ ನಿರೂಪಿಸಿದರು.