ಚಿತ್ರದುರ್ಗದಲ್ಲಿ ಶುಕ್ರವಾರ ಆಯೋಜಿಸಿದ್ದ ಮಾನವ ಬಂಧುತ್ವ ವೇದಿಕೆಯ ಚಿತ್ರದುರ್ಗ ತಾಲೂಕು ಗ್ರಾಮ ಸಂಚಾಲಕರ ಕಾರ್ಯಾಗಾರದಲ್ಲಿ ಎ.ಬಿ. ರಾಮಚಂದ್ರಪ್ಪ ಮಾತನಾಡಿದರು. ಕಸವನಹಳ್ಳಿ ಶಿವಣ್ಣ, ಪಿ. ಬಸವರಾಜ ಬಚ್ಚಬೋರನ ಹಟ್ಟಿ, ಬೈಲಮ್ಮ, ಕಣ್ಮೇಶ್, ಅನ್ನಪೂರ್ಣಮ್ಮ ಇದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಮಾನವ ಬಂಧುತ್ವ ವೇದಿಕೆ ರಾಜ್ಯ ಸಂಚಾಲಕ ಎ.ಬಿ. ರಾಮಚಂದ್ರಪ್ಪ ಅನಿಸಿಕೆ
ಗ್ರಾಮ ಸಂಚಾಲಕರ ಕಾರ್ಯಾಗಾರ
ಸಚಿವ ಸತೀಶ್ ಜಾರಕಿಹೊಳಿ
ಚಿತ್ರದುರ್ಗ: ಮಾನವ ಬಂಧುತ್ವ ವೇದಿಕೆ ಅವಕಾಶಗಳಿಂದ ವಂಚಿತರ ಧ್ವನಿಯಾಗುವ ಮೂಲಕ ಅವರ ಶಕ್ತಿಯಾಗಿ ಹೊರ ಹೊಮ್ಮಬೇಕಿದೆ ಎಂದು ವೇದಿಕೆ ರಾಜ್ಯ ಸಂಚಾಲಕ ಎ.ಬಿ.ರಾಮಚಂದ್ರಪ್ಪ ಹೇಳಿದರು.
ನಗರದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ವೇದಿಕೆಯ ಚಿತ್ರದುರ್ಗ ತಾಲೂಕು ಗ್ರಾ ಮ ಸಂಚಾಲಕರ ಕಾರ್ಯಾಗಾರದಲ್ಲಿ ಮಾತನಾಡಿದರು.
ಅವಕಾಶ ವಂಚಿತರ ಪರ ಹೋರಾಡಿ ಅವರಲ್ಲಿ ಆತ್ಮವಿಶ್ವಾಸ ತುಂಬಲು ಕಾರ್ಯಕರ್ತರು ಸನ್ನದ್ಧರಾಗಬೇಕು. ತಮ್ಮ ಈ ಸಾ ಮಾಜಿಕ ಹೋರಾಟದ ಬೆನ್ನಿಗೆ ವೇದಿಕೆ ಸಂಸ್ಥಾಪಕರು, ಸಚಿವರೂ ಆದ ಸತೀಶ್ ಜಾರಕಿಹೊಳಿ ಅವರು ಸದಾ ಇರುತ್ತಾರೆ.
ಗ್ರಾಮ ಮಟ್ಟದಲ್ಲಿ ಸಂಘಟನೆ ಬಲಪಡಿಸುವ ಮೂಲಕ ಸಾಮಾಜಿಕ ಬದಲಾವಣೆಗೆ ನಾವೆಲ್ಲರೂ ಶ್ರಮಿಸಬೇಕಿದೆ ಎಂದು ಸಲಹೆ ನೀಡಿದರು.
ಪರಿವರ್ತನ ಚಿಂತಕ ಕಸವನಳ್ಳಿ ಶಿವಣ್ಣ ಮಾತನಾಡಿ, ಜಾತಿಯತೆ ಹೋಗಲಾಡಿಸಿದರೆ ಸಮ ಸಮಾಜದ ನಿರ್ಮಾಣ ಸಾಧ್ಯ ವಾಗಲಿದೆ ಎಂದರು.
ವಿಮುಕ್ತಿ ವಿದ್ಯಾಸಂಸ್ಥೆಯ (ದಮ್ಮ) ಮುಖ್ಯಸ್ಥೆ ಅನ್ನಪೂರ್ಣ ವಿದ್ಯಾಸಾಗರ್ ಮಾತನಾಡಿ, ಬುದ್ಧನ ವಿಚಾರಧಾರೆ, ಅಂಬೇಡ್ಕರ್ ಅವರ ಸಂವಿಧಾನ ದೇಶದ ಎಲ್ಲರಿಗೂ ಮುಖ್ಯ. ಬಿಜೆಪಿ ಸರ್ಕಾರ ಹೊಸದಾಗಿ ಜಾರಿಗೊಳಿಸಿರುವ ಎಸ್‌ಐಆರ್ ಮುಸ್ಲಿಮರು, ದಲಿ ತರ ಮತದಾನದ ಹಕ್ಕನ್ನು ಕಸಿದುಕೊಳ್ಳುತ್ತಿದೆ.
ಇದರ ವಿರುದ್ಧ ಪ್ರತಿ ಗ್ರಾಮದಲ್ಲೂ ಜಾಗೃತಿ ಮೂಡಿಸುವ ಮೂಲಕ ಅರ್ಹರು ಮತಪಟ್ಟಿಯಿಂದ ಹೊರಗುಳಿಯದಂತೆ ನೋಡಿ ಕೊಳ್ಳಬೇಕಿದೆ ಎಂದು ಸಲಹೆ ನೀಡಿದರು.
ವೇದಿಕೆ ಜಿ¯್ಲÁ ಸಂಚಾಲಕಿ ಬೈಲಮ್ಮ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ಇಂದಿಗೂ ಜಾತಿ ತಾರತಮ್ಯ ಜೀವಂತವಾಗಿದೆ. ಈ ವ್ಯವಸ್ಥೆಯಿಂದ ಪ್ರತಿಯೊಬ್ಬರೂ ಹೊರಬರಬೇಕಿದೆ. ಇನ್ನೂ ಮಾದಕ ವಸ್ತುಗಳ ಬಳಕೆ ಯುವಸಮೂಹಕ್ಕೆ ಮಾರಕವಾಗಿ ದಿಕ್ಕು ತಪ್ಪಿಸುತ್ತಿದೆ. ಪಾಲಕರನ್ನು ಅನಾಥಾಶ್ರಮಕ್ಕೆ ಸೇರಿಸುತ್ತಿz್ದÁರೆ. ಈ ಕುರಿತು ಅರಿವು ಮೂಡಿಸಬೇಕಿದೆ ಎಂದರು.
ವೇದಿಕೆ ಜಿಲ್ಲಾ ಸಂಚಾಲಕ ಪಿ. ಬಸವರಾಜ ಬಚ್ಚಬೋರನಹಟ್ಟಿ, ಚಿತ್ರಕಲಾ ಪರಿಷತ್ ಸದಸ್ಯ ಕಣ್ಮೇಶ್, ಪ್ರತಿಭಾ ಅಕಾಡೆಮಿ ಉಸ್ತುವಾರಿ ಪ್ರಕಾಶ್ ರಾಮಾನಾಯ್ಕ್, ಪ್ರಭಾವತಿ, ಆಯಿಷಾ, ಪುರುಷೋತ್ತಮ ತೋರಣಗಟ್ಟೆ, ಮಾರುತೇಶ್, ಶಶಿಧರ್, ಮಾರುತಿ, ಪಾಂಡು, ಅಶೋಕ್ ಇತರರಿದ್ದರು.