ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಎಸ್‌ಜೆಎಂ ವಿಶ್ವವಿದ್ಯಾಲಯ ಕಾರ್ಯಾರಂಭ

 ಚಿತ್ರದುರ್ಗದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಶ್ರೀ ಮುರುಘಾಮಠದ ಆಡಳಿತ ಮಂಡಳಿ ಅಧ್ಯಕ್ಷ ಶಿವಯೋಗಿ ಸಿ. ಕಳಸದ, ಸದಸ್ಯ ಡಾ. ಬಸವಕುಮಾರ ಸ್ವಾಮೀಜಿ, ಎಸ್‌ಜೆಎಂ ವಿವಿ ಕುಲಪತಿ ಪ್ರೊ.ಕೆ.ಬಿ.ಗುಡಸಿ ಇದ್ದರು.
ಚಿತ್ರದುರ್ಗದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಶ್ರೀ ಮುರುಘಾಮಠದ ಆಡಳಿತ ಮಂಡಳಿ ಅಧ್ಯಕ್ಷ ಶಿವಯೋಗಿ ಸಿ. ಕಳಸದ, ಸದಸ್ಯ ಡಾ. ಬಸವಕುಮಾರ ಸ್ವಾಮೀಜಿ, ಎಸ್‌ಜೆಎಂ ವಿವಿ ಕುಲಪತಿ ಪ್ರೊ.ಕೆ.ಬಿ.ಗುಡಸಿ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ವಿವಿ ವ್ಯಾಪ್ತಿಗೆ ೭ ವೃತ್ತಿ ಪರ ಕಾಲೇಜುಗಳ ಸೇರ್ಪಡೆ
  • ಶೀಘ್ರದಲ್ಲಿ ವಿದ್ಯಾಪೀಠದ ೫೦ನೇ ವಾರ್ಷಿಕೋತ್ಸವ
  • ಮುರುಘಾಮಠದ ಆಡಳಿತ ಮಂಡಳಿ ಅಧ್ಯಕ್ಷರ ಹೇಳಿಕೆ
ಚಿತ್ರದುರ್ಗ: ನಗರದ ಶ್ರೀ ಜಗದ್ಗುರು ಮುರುಘರಾಜೇಂದ್ರ ವಿಶ್ವವಿದ್ಯಾಲಯ(ಎಸ್‌ಜೆಎಂ) ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಕಾರ್ಯಾರಂಭ ಮಾಡಲಿದೆ ಎಂದು ಎಸ್‌ಜೆಎಂ ವಿದ್ಯಾಪೀಠ ಮತ್ತು ಶ್ರೀ ಮುರುಘಾಮಠದ ಆಡಳಿತ ಮಂಡಳಿ ಅಧ್ಯಕ್ಷ ಶಿವಯೋಗಿ ಸಿ.ಕಳಸದ ಹೇಳಿದರು.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ೨೦೨೨ರಲ್ಲಿ ವಿವಿ ಸ್ಥಾಪನೆಯಾಗಿದ್ದರೂ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಕಾರ್ಯಾರಂಭಕ್ಕೆ ಸರ್ಕಾರಗಳು ಹಸಿರು ನಿಶಾನೆ ತೋರಿವೆ. ಈ ಹಿನ್ನೆಲೆಯಲ್ಲಿ ೨೦೨೬-೨೭ನೇ ಶೈಕ್ಷಣಿಕ ವರ್ಷದಿಂದ ಚಿತ್ರದುರ್ಗ ಶ್ರೀ ಬಸವೇಶ್ವರ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ, ಎಸ್‌ಜೆಎಂ ಡೆಂಟಲ್ ಕಾಲೇಜು ಮತ್ತು ಆಸ್ಪತ್ರೆ, ಎಸ್‌ಜೆಎಂಐಟಿ, ಎಸ್‌ಜೆಎಂ -Áರ್ಮಸಿ, ಎಸ್‌ಜೆಎಂ ನರ್ಸಿಂಗ್, ಬಸವೇಶ್ವರ ಅಲೈಡ್ ಹೆಲ್ತ್ ಸೈನ್ಸ್ ಹಾಗೂ ಬಸವೇಶ್ವರ ಫಿಸಿಯೋಥೆರಪಿ ಕಾಲೇಜುಗಳು ಇನ್ನು ಎಸ್‌ಜೆಎಂ ವಿವಿ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸಲಿವೆ ಎಂದು ತಿಳಿಸಿದರು.
ಈಗಾಗಲೇ ಈ ಕಾಲೇಜುಗಳ ವಿದ್ಯಾರ್ಥಿಗಳ ವಿದ್ಯಾಭ್ಯಾಸವು ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿ ಯು)ಹಾಗೂ ಬೆಂಗಳೂರಿನ ರಾಜೀವ್‌ಗಾಂಽ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದಡಿ ಪದವಿ ಮುಗಿಯುವವರೆಗೆ ಮುಂದು ವರಿಯಲಿದೆ. ಪ್ರಸಕ್ತ ವರ್ಷ ಪ್ರವೇಶ ಪಡೆಯುವ ವಿದ್ಯಾರ್ಥಿಗಳು ಎಸ್‌ಜೆಎಂ ವಿವಿ ವ್ಯಾಪ್ತಿಯಲ್ಲಿ ಅಧ್ಯಯನ ಮಾಡಲಿದ್ದಾರೆ.
ಈ ಬಾರಿಯ ಸಿಇಟಿ, ನೀಟ್ ಪರೀಕ್ಷೆಗೆ ಸಂಬAಽಸಿದ ಸೀಟ್ ಹಂಚಿಕೆ ಕೂಡ ಎಸ್‌ಜೆಎಂ ವಿವಿ ಹೆಸರಲ್ಲಿರಲಿದೆ. ವಿವಿ ಕಾರ್ಯಾ ರಂಭಕ್ಕೆ ವಿಟಿಯು, ರಾಜೀವ್‌ಗಾಂಽ ವಿವಿ ಎನ್‌ಒಸಿ ನೀಡಿವೆ. ಸಂಬAಽಸಿದ ಅಂಗ ಸಂಸ್ಥೆಗಳ ಅನುಮೋದನೆಗಳನ್ನೂ ಶೀಘ್ರ ನಿರೀಕ್ಷಿಸಲಾಗಿದೆ ಎಂದರು.
ಶ್ರೀ ಶಾಂತವೀರ ಮುರಿಗೀ ಸ್ವಾಮೀಜಿ ಆದರ್ಶಗಳಿಂದ ಪ್ರೇರಿತವಾಗಿರುವ ಎಸ್‌ಜೆಎಂ ಮುಂದಿನ ತಲೆಮಾರಿನ ಸಂಶೋಧಕ ರನ್ನು ಬೆಳೆಸಲು ಬದ್ಧವಾಗಿದೆ. ವಿವಿ ವ್ಯಾಪ್ತಿಗೆ ಒಳಪಡುವ ಎಲ್ಲ ಕಾಲೇಜುಗಳ ಪ್ರವೇಶ, ಶೈಕ್ಷಣಿಕ ಆಡಳಿತ, ಪಠ್ಯಕ್ರಮ ವಿನ್ಯಾಸ ಮತ್ತು ಪರೀಕ್ಷೆಗಳು ಎಸ್‌ಜೆಎಂ ಅಡಿ ನಡೆಯಲಿವೆ ಎದು ತಿಳಿಸಿದರು.
ಎಐ, ಆರೋಗ್ಯ, ಆವಿಷ್ಕಾರ ಮತ್ತು ಸುಸ್ಥಿರ ಇಂಜಿನಿಯರಿAಗ್ ಕ್ಷೇತ್ರಗಳಲ್ಲಿ ಶ್ರೇಷ್ಠತಾ ಕೇಂದ್ರಗಳ ಸ್ಥಾಪನೆ. ಉದ್ಯಮ ಸಂಯೋಜಿತ ಪ ಠ್ಯಕ್ರಮ, ಇಂಟರ್ನ್ಶಿಪ್, ಪ್ಲೇಸ್‌ಮೆಂಟ್ ಬೆಂಬಲ, ಸಂಶೋಧನೆ ಮೂಲ ಸೌಕರ್ಯ, ಇಆರ್‌ಪಿ, ಸ್ಮಾರ್ಟ್ ಕ್ಯಾಂಪಸ್ ಡಿಜಿಟಲ್ ವ್ಯವಸ್ಥೆಗಳ ಅನುಷ್ಠಾನಗೊಳಿಸಲಾಗುವುದು.
ಈ ವಿವಿ ಆರಂಭದಿAದಾಗಿ ಚಿತ್ರದುರ್ಗ ದೇಶ, ವಿದೇಶಗಳ ವಿದ್ಯಾರ್ಥಿಗಳನ್ನು ಸೆಳೆಯಲಿದೆ. ವೇಗದ ಶೈಕ್ಷಣಿಕ ನಿರ್ಧಾರ ಮತ್ತು ಪ ರೀಕ್ಷಾ ಪ್ರಕ್ರಿಯೆಗಳು. ಬಹುಭಾಷಾ ಕಲಿಕಾ ವಾತಾವರಣ, ಸಂಶೋಧನೆಗೆ ನೇರ ಪ್ರವೇಶ ದೊರೆಯಲಿದೆ. ವಿದೇಶಿ ವಿವಿಗಳೊಂ ದಿಗೂ ಎಂಒಯು ಮಾಡಿಕೊಳ್ಳಲಾಗುವುದು, ಇಡೀ ಕ್ಯಾಂಪಸ್‌ನಲ್ಲಿ ವೈ-ೆÊ ವ್ಯವಸ್ಥೆ ಇರುತ್ತದೆ ಎಂದು ಕಳಸದ ವಿವರಿಸಿದರು.
ವಿವಿ ಕುಲಪತಿ ಪ್ರೊ. ಕೆ.ಬಿ.ಗುಡಸಿ ಅವರು ಮಾತನಾಡಿ, ೬೪ ಎಕರೆ ವಿಸ್ತೀರ್ಣದ ಈ ಕ್ಯಾಂಪಸ್ ಅತ್ಯುತ್ತಮ ಶೈಕ್ಷಣಿಕ ಕೇಂದ್ರ ವಾಗಲಿದೆ ಎಂದರು.
ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯ ಡಾ.ಬಸವಕುಮಾರ ಸ್ವಾಮೀಜಿ ಮಾತನಾಡಿ, ಈ ವಿವಿ ಚಿತ್ರದುರ್ಗದ ಪ್ರಥಮ ಖಾಸಗಿ ವಿವಿಯಾಗಿದೆ ಎಂದರು. ವೃತ್ತಿ ಪರ ಕಾಲೇಜುಗಳ ನಾನಾ ಮುಖ್ಯಸ್ಥರು ಇದ್ದರು.
ಬಸವೇಶ್ವರ ಆಸ್ಪತ್ರೆ ಸುಧಾರಣೆ
ಬಸವೇಶ್ವರ ಆಸ್ಪತ್ರೆ ಸುಧಾರಣೆಗೆ ಶೀಘ್ರದಲ್ಲೇ ಅಗತ್ಯ ಕ್ರಮಗಳು ಜಾರಿಗೊಳಿಸಿ, ಈ ಭಾಗದ ಜನರಿಗೆ ಅತ್ಯುತ್ತಮ ಆರೋಗ್ಯ ಸೇವೆ ಒ ದಗಿಸುವುದಾಗಿ ಶಿವಯೋಗಿ ಸಿ. ಕಳಸದ ಹೇಳಿದರು.
ವಿದ್ಯಾಪೀಠದ ಸುವರ್ಣ ಮಹೋತ್ಸವ, ೮ ಕೋಟಿ ರೂ.ವೆಚ್ಚದ ನರ್ಸಿಂಗ್ ಕಾಲೇಜು ನೂತನ ಕಟ್ಟಡ ಹಾಗೂ ವಿಸ್ತರಿತ ಡೆಂಟಲ್ ಕಾಲೇಜು ಕಟ್ಟಡಕ್ಕೆ ಶೀಘ್ರ ಭೂಮಿ ಪೂಜೆ ನೆರವೇರಲಿದೆ. ಕಳೆದ ೩ ವರ್ಷಗಳಿಂದ ಸ್ಥಗಿತ ಗೊಂಡಿದ್ದ ಬಸವ ಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ ಈ ವರ್ಷ ಜರುಗಲಿದೆ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net