Panchayat: ಸಮಸ್ಯೆಗಳಿಗೆ ಪಂಚಾಯಿತಿ ಮಟ್ಟದಲ್ಲೇ ಸಿಗಲಿ ಪರಿಹಾರ

panchayat: ಚಳ್ಳಕೆರೆ ತಾಲೂಕಿನ ಸಾಣೀಕೆರೆ ಗ್ರಾಮದಲ್ಲಿ ನೂತನ ಗ್ರಾಪಂ ಕಚೇರಿ, ಗ್ರಂಥಾಲಯ ಕಟ್ಟಡಗಳನ್ನು ಸೋಮವಾರ ಶಾಸಕ ಟಿ. ರಘುಮೂರ್ತಿ ಉದ್ಘಾಟಿಸಿದರು.
panchayat: ಚಳ್ಳಕೆರೆ ತಾಲೂಕಿನ ಸಾಣೀಕೆರೆ ಗ್ರಾಮದಲ್ಲಿ ನೂತನ ಗ್ರಾಪಂ ಕಚೇರಿ, ಗ್ರಂಥಾಲಯ ಕಟ್ಟಡಗಳನ್ನು ಸೋಮವಾರ ಶಾಸಕ ಟಿ. ರಘುಮೂರ್ತಿ ಉದ್ಘಾಟಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ಟಿ. ರಘುಮೂರ್ತಿ ಹೇಳಿಕೆ
  • ಪಂಚಾಯಿತಿ ನೂತನ ಕಟ್ಟಡ ಉದ್ಘಾಟನೆ
  • ಚುನಾವಣೆಯಲ್ಲಿ ಮಾತ್ರ ಪಕ್ಷ ಮತ್ತು ರಾಜಕೀಯ ಭಾವನೆ ಇರಲಿ

ಚಳ್ಳಕೆರೆ: ಗ್ರಾಮೀಣ ಮೂಲಸೌಕರ್ಯಗಳ ಸಮಸ್ಯೆಗಳಿಗೆ ಗ್ರಾಪಂಹಂತದಲ್ಲೇ ಪರಿಹಾರ ದೊರಕಿಸಿಕೊಡುವನಿಟ್ಟಿನಲ್ಲಿ ಸ್ಥಳೀಯ ಜನಪ್ರತಿನಿಧಿಗಳು ಕೆಲಸ ಮಾಡಬೇಕುಎಂದು ಶಾಸಕ ಟಿ.ರಘುಮೂರ್ತಿಹೇಳಿದರು.

ತಾಲೂಕಿನ ಸಾಣೀಕೆರೆಗ್ರಾಮದಲ್ಲಿ 60ಲಕ್ಷ ರೂ.ವೆಚ್ಚದಲ್ಲಿನಿರ್ಮಿಸಿರುವ ಪಂಚಾಯತಿ ಕಟ್ಟಡ,ಸ್ಥಳೀಯಪ್ರಕಾಶ ಸ್ಪಾಂಜ ಕಂಪನಿಯ 15ಲಕ್ಷ ರೂ.ಮೊತ್ತದಲ್ಲಿನಿರ್ಮಿಸಿದ ಗ್ರಂಥಾಲಯ ಕಟ್ಟಡವನ್ನುಸೋಮವಾರ ಲೋಕಾರ್ಪಣೆಗೊಳಿಸಿಮಾತನಾಡಿದರು.

ಚುನಾವಣೆಯಲ್ಲಿಮಾತ್ರ ಪಕ್ಷ ಮತ್ತು ರಾಜಕೀಯ ಭಾವನೆಇರಲಿ.ಅಧಿಕಾರಾವಧಿಯಲ್ಲಿಸಾರ್ವಜನಿಕರ ಹಿತದೃಷ್ಟಿಯಿಂದಪಕ್ಷಭೇದ ಮರೆತು ಕೆಲಸ ಮಾಡಬೇಕು.ಕೆಲಪಂಚಾಯಿತಿಗಳಲ್ಲಿ ಹೊಂದಾಣಿಕೆಕೊರತೆಯಿಂದ ಕಟ್ಟಡಗಳು ಪೂರ್ಣಗೊಂಡಿಲ್ಲಎಂದು ತಿಳಿಸಿದರು.

ನೂತನ ಕಟ್ಟಡಗಳನ್ನುಸೂಕ್ತ ನಿರ್ವಹಣೆಯೊಂದಿಗೆ ಸದುಪಯೋಗಮಾಡಿಕೊಳ್ಳಬೇಕು.ತುರುವನೂರುಹೋಬಳಿಯ ಆರು ಪಂಚಾಯಿತಿಗಳ ಗ್ರಾಮಗಳುಸೇರಿ ಕ್ಷೇತ್ರದ 262ಹಳ್ಳಿಗಳಿಗೆತುಂಗಭದ್ರಾ ಹಿನ್ನೀರು ಯೋಜನೆಯಡಿಮನೆ ಮನೆಗೆ ಕುಡಿವ ನೀರು ಸರಬರಾಜುಯೋಜನೆ ಕಾಮಗಾರಿ ಕೆಲವೇ ದಿನಗಳಲ್ಲಿಪೂರ್ಣಗೊಳ್ಳಲಿದೆ ಎಂದರು.

ಇನ್ನೆರಡು ಚೆಕ್‌ಡ್ಯಾಂ ನಿರ್ಮಾಣಕ್ಕೆ ಮಂಜೂರಾತಿ

ರೈತರ ಕೃಷಿ ಚಟುವಟಿಕೆ,ಅಂತರ್ಜಲಅಭಿವೃದ್ಧಿಗೆ ವೇದಾವತಿ ನದಿಗೆಐದು ಚೆಕ್‌ಡ್ಯಾಂಗಳನ್ನುನಿರ್ಮಿಸಲಾಗಿದೆ.ಇದರ ಜತೆಗೆಇನ್ನೆರಡು ಚೆಕ್‌ಡ್ಯಾಂ ನಿರ್ಮಾಣಕ್ಕೆಮಂಜೂರಾತಿ ಪಡೆಯಲಾಗಿದೆ.ಮಳೆ ಕೊರತೆಯಿಂದಶೇಂಗಾ, ತೊಗರಿಬೆಳೆ ನಷ್ಟವಾಗಿರುವ ಬಗ್ಗೆಸರ್ಕಾರಕ್ಕೆ ವರದಿ ಸಹಿತ ಮನವರಿಕೆಮಾಡಲಾಗಿದೆ.ಬೆಳೆ ವಿಮೆಮತ್ತು ಪರಿಹಾರ ರೈತರಿಗೆ ಸಿಗಲಿದೆಎಂದು ಭರವಸೆ ನೀಡಿದರು.

ತಾಲೂಕು ಗ್ಯಾರಂಟಿಸಮಿತಿ ಅಧ್ಯಕ್ಷ ಗದ್ದಿಗೆತಿಪ್ಪೇಸ್ವಾಮಿ ಮಾತನಾಡಿ,ಚಳ್ಳಕೆರೆತಾಲೂಕು ಜಿಲ್ಲಾ ಕೇಂದ್ರವಾಗುವರೀತಿಯಲ್ಲಿ ಅಭಿವೃದ್ಧಿ ಕಂಡಿದೆ.ಹಿರಿಯೂರು,ಚಳ್ಳಕೆರೆಮತ್ತು ಮೊಳಕಾಲ್ಮೂರು ಆಡಳಿತದಅನುಕೂಲಕ್ಕೆ ಚಳ್ಳಕೆರೆಯನ್ನುಜಿಲ್ಲಾ ಕೇಂದ್ರವಾಗಿ ಮಾಡಲುಶಾಸಕರು ಸರ್ಕಾರದ ಹಂತದಲ್ಲಿ ಪ್ರಯತ್ನ ಮಾಡಬೇಕು ಎಂದು ಹೇಳಿದರು.

ತಾಪಂ ಇಒ ಎಚ್.ಶಶಿಧರ್ಮಾತನಾಡಿ,ಇಲ್ಲಿನಡಿಆರ್‌ಡಿಒ ವಿಜ್ಞಾನ ಸಂಸ್ಥೆಗಳಸ್ಥಾಪನೆಯಿಂದ ಚಳ್ಳಕೆರೆಗೆಅಂತಾರಾಷ್ಟ್ರೀಯ ಮನ್ನಣೆ ಸಿಕ್ಕಿದೆ.ರಾಜ್ಯದಲ್ಲಿಎರಡನೇ ಅಂತಾರಾಷ್ಟ್ರೀಯ ವಿಮಾನನಿಲ್ದಾಣವನ್ನು ಚಳ್ಳಕೆರೆಕ್ಷೇತ್ರದಲ್ಲಿ ಸ್ಥಾಪಿಸುವಂತೆಶಾಸಕರು ಪ್ರಯತ್ನ ನಡೆಸಿದ್ದಾರೆ.ಇದು ಸಾಧ್ಯವಾದರೆಇನ್ನಷ್ಟು ಅಭಿವೃದ್ಧಿ ಕಾಣಲಿದೆ.ಈಗಾಗಲೇಪಂಚಾಯಿತಿ ಹಂತದಿಂದಲೇ ಮೂಲಸೌಕರ್ಯಗಳನ್ನು ಒದಗಿಸಲಾಗಿದೆಎಂದು ತಿಳಿಸಿದರು.

ಮನವಿ:

ಗ್ರಾಮದಮಾರ್ಗವಾಗಿ ಹೆದ್ದಾರಿ ಹಾದುಹೋಗಿದ್ದರೂಬಸ್‌ಗಳನ್ನು ನಿಲುಗಡೆ ಮಾಡುತ್ತಿಲ್ಲ.ಎಸ್ಸಿಕಾಲನಿಯಲ್ಲಿ ಚರಂಡಿ ನಿರ್ಮಾಣಮಾಡುತ್ತಿಲ್ಲ ಎಂದು ಗ್ರಾಮಸ್ಥರುಶಾಸಕರಿಗೆ ಮನವಿ ಸಲ್ಲಿಸಿದರು.

ಗ್ರಾಪಂ ಅಧ್ಯಕ್ಷಡಿ. ನಾಗರಾಜ್,ಉಪಾಧ್ಯಕ್ಷೆಟಿ. ಶಶಿಕಲಾ,ಸದಸ್ಯರಾದಆರ್. ರಂಜಿತಾ,ಶ್ರುತಿ,ಕರಿಯಮ್ಮ,ಎಂ.ಅಂಜು,ಎಸ್.ತಿಪ್ಪೇರುದ್ರಪ್ಪ,ಜಿ.ರುದ್ರಮ್ಮ,.ಸುಮಾ,ಎಸ್.ವೀರಣ್ಣ,ವಿನೋದಮ್ಮ,ಹನುಮಕ್ಕ,ತಹಸೀಲ್ದಾರ್ರೇಹಾನ್ ಪಾಷಾ,ಜಿಪಂ ಉಪಕಾರ್ಯದರ್ಶಿ ರಂಗಸ್ವಾಮಿ,ಜಿಪಂನಾಮನಿರ್ದೇಶನ ಸದಸ್ಯ ತಬಲರಂಗಸ್ವಾಮಿ,ಪಿಡಿಒ ಜಿ.ದೇವರಾಜ್,ಕೆ.ಸಿದ್ದೇಶ್‌ಗೌಡ,ಎಂ.ಚರಣ್,ಟಿ.ಎಸ್,ಶಿವಣ್ಣ,ಎಂ.ಮೀನಾಕ್ಷಿ,ಪಿ.ಆರ್.ರಘುನಾಥ್ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net