ಮಹಾಶಿವರಾತ್ರಿ ಪ್ರಯುಕ್ತ ಚಿತ್ರದುರ್ಗದ ಶ್ರೀ ಪಾಲ್ಗುಣೇಶ್ವರ ಸ್ವಾಮಿ ಮೂರ್ತಿಯನ್ನು ಅಮರನಾಥೇಶ್ವರ ಸ್ವಾಮಿ ಮಾದರಿಯಲ್ಲಿ ಭಾನುವಾರ ವಿಶೇಷವಾಗಿ ಅಲಂಕಾರ ಮಾಡಲಾಗಿತ್ತು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಅಮರನಾಥೇಶ್ವರ ಮಾದರಿ ವಿಶೇಷ ಅಲಂಕಾರ
ಪಾಲ್ಗುಣೇಶ್ವರ ಮತ್ತು ಆಂಜನೇಯಸ್ವಾಮಿ ಸೇವಾ ಸಮಿತಿ
ಪಾಲ್ಗುಣೇಶ್ವರ ಸನ್ನಿಽಯಲ್ಲಿ ಶಿವರಾತ್ರಿ ಪೂಜೆ
ಚಿತ್ರದುರ್ಗ: ನಗರದ ಕೋಟೆಯ ಪಶ್ಚಿಮ ಭಾಗದ ಐತಿಹಾಸಿಕ ಶ್ರೀ ಪಾಲ್ಗುಣೇಶ್ವರ ಸ್ವಾಮಿ ಸನ್ನಿಧಾನದಲ್ಲಿ ಮಹಾ ಶಿವರಾತ್ರಿ ಅಂಗವಾಗಿ ವಿಶೇಷ ಪೂಜೆಗಳು ಜರುಗಿದವು.
ಪಾಲ್ಗುಣೇಶ್ವರ ಮತ್ತು ಆಂಜನೇಯಸ್ವಾಮಿ ಸೇವಾ ಸಮಿತಿಯಿಂದ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಸ್ವಾಮಿಯ ಮೂಲ ಹಾಗೂ ನೂತನ ಮುಖಪದ್ಮವನ್ನು ವಿವಿಧ ಬಗೆಯ ಪುಷ್ಪಗಳಿಂದ ಅಮರನಾಥೇಶ್ವರ ಸ್ವಾಮಿ ಮಾದರಿಯಲ್ಲಿ ವಿಶೇಷವಾಗಿ ಅಲಂಕಾರ ಮಾಡಲಾಗಿತ್ತು.
ನೂರಾರು ಭಕ್ತರು ದೇಗುಲಕ್ಕೆ ಭೇಟಿ ನೀಡಿ ಸ್ವಾಮಿಯ ದರ್ಶನ ಪಡೆದರು. ಹಣ್ಣು, ಕಾಯಿ, ಪೂಜಾ ಸಾಮಗ್ರಿಗಳೊಂದಿಗೆ ಭಕ್ತಿ ಸಮರ್ಪಿಸಿದರು.
ಡಾ.ಮಹರ್ಷಿ ಆನಂದ ಗುರೂಜಿ ಅವರಿಂದ ಶನಿವಾರ ಸ್ವಾಮಿಯ ಮೂರ್ತಿಗೆ ಗಂಗಾ, ಸರಸ್ವತಿ, ಸಿಂಧೂ, ಯಮುನೋತ್ರಿ, ಜಮುನ, ಅಯೋಧ್ಯೆ, ಸರಯೂ ಹಾಗೂ ತಲಕಾವೇರಿಯಿಂದ ತರಿಸಿದ್ದ ಗಂಗಾಜಲ, ಶ್ರೀಗಂಧ, ತುಪ್ಪ, ಕ್ಷೀರ ಸೇರಿ ಇನ್ನಿತರೆ ವಸ್ತುಗಳಿಂದ ವಿಶೇಷ ಅಭಿಷೇಕದೊಂದಿಗೆ ಪೂಜಾ ನೆರವೇರಿಸಲಾಯಿತು.
ನಗರದ ಶಕ್ತಿದೇವತೆ ಬರಗೇರಮ್ಮ ದೇಗುಲದಿಂದ ಆರಂಭವಾದ ಮೆರವಣಿಗೆಯಲ್ಲಿ ಮಹಿಳೆಯರು ಕುಂಭ ಹೊತ್ತು ಹಳೆ ಮಾಧ್ಯಮಿಕ ಶಾಲಾ ಆವರಣದವರೆಗೆ ಸಾಗಿದರು. ನಂತರ ಧಾರ್ಮಿಕ ಕಾರ್ಯಕ್ರಮ ನಡೆಯಿತು. -É. ೯ ರಂದು ದೇಗುಲದಲ್ಲಿ ರುದ್ರಹೋಮ, ಭಕ್ತರಿಗೆ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿದೆ. ೧೫ ರವರೆಗೂ ನಿತ್ಯ ವಿಶೇಷ ಪೂಜೆಗಳು ಜರುಗಲಿವೆ.
ಸಮಿತಿ ಅಧ್ಯಕ್ಷ ಎಚ್. ರಂಗಸ್ವಾಮಿ, ಮೇಲ್ವಿಚಾರಕ ಉಸ್ತುವಾರಿ ಎಸ್‌ಬಿಎಲï ಮಲ್ಲಿಕಾರ್ಜುನ್, ಕೆಜಿಟಿ ಗುರುಮೂರ್ತಿ, ಎಸ್.ಟಿ. ನವೀನ್‌ಕುಮಾರ್, ಪದಾಽಕಾರಿಗಳಾದ ಆರ್. ಮಂಜುನಾಥ, ಆರ್. ಮೃತ್ಯುಂಜಯ, ದೇವಸ್ಥಾನದ ಅರ್ಚಕರಾದ ಸ್ವಾಮಿ, ಮುರುಗೇಶ್ ಇತರರಿದ್ದರು.