ಸ್ವದೇಶಿ ಮೇಳದ ಯಶಸ್ಸಿಗೆ ಪ್ರಾರ್ಥಿಸಿ ವಿಶೇಷ ಪೂಜೆ

ಚಿತ್ರದುರ್ಗದಲ್ಲಿ ಆಯೋಜಿಸಲಿರುವ ಮೇಳದ ಯಶಸ್ಸಿಗೆ ಪ್ರಾರ್ಥಿಸಿ ನಗರದ ಉಚ್ಚಂಗಿ ಯಲ್ಲಮ್ಮ ದೇವಾಲಯದಲ್ಲಿ ಶುಕ್ರವಾರ ಮೇಳದ ಸಂಘಟಕರು ವಿಶೇಷ ಪೂಜೆ ಸಲ್ಲಿಸಿದರು. ಎಂಎಲ್‌ಸಿ ಕೆ.ಎಸ್.ನವೀನ್,ಸೌಭಾಗ್ಯ ಬಸವರಾಜನ್,ರವೀಂದ್ರ ಇತರರು ಇದ್ದರು.
ಚಿತ್ರದುರ್ಗದಲ್ಲಿ ಆಯೋಜಿಸಲಿರುವ ಮೇಳದ ಯಶಸ್ಸಿಗೆ ಪ್ರಾರ್ಥಿಸಿ ನಗರದ ಉಚ್ಚಂಗಿ ಯಲ್ಲಮ್ಮ ದೇವಾಲಯದಲ್ಲಿ ಶುಕ್ರವಾರ ಮೇಳದ ಸಂಘಟಕರು ವಿಶೇಷ ಪೂಜೆ ಸಲ್ಲಿಸಿದರು. ಎಂಎಲ್‌ಸಿ ಕೆ.ಎಸ್.ನವೀನ್,ಸೌಭಾಗ್ಯ ಬಸವರಾಜನ್,ರವೀಂದ್ರ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • 12ರಿಂದ 16ರವರೆಗೆ ವೈವಿಧ್ಯಮಯ ಕಾರ‌್ಯಕ್ರಮಗಳು
  • ದೇಶದ ವಿವಿಧೆಡೆಯಿಂದ ಕರಕುಶಲ ಕರ್ಮಿಗಳು ಭಾಗಿ
  • 200ಕ್ಕೂ ಹೆಚ್ಚು ಮಳಿಗೆಗಳ ಸ್ಥಾಪನೆ
ಚಿತ್ರದುರ್ಗ: ನಗರದ ಮುರುಘರಾಜೇಂದ್ರ ಕೀಡಾಂಗಣದಲ್ಲಿ ನ.12ರಿಂದ 16ರವರೆಗೆ ಆಯೋಜಿಸಿರುವ ಸ್ವದೇಶಿ ಮೇಳ ಯಶಸ್ಸಿಗೆ ಪ್ರಾರ್ಥಿಸಿ ನ ಗರ ದೇವತೆ ಶ್ರೀ ಉಚ್ಚಂಗಿಯಲ್ಲಮ್ಮ ದೇವಾಲಯದಲ್ಲಿ ಶುಕ್ರವಾರ ವಿಶೇಷ ಪೂಜೆ ಸಲ್ಲಿಸಲಾಯಿತು. ಈ ವೇಳೆ ವಾತನಾಡಿದ ಮೇಳದ ಸಂಚಾಲಕಿ ಸೌಭಾಗ್ಯಬಸವರಾಜನ್, ದೇಸಿ ಸಂಸ್ಕೃತಿ, ಆಟ,ಆಹಾರ,ಕ್ರೀಡೆಯನ್ನು ನೆನಪಿಸುವ,ಸಾವಯವ ಕಷಿ,ಆಯುರ್ವೇದ ಚಿಕಿತ್ಸೆ,ದೇ ಸಿ ಉತ್ಪನ್ನಗಳ ಪ್ರದರ್ಶನ ಮತ್ತು ವಾರಾಟವನ್ನು ಒಳಗೊಂಡಿರುವ ಸ್ವಾವಲಂಬನೆ ಪರಿಕಲ್ಪನೆಯ ಈ ಮೇಳವನ್ನು ಕೋಟೆ ನಗರಿಯಲ್ಲಿ ಪ್ರಥಮ ಬಾರಿಗೆ ಹಮ್ಮಿಕೊಳ್ಳಲಾಗಿದೆ ಎಂದರು.
ಗುಡಿ ಕೈಗಾರಿಕೆಗಳ ಉತ್ಪನ್ನಗಳನ್ನು ಜನರು ಖರೀದಿಸುವ ಮೂಲಕ ಪ್ರೋತ್ಸಾಹಿಸಬೇಕಿದೆ. ಸೂಕ್ತ ವಾರುಕಟ್ಟೆ ಒದಗಿಸುವ ಉದ್ದೇಶ ದಿಂದ ಈ ಕಾರ‌್ಯಕ್ರಮ ಆಯೋಜಿಸಲಾಗಿದೆ. ಮೇಳದಲ್ಲಿ ವಿವಿಧ ದೇಸಿ ವಸ್ತುಗಳ ತಯಾರಿಕೆ,ಸ್ವದೇಶಿ ಗೋತಳಿಗಳ ಪ್ರದರ್ಶನ,ದೇಸಿ ಆಹಾರಗಳ ತಯಾರಿಕೆ ಮತ್ತು ವಾರಾಟವಿರುತ್ತದೆ. ದೇಶದ ವಿವಿಧೆಡೆಯಿಂದ ಮೇಳದಲ್ಲಿ ಭಾಗವಹಿಸಲಿರುವ ಕರಕುಶಲಕರ್ಮಿಗಳು ಸ್ಥಳೀಯರಿಗೆ ಪ್ರಾತ್ಯಕ್ಷಿಕೆ ಮೂಲಕ ತರಬೇತಿ ನೀಡಲಿದ್ದಾರೆ. ಕ್ರೀಡಾಂಗಣದಲ್ಲಿ 200ಕ್ಕೂ ಹೆಚ್ಚು ಮಳಿಗೆಗಳಿರುತ್ತವೆ ಎಂದರು. 
ಮೇಳದ ಸಂಯೋಜಕ ಕೆ.ಎಸ್.ನವೀನ್ ವಾತನಾಡಿ,12ರಂದು ಮೇಳಕ್ಕೆ ಚಾಲನೆ ದೊರೆಯಲಿದೆ. ಈ ಮೇಳ ಪ್ಲಾಸ್ಟಿಕ್ ಮುಕ್ತ ವಾಗಿ ರುತ್ತದೆ. ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ದೇಸಿ ಕ್ರೀಡಾ ಸ್ಪರ್ಧೆಗಳು ಹಾಗೂ ಸಂಜೆ ಜಾನಪದ ಕಲಾವೈಭವದಲ್ಲಿ ಅಜಿತ್‌ಬಸಾಪುರ ತಂಡದಿಂದ ಜನಪದ ಗೀತಾಗಾಯನವಿರುತ್ತದೆ. 13ರಂದು ಸಾರ್ವಜನಿಕರಿಗೆ ನಿತ್ಯ ಬಳಸುವ ವಸ್ತುಗಳ ತಯಾರಿಕಾ ಶಿಬಿರ,ಮಹಿಳಾ ಸವಾವೇಶ ನಡೆಯಲಿದೆ.ಸಂಜೆ ‘ಶ್ವೇತಕುವಾರ ಚರಿತ್ರೆ’ಯಕ್ಷಗಾನ ಪ್ರಸಂಗ. 14ರಂದು ಆಯುರ್ವೇದ ಶಿಬಿರ,ಮಧ್ಯಾಹ್ನ ಯುವ ಸವಾವೇಶ,ಸಂಜೆ ಕೊಳಲು ಸಿತಾರ್ ಜುಗಲ್‌ಬಂದಿ ಕಾರ‌್ಯಕ್ರಮವಿರುತ್ತದೆ.
15ರಂದು ತಾರಸಿ ತೋಟ ತರಬೇತಿ,ರೈತರೊಂದಿಗೆ ಸಂವಾದ. ಸಂಜೆ‘ಲಯ ಲಾವಣ್ಯ’ಕಾರ‌್ಯಕ್ರಮ. ಸಂಜೆ ತಾಳವಾದ್ಯ ಕಚೇರಿ. 16ರಂದು ಬೆಳಗ್ಗೆ ರಂಗೋಲಿ ಸ್ಪರ್ಧೆ,ಮಧ್ಯಾಹ್ನ ಪಂಚಗವ್ಯ ಚಿಕಿತ್ಸಾ ಶಿಬಿರ ನಡೆಯಲಿದೆ. ಸಂಜೆ ಗೊಂಬೆಯಾಟವಿರುತ್ತದೆ ಎಂದು ನವೀನ್ ಹೇಳಿದರು.
ಮೇಳದ ಸಂಟಕ ರವೀಂದ್ರ,ಸಹ ಸಂಚಾಲಕ ರಾದ ಸಂಪತ್ ಕುವಾರ್,ಯಶವಂತ, ಗುರು, ರೀನಾ ವೀರಭದ್ರಪ್ಪ, ಶಶಿಕಲಾ,ರವಿ ಶಂಕರ್,ಬಸಮ್ಮ,ಕೊಲ್ಲಿಲಕ್ಷ್ಮೀ,ಸೂರ್ಯನಾರಾಯಣ, ರೂಪ ಜನಾರ್ದನ್, ಚಂದ್ರಿಕಾ ಲೋಕನಾಥ್, ರಾಜೇಶ್ವರಿ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net