ಚಿತ್ರದುರ್ಗದಲ್ಲಿ ಮಂಗಳವಾರ ಆಯೋಜಿಸಿದ್ದ ಇನೊ ಮಂಥನ್ ಕಾರ್ಯಕ್ರಮದಲ್ಲಿ ಪ್ರೊ.ಎಚ್. ಕೇಶವ್, ಶ್ರವಣಗುಡುತ್ತೂರು,ಪ್ರೊ.ಜೆ. ಕರಿಯಪ್ಪ ಮಾಳಿಗೆ, ಪ್ರೊ. ತಾರಿಣಿ ಶುಭದಾಯಿನಿ, ಪ್ರೊ.ಕೆ. ಲೀಲಾವತಿ, ಪ್ರೊ.ಬಿ. ಸುರೇಶ್, ಪ್ರೊ. ಶಕುಂತಲಾ, ಪ್ರೊ. ರೇವಣಸಿದ್ದಪ್ಪ, ಪ್ರೊ. ಮುರಳೀಧರ ಇದ್ದರು.
ಚಿತ್ರದುರ್ಗ: ಆಧುನಿಕ ಜಗತ್ತಿನಲ್ಲಿ ಉದ್ಯೋಗಕ್ಕೆ ವಿವಿಧ ವಿಷಯ ಜ್ಞಾನ, ಕೌಶಲ ಅಗತ್ಯ ಎಂದು ಕಾಲೇಜು ಶಿಕ್ಷಣ ಇಲಾಖೆ ಶಿವಮೊಗ್ಗ ಪ್ರಾದೇಶಿಕ ಜಂಟಿ ನಿರ್ದೇಶಕ ಪ್ರೊ.ಎಚ್. ಕೇಶವ್ ಹೇಳಿದರು.
ಕಾಲೇಜು ಶಿಕ್ಷಣ ಇಲಾಖೆ ಮತ್ತು ಕರ್ನಾಟಕ ವಾಣಿಜ್ಯ ಕೈಗಾರಿಕಾ ಮಹಾ ಸಂಸ್ಥೆ ಸಹಯೋಗದಲ್ಲಿ ಮಂಗಳವಾರ ನಗರದ ಸರ್ಕಾರಿ ಕಲಾ ಕಾಲೇಜಲ್ಲಿ ಆಯೋಜಿಸಿದ್ದ ಎ-ïಕೆಸಿಸಿಐ ಇನೊ ಮಂಥನ್-೨೦೨೬ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಂಸ್ಥೆ ರೂಪಿಸಿರುವ ಯೋಜನೆಯ ಸದುಪಯೋಗ ಪಡೆದು ಉತ್ತಮ ಬದುಕು ಕಟ್ಟಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಎ-ïಕೆಸಿಸಿಐ ಮುಖ್ಯಸ್ಥ ಶ್ರವಣ ಗುಡುತ್ತೂರು ಮಾತನಾಡಿ, ಪದವಿ ನಂತರ ವ್ಯಾಪಾರ ವಹಿವಾಟು ನಡೆಸುವ ಮುನ್ನ ಪೂರ್ವಾ ಲೋಚನೆ ಮಾಡಬೇಕು. ದ್ವಿತೀಯ ಪಿಯುಸಿ ಉತ್ತಿರ್ಣರಾದ ವಿದ್ಯಾರ್ಥಿಗಳು ಉದ್ಯೋಗ ಬಯಸಿ ಆನ್‌ಲೈನ್ ಮೂಲಕ ಮಂಥ ನಕ್ಕೆ ಅರ್ಜಿ ಸಲ್ಲಿಸಬಹುದು. ಆಯ್ಕೆಯಾದವರಿಗೆ ೬ ತಿಂಗಳ ಉಚಿತ ತರಬೇತಿ ನೀಡಲಾಗುವುದು. ತರಬೇತಿಯಲ್ಲಿ ಸರ್ಕಾರಿ ಕಾಲೇಜು ವಿದ್ಯಾರ್ಥಿಗಳಿಗೆ ಆದ್ಯತೆ ನೀಡಲಾಗುವುದು ಎಂದರು.
ಪ್ರಾಚಾರ್ಯ ಪ್ರೊ.ಜೆ. ಕರಿಯಪ್ಪ ಮಾಳಿಗೆ ಮಾತನಾಡಿದರು. ಪ್ರೊ. ತಾರಿಣಿ ಶುಭದಾಯಿನಿ, ಪ್ರೊ.ಕೆ. ಲೀಲಾವತಿ,ಪ್ರೊ.ಬಿ. ಸುರೇಶ್, ಪ್ರೊ. ಶಕುಂತಲಾ, ಪ್ರೊ. ರೇವಣಸಿದ್ದಪ್ಪ, ಪ್ರೊ. ಮುರಳೀಧರ ಇದ್ದರು.