ಗೌರವಧನ ಹೆಚ್ಚಿಸದ ರಾಜ್ಯ ಸರ್ಕಾರದ ವಿರುದ್ಧ ಕಿಡಿ

ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಚಿತ್ರದುರ್ಗದಲ್ಲಿ ಶನಿವಾರ ಅಂಗನವಾಡಿ ಕರ‍್ಯಕರ್ತೆಯರು,ಸಹಾಕಿಯರು ಪ್ರತಿಭಟನೆ ನಡೆಸಿದ ರು.ಎಸ್.ಭಾಗ್ಯಮ್ಮ, ಎಂ.ಸಾವಿತ್ರಮ್ಮ,ಖಜಾAಚಿ ಪಿ.ಕೆ.ವಿನೋದಮ್ಮ,ಸತ್ಯಕೀರ್ತಿ, ಎನ್.ರಾಧಮ್ಮ ಇತರರು ಇದ್ದರು.
ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಚಿತ್ರದುರ್ಗದಲ್ಲಿ ಶನಿವಾರ ಅಂಗನವಾಡಿ ಕರ‍್ಯಕರ್ತೆಯರು,ಸಹಾಕಿಯರು ಪ್ರತಿಭಟನೆ ನಡೆಸಿದ ರು.ಎಸ್.ಭಾಗ್ಯಮ್ಮ, ಎಂ.ಸಾವಿತ್ರಮ್ಮ,ಖಜಾAಚಿ ಪಿ.ಕೆ.ವಿನೋದಮ್ಮ,ಸತ್ಯಕೀರ್ತಿ, ಎನ್.ರಾಧಮ್ಮ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಅಂಗನವಾಡಿ ಸಿಬ್ಬಂದಿ ಪ್ರತಿಭಟನೆ
  • ಜೀವನ ಭದ್ರತೆ ಇಲ್ಲದ್ದಕ್ಕೆ ಕಳವಳ
  • ಗೌರವಧನ
ಚಿತ್ರದುರ್ಗ: ಕೊಟ್ಟ ಮಾತಿನಂತೆ ಗೌರವಧನ ಹೆಚ್ಚಿಸದೆ, ಸಮವಸ್ತçಕ್ಕೆ ಹೆಚ್ಚುವರಿ ಸೀರೆ ಕೊಡುವುದಾಗಿ ಬಜೆಟ್‌ನಲ್ಲಿ ಘೋಷಿಸು ವ ಮೂಲಕ ಸಿಎಂ ಸಿದ್ದರಾಮಯ್ಯ ಅವರು ಅನ್ಯಾಯ ಮಾಡಿದ್ದಾರೆ ಎಂದು ಆರೋಪಿಸಿ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ನಗರದ ಡಿಸಿ ಕಚೇರಿ ಬಳಿ ಶನಿವಾರ ಪ್ರತಿಭಟಿಸಿದರು.
ವಿಧಾನಸಭಾ ಚುನಾವಣೆ ಪೂರ್ವ ೬ನೇ ಗ್ಯಾರೆಂಟಿಯಾಗಿ ಗೌರವಧನ ಹೆಚ್ಚಿಸಿದ್ದರು. ಆದರೆ, ಈಗ ಒಂದು ಹೆಚ್ಚುವರಿಯಾಗಿ ಸಮವಸ್ತçದ ಸೀರೆ ಕೊಡುವುದಾಗಿ ಹೇಳಿ ಮುಖ್ಯಮಂತ್ರಿ ಮಾತು ತಪ್ಪಿದ್ದಾರೆ. ಹತ್ತಾರ ವರ್ಷಗಳಿಂದ ಸೇವೆಯಲ್ಲಿ ನಮ್ಮ ಗೌರವ ಧನ ಹೆಚ್ಚಿಸದೆ ರಾಜ್ಯಸರ್ಕಾರ ಕಾರ್ಮಿಕ ವಿರೋಽ ನೀತಿ ಅನುಸರಿಸುತ್ತಿದೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಬಜೆಟ್‌ನಲ್ಲಿ ಹೆಚ್ಚು ಅನುದಾನ ಕಾಯ್ದಿರಿಸಿದ್ದರೂ ನಮ್ಮಗಳಿಗೆ ಯಾವುದೇ ಜೀವನ ಭದ್ರತೆ ಒದಗಿಸಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ -ೆಡರೇಷನ್ ಜಿಲ್ಲಾ ಸಮಿತಿ,ಎಐಟಿಯುಸಿ ನೇತೃತ್ವದಲ್ಲಿ ಪ್ರವಾಸಿ ಮಂದಿರದಿAದ ಮೆರವಣಿಗೆ ಮೂಲಕ ಜಿಲ್ಲಾಽಕಾರಿ ಕಚೇರಿ ಆವರಣದಲ್ಲಿ ಪ್ರತಿಭಟಿಸಿದ ಕರ‍್ಯಕರ್ತೆಯರು,
ಸಹಾಯಕಿಯರು,ಗೌರವಧನ ಹೆಚ್ಚಳ ಸಹಿತ ನಾನಾ ಬೇಡಿಕೆಗಳ ಈಡೇರಿಕೆ ಆಗ್ರಹಿಸಿ ಜಿಲ್ಲಾಽಕಾರಿಗೆ ಮನವಿ ಸಲ್ಲಿಸಿದರು.
ಎಐಟಿಯುಸಿ ಜಿಲ್ಲಾಧ್ಯಕ್ಷೆ ಎಸ್.ಭಾಗ್ಯ ಮ್ಮ, ಪ್ರಧಾನ ಕರ‍್ಯದರ್ಶಿ ಎಂ.ಸಾವಿತ್ರಮ್ಮ, ಖಜಾಂಚಿ ಪಿ.ಕೆ.ವಿನೋದಮ್ಮ,ಸತ್ಯಕೀರ್ತಿ, ಎನ್. ರಾಧಮ್ಮ,ಸುಮಿತ್ರಾಬಾಯಿ, ಕೆ.ಟಿ. ಸುಜಾತಾ,ಮಹೇಶ್ವರಿ, ಗೀತಾಂಜಲಿ,ಸಿ.ತಿಪ್ಪಮ್ಮ ಇತರರು ಪ್ರತಿಭಟನೆಯಲ್ಲಿದ್ದರು.
ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಚಿತ್ರದುರ್ಗದಲ್ಲಿ ಶನಿವಾರ ಅಂಗನವಾಡಿ ಕರ‍್ಯಕರ್ತೆಯರು,ಸಹಾಕಿಯರು ಪ್ರತಿಭಟನೆ ನಡೆಸಿದ ರು.ಎಸ್.ಭಾಗ್ಯಮ್ಮ, ಎಂ.ಸಾವಿತ್ರಮ್ಮ,ಖಜಾAಚಿ ಪಿ.ಕೆ.ವಿನೋದಮ್ಮ,ಸತ್ಯಕೀರ್ತಿ, ಎನ್.ರಾಧಮ್ಮ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net